ಪ್ಯಾರಿಸ್: ಒಲಿಂಪಿಕ್ ಕ್ರೀಡಾಕೂಟದ ಬ್ಯಾಡ್ಮಿಂಟನ್ ಸ್ಪರ್ಧೆಯ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಭಾರತದ ಲಕ್ಷ್ಯ ಸೇನ್ ಅವರು ಡೆನ್ಮಾರ್ಕ್‌ನ ವಿಕ್ಟರ್ ಆ್ಯಕ್ಸೆಲ್‌ಸನ್ ವಿರುದ್ಧ ಸೋಲು ಅನುಭವಿಸಿದ್ದಾರೆ.
ಹಾಲಿ ಚಾಂಪಿಯನ್ ವಿಕ್ಟರ್ ಅವರು 22–20, 21–14ರಿಂದ ಗೆದ್ದು ಬೀಗಿದರು.
ಮತ್ತೊಂದು ಸೆಮಿಫೈನಲ್‌ನಲ್ಲಿ ಥೈಲ್ಯಾಂಡ್‌ನ ವಿಟಿದ್ಸರ್ನ್ ಕುನ್ಲಾವತ್ ಅವರು ಮಲೇಷಿಯಾದ ಲೀ ಜಿ ಜಿಯಾ ಎದುರು 21–14, 21–15ರಿಂದ ಗೆಲುವು ಸಾಧಿಸಿದ್ದಾರೆ.
ವಿಟಿದ್ಸರ್ನ್ ಹಾಗೂ ವಿಕ್ಟರ್ ಫೈನಲ್‌ನಲ್ಲಿ ಚಿನ್ನದ ಪದಕಕ್ಕಾಗಿ ಸೆಣಸಾಟ ನಡೆಸಲಿದ್ದಾರೆ. ಸೋತವರು ಬೆಳ್ಳಿಗೆ ಕೊರಳೊಡ್ಡಲಿದ್ದಾರೆ. ಸೆಮಿಫೈನಲ್‌ನಲ್ಲಿ ಮುಖಭಂಗ ಅನುಭವಿಸಿರುವ ಸೇನ್ ಹಾಗೂ ಲೀ ಖಂಚಿನ ಪದಕ್ಕಾಗಿ ಹೋರಾಟ ನಡೆಸಲಿದ್ದಾರೆ. ಈ ಪಂದ್ಯಗಳು ನಾಳೆ ನಡೆಯಲಿವೆ.