ಬುಕಾರೆಸ್ಟ್ (ರೊಮೇನಿಯಾ), (ಪಿಟಿಐ): ಭಾರತದ ಗ್ರ್ಯಾಂಡ್ಮಾಸ್ಟರ್ ಪ್ರಜ್ಞಾನಂದ ಅವರು ಸೂಪರ್ ಚೆಸ್ ಕ್ಲಾಸಿಕ್ ಟೂರ್ನಿಯಲ್ಲಿ ಮೊದಲ ಸೋಲು ಅನುಭವಿಸಿದರು. ಗುರುವಾರ ರಾತ್ರಿ ನಡೆದ ಏಳನೇ ಸುತ್ತಿನಲ್ಲಿ ಚೆನ್ನೈನ ಆಟಗಾರ ಅಮೆರಿಕದ ಫ್ಯಾಬಿಯಾನೊ ಕರುವಾನಾ ಅವರಿಗೆ 33 ನಡೆಗಳಲ್ಲಿ ಸೋತರು.

ಗ್ರ್ಯಾಂಡ್ ಚೆಸ್ ಟೂರ್ನ ಭಾಗವಾಗಿರುವ ಈ ಟೂರ್ನಿಯಲ್ಲಿ ಇನ್ನು ಎರಡು ಸುತ್ತುಗಳಷ್ಟೇ ಬಾಕಿವುಳಿದಿವೆ.

ಏಳನೇ ಸುತ್ತಿನಲ್ಲಿ ನಾಟಕೀಯ ಬೆಳವಣಿಗೆಗಳು ನಡೆದವು. ಆರನೇ ಸುತ್ತಿನವರೆಗೆ ಮುನ್ನಡೆ ಕಾಯ್ದುಕೊಂಡಿದ್ದ ಜರ್ಮನಿಯ ವಿನ್ಸೆಂಟ್ ಕೀಮರ್ ಅವರು ಗುರುವಾರ ವಿಶ್ವಕಪ್ ಚಾಂಪಿಯನ್ ಜಾವೊಖಿರ್ ಸಿಂದರೋವ್ (ಉಜ್ಬೇಕಿಸ್ತಾನ) ಅವರಿಗೆ 40 ನಡೆಗಳಲ್ಲಿ ಮಣಿದರು. ಡಚ್ ಗ್ರ್ಯಾಂಡ್ಮಾಸ್ಟರ್ ಜೋರ್ಡನ್ ವಾನ್ ಫೋರೀಸ್ಟ್ ಅವರು, ಫ್ರಾನ್ಸ್ನ ಅಲಿರೇಝಾ ಫಿರೋಜ್ಜಾ ಅವರಿಂದ ದೊರೆತ ವಾಕ್ಓವರ್ನಿಂದ ಒಂದು ಪಾಯಿಂಟ್ ಪಡೆದರು. ಹೀಗಾಗಿ ಕೀಮರ್, ಫೋರೀಸ್ಟ್ ಮತ್ತು ಕರುವಾನ– ಈ ಮೂರು ಮಂದಿ ತಲಾ 4.5 ಪಾಯಿಂಟ್ಸ್ ಸಂಗ್ರಹಿಸಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

ಫ್ರಾನ್ಸ್ನ ಮ್ಯಾಕ್ಸಿಂ ವೇಷಿಯರ್ ಲಗ್ರಾವ್, ಪ್ರಜ್ಞಾನಂದ, ಅಮೆರಿಕದ ವೆಸ್ಲಿ ಸೊ, ಸಿಂದರೋವ್ ಅವರು ತಲಾ 3.5 ಅಂಕ ಕಲೆಹಾಕಿದ್ದಾರೆ. ನೆದರ್ಲೆಂಡ್ಸ್ನ ಅನೀಶ್ ಗಿರಿ (3) ಮತ್ತು ರೊಮೇನಿಯಾದ ಡೀಕ್ ಡೇನಿಯಲ್ (2.5) ನಂತರದ ಸ್ಥಾನದಲ್ಲಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-51-775764606

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.