ಪಫೋಸ್: ಭಾರತದ ಯುವ ಚೆಸ್ ತಾರೆ ಆರ್.ಪ್ರಜ್ಞಾನಂದ ಅವರು ಭಾನುವಾರ ಆರಂಭವಾದ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯ ಮೊದಲ ಸುತ್ತಿನ ಆಟದಲ್ಲಿ ನೆದರ್ಲೆಂಡ್ಸ್ನ ಅನಿಶ್ ಗಿರಿ ಅವರನ್ನು ಸೋಲಿಸಿ ಶುಭಾರಂಭ ಮಾಡಿದರು.

ಓಪನ್ ವಿಭಾಗದಲ್ಲಿ ಕಣದಲ್ಲಿರುವ ಎಂಟು ಮಂದಿಯಲ್ಲಿ ಭಾರತದ ಏಕೈಕ ಆಟಗಾರನಾಗಿರುವ ಪ್ರಜ್ಞಾನಂದ ಅವರಿಗೆ 51ನೇ ನಡೆಯಲ್ಲಿ ಜಯ ಒಲಿಯಿತು. ಕಪ್ಪು ಕಾಯಿಗಳಲ್ಲಿ ಆಡುತ್ತಿದ್ದ ಡಚ್ ಗ್ರ್ಯಾಂಡ್ಮಾಸ್ಟರ್ ಆಟದ ಹೆಚ್ಚಿನ ಅವಧಿಯಲ್ಲಿ ಒಂದು ಕಡಿಮೆ ಕಾಲಾಳು (ಪಾನ್) ಹೊಂದಿದ್ದು, ಸಮಯದ ಒತ್ತಡಕ್ಕೂ ಸಿಲುಕಿದ್ದರು. ಸೋಮವಾರ ಎರಡನೇ ಸುತ್ತಿನಲ್ಲಿ ಚೆನ್ನೈನ ಆಟಗಾರ, ಚೀನಾದ ವೀ ಯಿ ಅವರನ್ನು ಎದುರಿಸಲಿದ್ದಾರೆ.

ವಿಶ್ವಕಪ್ ವಿಜೇತ, ಉಜ್ಬೇಕಿಸ್ತಾನದ ಆಟಗಾರ ಜಾವೊಕಿರ್ ಸಿಂದರೋವ್ ಅವರು ರಷ್ಯಾದ ಆ್ಯಂಡ್ರಿ ಇಸಿಪೆಂಕೊ ಅವರನ್ನು ಸೋಲಿಸಿದರು. ಜರ್ಮನಿಯ ಮಥಾಯಸ್ ಬ್ಲೂಬಮ್ ಮತ್ತು ವೀ ಯಿ ನಡುವಣ ಪಂದ್ಯ ಡ್ರಾ ಆಯಿತು.

ಮಹಿಳೆಯರ ವಿಭಾಗದ ಎಲ್ಲ ನಾಲ್ಕೂ ಆಟಗಳು ಡ್ರಾ ಆದವು. ವಿಶ್ವಕಪ್ ವಿಜೇತೆ ದಿವ್ಯಾ ದೇಶಮುಖ್ ಮತ್ತು ಅನ್ನಾ ಮುಝಿಚುಕ್ ಪಾಯಿಂಟ್ ಹಂಚಿಕೊಂಡರು. ಭಾರತದ ವೈಶಾಲಿ ಆರ್. ಮತ್ತು ಬಿಬಿಸಾರ ಅಸುನ್ಬಯೇವಾ (ಕಜಾಕಸ್ತಾನ) ನಡುವಣ, ಅಲೆಕ್ಸಾಂಡ್ರಾ ಗೊರ್ಯಾಚ್ಕಿನಾ (ರಷ್ಯಾ) ಮತ್ತು ಕ್ಯಾತರಿನಾ ಲಾಗ್ನೊ (ರಷ್ಯಾ) ನಡುವಣ, ಝು ಜಿನೆರ್ (ಚೀನಾ) ಮತ್ತು ತಾನ್ ಝೊಂಗ್ಇ (ಚೀನಾ) ನಡುವಣ ಆಟಗಳೂ ಡ್ರಾದಲ್ಲಿ ಅಂತ್ಯಗೊಂಡವು.

ವೈಶಾಲಿ ಎರಡನೇ ಸುತ್ತಿನಲ್ಲಿ ಸ್ವದೇಶದ ದಿವ್ಯಾ ಅವರನ್ನು ಎದುರಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.