ಇಂದೋರ್: ಪೆಟ್ರೋಲಿಯಂ ಸ್ಪೋರ್ಟ್ಸ್ ಪ್ರೊಮೋಷನ್ ಬೋರ್ಡ್ (ಪಿಎಸ್ಪಿಬಿ) ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ತಂಡಗಳು ಇಲ್ಲಿ ನಡೆಯುತ್ತಿರುವ 87ನೇ ಯುಟಿಟಿ ಸೀನಿಯರ್ ರಾಷ್ಟ್ರೀಯ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದ ಪ್ರಶಸ್ತಿ ಗೆದ್ದುಕೊಂಡವು.

ಪಿಎಸ್ಪಿಬಿ ತಂಡವು ಮಂಗಳವಾರ ನಡೆದ ಪುರುಷರ ಫೈನಲ್ ಹಣಾಹಣಿಯಲ್ಲಿ 3–0ಯಿಂದ ಪಶ್ಚಿಮ ಬಂಗಾಳ ತಂಡವನ್ನು ಸುಲಭವಾಗಿ ಮಣಿಸಿತು. ಪಿಎಸ್ಪಿಬಿ ತಂಡದ ಪಾಯಸ್ ಜೈನ್ 3–1ರಿಂದ ಅಂಕುರ್ ಭಟ್ಟಾಚಾರ್ಜೀ ವಿರುದ್ಧ; ಮಾನವ್ ಥಾಕ್ಕರ್ 3–0ಯಿಂದ ಅನಿಕೇತ್ ಸೇನ್ ಚೌಧರಿ ವಿರುದ್ಧ ಹಾಗೂ ಹರ್ಮೀತ್ ದೇಸಾಯಿ 3–2ರಿಂದ ಬೋಧಿಸತ್ವ ಚೌಧರಿ ವಿರುದ್ಧ ಜಯಗಳಿಸಿದರು.

ಎರಡು ರಿವರ್ಸ್ ಪಂದ್ಯಗಳವರೆಗೆ ಸಾಗಿದ ಮಹಿಳೆಯರ ವಿಭಾಗದ ಫೈನಲ್ನಲ್ಲಿ ಆರ್ಬಿಐ ತಂಡವು 3–2ರಿಂದ ಪಿಎಸ್ಪಿಬಿ ತಂಡದ ವಿರುದ್ಧ ರೋಚಕ ಜಯ ಸಾಧಿಸಿತು.

ಆರ್ಬಿಐ ತಂಡದ ಶ್ರೀಜಾ ಎ. 2–3ರಿಂದ ತನೀಷಾ ಕೆ. ಎದುರು ಸೋತರು. ಐಹಿಕಾ ಮುಖರ್ಜಿ 0–3ರಿಂದ ನೇರ ಸೆಟ್ಗಳಲ್ಲಿ ಯಶಸ್ವಿನಿ ಘೋರ್ಪಡೆ ಎದುರು ಪರಾಭವಗೊಂಡರು. ಬಳಿಕ, ದಿಯಾ ಚಿತಳೆ ಅವರು 3–1ರಿಂದ ಗೆದ್ದು ತಂಡಕ್ಕೆ ಚೇತರಿಕೆ ನೀಡಿದರು. ರಿವರ್ಸ್ ಪಂದ್ಯಗಳಲ್ಲಿ ಐಹಿಕಾ 3–0ಯಿಂದ ತನೀಷಾ ವಿರುದ್ಧ ಹಾಗೂ ಶ್ರೀಜಾ 3–2ರಿಂದ ಯಶಸ್ವಿನಿ ವಿರುದ್ಧ ಗೆಲುವು ಸಾಧಿಸಿದರು.

ಕರ್ನಾಟಕ ವನಿತೆಯರಿಗೆ ಕಂಚು: ಸೆಮಿಫೈನಲ್ನಲ್ಲಿ 1–3ರಿಂದ ಆರ್ಬಿಐ ತಂಡದ ಎದುರು ಪರಾಭವಗೊಂಡ ಕರ್ನಾಟಕ ಮಹಿಳಾ ತಂಡವು ಕಂಚಿನ ಪದಕ ತನ್ನದಾಗಿಸಿಕೊಂಡಿತು. ತನಿಷ್ಕಾ ಕಪಿಲ್ ಕಾಲಭೈರವ ನಾಯಕತ್ವದ ಕರ್ನಾಟಕ ತಂಡವು ಎಂಟರ ಘಟ್ಟದ ಪಂದ್ಯದಲ್ಲಿ 3–1ರಿಂದ ತಮಿಳುನಾಡು ವಿರುದ್ಧ ಗೆಲುವು ಸಾಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.