ಪ್ಯಾರಿಸ್: ಭಾರತದ ನಿಶಾಂತ್ ದೇವ್ ಶನಿವಾರ ನಡೆದ 71 ಕೆ.ಜಿ ವಿಭಾಗದ ಪುರುಷರ ಬಾಕ್ಸಿಂಗ್ ಕ್ವಾರ್ಟರ್‌ಫೈನಲ್‌ನಲ್ಲಿ ಸೋತರು. ಇದರಿಂದಾಗಿ ಭಾರತಕ್ಕೆ ಮತ್ತೊಂದು ಪದಕ ಕೈತಪ್ಪಿತು.
23 ವರ್ಷದ ನಿಶಾಂತ್ ಅವರು 1–4ರಿಂದ ಮೆಕ್ಸಿಕೊದ ಮಾರ್ಕೊ ವೆರ್ಡೆ ವಿರುದ್ಧ ಸೋತರು. ಈ ಒಲಿಂಪಿಕ್ಸ್‌ನಲ್ಲಿ ಸೋತು ನಿರ್ಗಮಿಸಿದ ಐದನೇ ಬಾಕ್ಸರ್ ನಿಶಾಂತ್.
ಮೆಕ್ಸಿಕೊದ ಬಾಕ್ಸರ್ ಅವರ ಪಂಚ್‌ಗಳು ನಿಖರವಾಗಿದ್ದವು. ಇದರಿಂದಾಗಿ ಆರಂಭದಿಂದಲೂ ಅವರು ಮೇಲುಗೈ ಸಾಧಿಸಿದರು.
ನಿಶಾಂತ್ ಅವರು ಎಂಟರ ಘಟ್ಟದಲ್ಲಿ ಗೆದ್ದು ಸೆಮಿಫೈನಲ್ ಪ್ರವೇಶಿಸಿದ್ದರೆ ಭಾರತಕ್ಕೆ ಪದಕ ಲಭಿಸುತ್ತಿತ್ತು. ಇದೀಗ ಬಾಕ್ಸಿಂಗ್ ಅಂಕಣದಲ್ಲಿ ಮಹಿಳೆಯರ ವಿಭಾಗದಲ್ಲಿ ಲವ್ಲೀನಾ ಬೊರ್ಗೊಹೈನ್ ಕ್ವಾರ್ಟರ್‌ಫೈನಲ್ ಆಡಲಿದ್ದಾರೆ.