ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Paris Olympics ವಿರಾಮ ಪಡೆದು, ಮತ್ತೆ ಕಣಕ್ಕೆ ಇಳಿಯುವೆ: ಸಿಂಧು

Published 3 ಆಗಸ್ಟ್ 2024, 0:19 IST
Last Updated 3 ಆಗಸ್ಟ್ 2024, 0:19 IST
ಅಕ್ಷರ ಗಾತ್ರ

ಪ್ಯಾರಿಸ್‌: ಪ್ಯಾರಿಸ್‌ ಒಲಿಂಪಿಕ್ಸ್‌ನ ಬ್ಯಾಡ್ಮಿಂಟನ್‌ ಕ್ವಾರ್ಟರ್‌ ಫೈನಲ್‌ನಲ್ಲಿ ನಿರ್ಗಮಿಸಿರುವ ಭಾರತ‌ ಪಿ.ವಿ.ಸಿಂಧು ಅವರು ವೃತ್ತಿ ಜೀವನದ ಅತೀ ಕಠಿಣ ಸೋಲು ಎದುರಿಸಿ ಬಂದಿರುವುದರಿಂದ ಸ್ವಲ್ಪ ವಿರಾಮ ಪಡೆದು ಮುಂದುವರಿಯುತ್ತೇನೆ ಎಂದು ಹೇಳಿದ್ದಾರೆ.

2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಮತ್ತು 2020ರ ಟೋಕಿಯೊ ಕೂಟದಲ್ಲಿ ಕಂಚು ಗೆದ್ದಿದ್ದ ಸಿಂಧು, ಈ ಬಾರಿ ಚೀನಾದ ಹಿ ಬಿಂಗ್‌ ಜಿಯಾವೊ ವಿರುದ್ಧ ನೇರ ಗೇಮ್‌ಗಳಲ್ಲಿ ಸೋತು ಹೊರಬಿದ್ದಿದ್ದರು.

‘ನನ್ನ ಭವಿಷ್ಯದ ಕುರಿತು ಸ್ಪಷ್ಟವಾಗಿರಲು ಬಯಸುತ್ತೇನೆ. ನಾನು ಸ್ವಲ್ಪ ವಿರಾಮದ ನಂತರವೂ ಮುಂದುವರಿಯುತ್ತೇನೆ. ನನ್ನ ದೇಹ ಮತ್ತು ಮನಸ್ಸಿಗೆ ವಿರಾಮ ಬೇಕು. ಮುಂದಿನ ಪ್ರಯಾಣವನ್ನು ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಲು ನಾನು ಯೋಜನೆ ಮಾಡುತ್ತೇನೆ. ನಾನು ತುಂಬಾ ಪ್ರೀತಿಸುವ ಕ್ರೀಡೆಯಲ್ಲಿ ಸಂತೋಷವನ್ನು ಕಂಡುಕೊಳ್ಳಲು ಇಷ್ಟಪಡುತ್ತೇನೆ’ ಎಂದು ಸಿಂಧು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಈ ನಷ್ಟವು ನನ್ನ ವೃತ್ತಿಜೀವನದಲ್ಲೇ ಅತ್ಯಂತ ಕಠಿಣವಾದದ್ದಾಗಿದೆ. ಇದನ್ನು ಸ್ವೀಕರಿಸಲು ಸಮಯ ಹಿಡಿಯುತ್ತದೆ. ಆದರೆ ಬದುಕು ಮುಂದುವರಿಯುತ್ತಿದ್ದಂತೆ, ನಾನು ಅದನ್ನು ಸ್ವೀಕರಿಸುತ್ತೇನೆಂದು ನನಗೆ ಗೊತ್ತು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT