ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಕೇನ್‌ ಖರೀದಿಗೆ ಯತ್ನ; ಆಸ್ಟ್ರೇಲಿಯಾ ಹಾಕಿ ಆಟಗಾರ ವಶಕ್ಕೆ

Published : 7 ಆಗಸ್ಟ್ 2024, 14:20 IST
Last Updated : 7 ಆಗಸ್ಟ್ 2024, 14:20 IST
ಫಾಲೋ ಮಾಡಿ
Comments

ಪ್ಯಾರಿಸ್‌: ಕೊಕೇನ್‌ ಖರೀದಿಗೆ ಯತ್ನಿಸಿದ ಆಸ್ಟ್ರೇಲಿಯಾ ಹಾಕಿ ತಂಡದ ಆಟಗಾರನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪ್ರಾಸಿಕ್ಯೂಟರ್‌ಗಳು ಬುಧವಾರ ತಿಳಿಸಿದ್ದಾರೆ.

ಪ್ಯಾರಿಸ್ 9ನೇ ಉಪವಿಭಾಗದ ಕಟ್ಟಡವೊಂದರ ಹೊರಗೆ ಅವರು ಮಾದಕ ವಸ್ತು ಖರೀದಿಗೆ ಮುಂದಾದಾಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೆಚ್ಚಿನ ತನಿಖೆಗಾಗಿ ಮಾದಕವಸ್ತು ನಿಗ್ರಹ ಪೊಲೀಸ್‌ ಘಟಕಕ್ಕೆ ಈ ಪ್ರಕರಣವನ್ನು ವಹಿಸಲಾಗಿದೆ ಎಂದು ಅವರು ಹೇಳಿದ್ದಾರೆ. 28 ವರ್ಷದ ಆಟಗಾರ ಖರೀದಿಗೆ ಮುಂದಾಗಿದ್ದರು. ಮಾರಾಟಕ್ಕೆ ಯತ್ನಿಸಿದ 17 ವರ್ಷದ ಬಾಲಕನನ್ನೂ ಕಸ್ಟಡಿಗೆ ಪಡೆಯಲಾಗಿದೆ.

‘ಆಟಗಾರನ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ’ ಎಂದು ಆಸ್ಟ್ರೇಲಿಯಾ ಒಲಿಂಪಿಕ್ ಸಮಿತಿ ಹೇಳಿದೆ. ಈ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದು, ಆಟಗಾರನಿಗೆ ಬೆಂಬಲ ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಪ್ರಾಸಿಕ್ಯೂಟರ್‌ಗಳಾಗಲಿ, ಆಸ್ಟ್ರೆಲಿಯಾದ ಅಧಿಕಾರಿಗಳಾಗಲಿ ಆಟಗಾರನ ಹೆಸರನ್ನು ಬಹಿರಂಗಪಡಿಸಿಲ್ಲ. ಆದರೆ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.

ಆಸ್ಟ್ರೇಲಿಯಾ ಪುರುಷರ ಮತ್ತು ಮಹಿಳಾ ಹಾಕಿ ತಂಡಗಳು ಕ್ವಾರ್ಟರ್‌ಫೈನಲ್‌ನಲ್ಲಿ ಹೊರಬಿದ್ದಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT