ಪಾಫೋಸ್: ಭಾರತದ ಗ್ರ್ಯಾಂಡ್ಮಾಸ್ಟರ್ ಆರ್.ಪ್ರಜ್ಞಾನಂದ ಅವರು ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯಲ್ಲಿ ಸೋಲಿನ ಆಘಾತ ಅನುಭವಿಸಿದರು. ಮಂಗಳವಾರ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ವಿಶ್ವಕಪ್ ಚಾಂಪಿಯನ್ ಜಾವೊಖಿರ್ ಸಿಂದರೋವ್ ಅವರು ಭಾರತದ ಆಟಗಾರನನ್ನು ಸೋಲಿಸಿದರು.

ನೆದರ್ಲೆಂಡ್ಸ್ನ ಅನಿಶ್ ಗಿರಿ ವಿರುದ್ಧ ಗೆಲುವಿನೊಡನೆ ಅಭಿಯಾನ ಆರಂಭಿಸಿದ್ದ ಪ್ರಜ್ಞಾನಂದ ಅವರು ಈಗ 1.5 ಪಾಯಿಂಟ್ಸ್ ಹೊಂದಿದ್ದಾರೆ. ಚೆನ್ನೈನ ಆಟಗಾರ 40 ನಡೆಗಳಲ್ಲಿ ಸೋತರು.

ಉಜ್ಬೇಕಿಸ್ತಾನದ ಸಿಂದರೋವ್ ಜೊತೆಗೆ, ಪ್ರಶಸ್ತಿಗೆ ಫೇವರಿಟ್ ಆಗಿರುವ ಅಮೆರಿಕದ ಫ್ಯಾಬಿಯಾನೊ ಕರುವಾನ ಕೂಡ ಗೆಲುವು ಪಡೆದರು. ಅವರು ಕೇವಲ 19 ನಡೆಗಳಲ್ಲಿ ಚೀನಾದ ವೀ ಯಿ (0.5) ಅವರನ್ನು ಸೋಲಿಸಿದರು. ಸಿಂದರೋವ್ ಮತ್ತು ಕರುವಾನ ತಲಾ 2.5 ಪಾಯಿಂಟ್ಸ್ ಸಂಗ್ರಹಿಸಿ, ಎಂಟು ಆಟಗಾರರ ಟೂರ್ನಿಯಲ್ಲಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

ಪ್ರಜ್ಞಾನಂದ ಎರಡನೇ ಸ್ಥಾನದಲ್ಲಿದ್ದಾರೆ. ದಿನದ ಇತರ ಎರಡು ಆಟಗಳು ಡ್ರಾ ಆದವು. ಜರ್ಮನಿಯ ಮಥಾಯಸ್ ಬ್ಲೂಬಾಮ್ (1) ಮತ್ತು ಆ್ಯಂಡ್ರಿ ಇಸಿಪೆಂಕೊ (1) ಅವರು ಡ್ರಾ ಮಾಡಿಕೊಂಡರೆ, ಅನಿಶ್ ಗಿರಿ (1) ಮತ್ತು ಹಿಕಾರು ನಕಾಮುರ (1) ಕೂಡ ಪಾಯಿಂಟ್ ಹಂಚಿಕೊಂಡರು.

ಮಹಿಳಾ ವಿಭಾಗದಲ್ಲಿ ಮೊದಲ ಎರಡು ದಿನ ಎಲ್ಲ ಪಂದ್ಯಗಳು ಡ್ರಾ ಆಗಿದ್ದವು. ಮೂರನೇ ದಿನ ಎರಡರಲ್ಲಿ ಸೋಲು ಗೆಲುವು ನಿರ್ಧಾರವಾಯಿತು. ಕಜಾಕಸ್ತಾನದ ಬಿಬಿಸಾರ ಅಸುನ್ಬಯೇವ (2) ಅವರು ಚೀನಾದ ಝು ಜಿನೆರ್ (1) ವಿರುದ್ಧ, ರಷ್ಯಾದ ಕ್ಯಾತರಿನಾ ಲಾಗ್ನೊ (2) ಅವರು ಚೀನಾದ ತಾನ್ ಝೊಂಗ್ಯಿ (1) ವಿರುದ್ಧ ಜಯಗಳಿಸಿದರು.

ವಿಶ್ವಕಪ್ ಚಾಂಪಿಯನ್ ದಿವ್ಯಾ ದೇಶಮುಖ್ (1.5) ಅವರು ರಷ್ಯಾದ ಅಲೆಕ್ಸಾಂಡ್ರಾ ಗೊರ್ಯಾಚ್ಕಿನಾ (1.5) ಜೊತೆ, ಆರ್.ವೈಶಾಲಿ (1.5) ಅವರು ಉಕ್ರೇನ್ನ ಅನ್ನಾ ಮುಝಿಚುಕ್ (1.5) ಸಂಗಡ ಡ್ರಾ ಮಾಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.