ಬುಕಾರೆಸ್ಟ್ (ರುಮೆನಿಯಾ): ಭಾರತದ ಗ್ರ್ಯಾಂಡ್ಮಾಸ್ಟರ್ ಆರ್.ಪ್ರಜ್ಞಾನಂದ ಅವರು ಸೂಪರ್ ಕ್ಲಾಸಿಕ್ ಚೆಸ್ ಟೂರ್ನಿಯ ಆರನೇ ಸುತ್ತಿನಲ್ಲಿ ಆತಿಥೇಯ ರುಮೇನಿಯಾದ ಡೇನಿಯಲ್ ಡೀಕ್ ಬೊಗ್ದಾನ್ ಅವರ ಜೊತೆ ಬುಧವಾರ 68 ನಡೆಗಳಲ್ಲಿ ಡ್ರಾ ಮಾಡಿಕೊಂಡರು.

ಇದೇ ವೇಳೆ ಫ್ರಾನ್ಸ್ನ ಆಟಗಾರ ಅಲಿರೇಜಾ ಫಿರೋಝ್ ಪಾದದ ನೋವಿನಿಂದ ಕೊನೆಗೂ ಟೂರ್ನಿ ಯಿಂದ ಹಿಂದೆಸರಿದರು. ಇದರಿಂದಾಗಿ, ಅಗ್ರಸ್ಥಾನದಲ್ಲಿದ್ದ ಜರ್ಮನಿಯ ವಿನ್ಸೆಂಟ್ ಕೀಮರ್ (4.5) ಅವರು ಆರನೇ ಸುತ್ತಿನಲ್ಲಿ ವಾಕ್ ಓವರ್ ಪಡೆದು ತಮ್ಮ ಮುನ್ನಡೆಯನ್ನು ಒಂದು ಪಾಯಿಂಟ್ಗೆ ಹೆಚ್ಚಿಸಿದರು.

ಹಾಲೆಂಡ್ನ ಜೋರ್ಡನ್ ವಾನ್ ಫೋರೀಸ್ಟ್, ಅನೀಶ್ ಗಿರಿ, ಅಗ್ರ ಶ್ರೇಯಾಂಕದ ಫ್ಯಾಬಿಯಾನೊ ಕರುವಾನ (ಅಮೆರಿಕ) ಮತ್ತು ಪ್ರಜ್ಞಾನಂದ ಅವರು ತಲಾ 3.5 ಪಾಯಿಂಟ್ಸ್ ಸಂಗ್ರಹಿಸಿದ್ದು ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ.

ಆರನೇ ಸುತ್ತಿನಲ್ಲಿ ಒಂದು ಪಂದ್ಯ ವಾಕ್ಓವರ್ ಕಂಡರೆ, ನಾಲ್ಕು ಪಂದ್ಯಗಳು ಡ್ರಾ ಆದವು. ಕರುವಾನ ಅವರು ಉಜ್ಬೇಕಿಸ್ತಾನದ ಜಾವೊಕಿರ್ ಸಿಂದರೋವ್ (2.5) ಜೊತೆ, ವಾನ್ ಫೋರಿಸ್ಟ್ ಅವರು ಅನಿಶ್ ಗಿರಿ ಜೊತೆ, ಫ್ರಾನ್ಸ್ನ ಮ್ಯಾಕ್ಸಿಂ ವೇಷಿಯರ್ ಲಗ್ರಾವ್ (3), ಅಮೆರಿಕದ ವೆಸ್ಲಿ ಸೊ (3) ಆರನೇ ಸ್ಥಾನ ಹಂಚಿಕೊಂಡಿದ್ದಾರೆ. ಅಲಿರೇಝಾ ಫಿರೋಝ್ಜಾ ಅವರು ಐದು ಸುತ್ತುಗಳಲ್ಲಿ 1 ಪಾಯಿಂಟ್ ಗಳಿಸಿ ಅಭಿಯಾನ ಮುಗಿಸಿದರು.

ಗ್ರ್ಯಾಂಡ್ಚೆಸ್ ಟೂರ್ನ ಭಾಗವಾಗಿ ರುವ ಈ ಟೂರ್ನಿಯಲ್ಲಿ 10 ಆಟಗಾರರು ಭಾಗವಹಿಸುತ್ತಿದ್ದಾರೆ. ಟೂರ್ನಿಯು ರೌಂಡ್ರಾಬಿನ್ ಮಾದರಿಯಲ್ಲಿ ನಡೆಯು ತ್ತಿದ್ದು 9 ಸುತ್ತುಗಳನ್ನು ಒಳಗೊಂಡಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-51-1770508796

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.