ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Paris Olympics | ನೈಜೀರಿಯಾ ಬ್ಯಾಸ್ಕೆಟ್‌ಬಾಲ್ ಸಾಧನೆ

Published : 5 ಆಗಸ್ಟ್ 2024, 1:01 IST
Last Updated : 5 ಆಗಸ್ಟ್ 2024, 1:01 IST
ಫಾಲೋ ಮಾಡಿ
Comments

ವಿಲಿನವಾ ಡಿ ಅಕಿ, ಫ್ರಾನ್ಸ್ : ನೈಜೀರಿಯಾದ ಮಹಿಳೆಯರ ತಂಡವು ಬ್ಯಾಸ್ಕೆಟ್‌ಬಾಲ್ ಕ್ವಾರ್ಟರ್‌ಫೈನಲ್‌ಗೆ ಪ್ರವೇಸಿಸಿತು.

ಒಲಿಂಪಿಕ್ಸ್ ಬ್ಯಾಸ್ಕೆಟ್‌ಬಾಲ್‌ನಲ್ಲಿ ಎಂಟರ ಘಟ್ಟ ತಲುಪಿದ ಆಫ್ರಿಕಾದ ಮೊದಲ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು.  ಭಾನುವಾರ ನೈಜೀರಿಯಾ ತಂಡವು 79-70ರಿಂದ ಕೆನಡಾ ವಿರುದ್ಧ ಜಯಿಸಿತು. 

ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್‌ಗೆ ಇಬ್ಬರು

ಬ್ರೆಜಿಲ್‌ನ ಬ್ರುನಾ ಅಲೆಕ್ಸಾಂಡ್ರೆ ಮತ್ತು ಆಸ್ಟ್ರೇಲಿಯಾದ ಮೆಲಿಸಾ ಟೇಪರ್ ಅವರು ಒಲಿಂಪಿಕ್ಸ್‌ ಮತ್ತು ಮುಂಬರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ. 

29 ವರ್ಷದ ಬ್ರುನಾ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದರು.  ಅವರಿಗೆ ಕೆಲವು ತಿಂಗಳುಗಳ ಹಿಂದೆ ಬಲಗೈ ತೋಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆಯಾಗಿತ್ತು. ಆಗ ಅವರಿಗೆ ಶಸ್ತ್ರಚಿಕಿತ್ಸೆ ಮಾಡಿ ಕೈ ಕತ್ತರಿಸಲಾಗಿತ್ತು.  ಟ್ಯಾಪರ್ ಅವರು 2016ರ ರಿಯೊ ಮತ್ತು 2020ರ ಟೋಕಿಯೊ ಒಲಿಂಪಿಕ್ ಕೂಟಗಳಲ್ಲಿ ಸ್ಪರ್ಧಿಸಿದ್ದರು. ಆದರೆ ಕೆಲವು ತಿಂಗಳುಗಳ ಹಿಂದೆ  ಅವರಿಗೆ ಪಾರ್ಶ್ವವಾಯುವಿನಿಂದಾಗಿ ಬಲಗೈ ಊನವಾಗಿತ್ತು. 

ನಿರಾಶ್ರಿತರ ತಂಡಕ್ಕೆ ಪದಕ ಖಚಿತ
ವಿಲಿಪಿಂಟ್, ಫ್ರಾನ್ಸ್: ನಿರಾಶ್ರಿತರ ತಂಡವನ್ನು ಪ್ರತಿನಿಧಿಸಿರುವ ಕ್ಯಾಮರೂನ್ ಮೂಲದ ಸಿಂದೈ ಎನ್‌ಗಾಂಬಾ ಭಾನುವಾರ ಮಹಿಳೆಯರ ಬಾಕ್ಸಿಂಗ್‌ನಲ್ಲಿ ಪದಕ ಜಯವನ್ನು ಖಚಿತಪಡಿಸಿಕೊಂಡರು. ಇದರಿಂದಾಗಿ ನಿರಾಶ್ರಿತರ ತಂಡಕ್ಕೆ ಲಭಿಸಲಿರುವ ಮೊದಲ ಪದಕ ಇದಾಗಿದೆ. ಭಾನುವಾರ ನಡೆದ ಮಿಡಲ್‌ವೇಟ್ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಸಿಂದೈ ಅವರು ಆತಿಥೇಯ ದೇಶದ ದವಿನಾ ಮೈಕೆಲ್ ವಿರುದ್ಧ ಜಯಿಸಿದರು. ಇದರೊಂದಿಗೆ ಸೆಮಿಫೈನಲ್ ಪ್ರವೇಶಿಸಿ ಕಂಚಿನ ಪದಕ ಖಚಿತಪಡಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT