ಲಖನೌ: ಭಾರತದ ತಾರೆ ಪಿ.ವಿ. ಸಿಂಧು ಇಲ್ಲಿ ನಡೆಯುತ್ತಿರುವ ಸಯ್ಯದ್ ಮೋದಿ ಅಂತರರಾಷ್ಟ್ರೀಯ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಉದಯೋನ್ಮುಖ ಆಟಗಾರ ಲಕ್ಷ್ಯ ಸೇನ್ ಅವರು ಪುರುಷರ ಸಿಂಗಲ್ಸ್ನಲ್ಲಿ ಪ್ರಶಸ್ತಿ ಸುತ್ತಿಗೆ ಮುನ್ನಡೆದಿದ್ದಾರೆ.

ಪ್ರಸಕ್ತ ಋತುವಿನಲ್ಲಿ ಪ್ರಶಸ್ತಿಯ ಬರವನ್ನು ಎದುರಿಸುತ್ತಿರುವ ಅಗ್ರ ಶ್ರೇಯಾಂಕದ ಸಿಂಧು, ಶನಿವಾರ ನಡೆದ ಸೆಮಿಫೈನಲ್ ಹಣಾಹಣಿಯಲ್ಲಿ 21-12, 21-9ರಿಂದ ಸ್ವದೇಶದ 17 ವರ್ಷ ವಯಸ್ಸಿನ ಉನ್ನತಿ ಹೂಡಾ ಅವರನ್ನು ಹಿಮ್ಮೆಟ್ಟಿಸಿದರು.

ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಸಿಂಧು ಅವರಿಗೆ ಹೂಡಾ ಯಾವುದೇ ಹಂತದಲ್ಲಿ ಸರಿಸಾಟಿಯಾಗಲಿಲ್ಲ. ಪಂದ್ಯದುದ್ದಕ್ಕೂ ಹಿಡಿತ ಸಾಧಿಸಿದ ಮಾಜಿ ಚಾಂಪಿಯನ್ ಸಿಂಧು, ಕೇವಲ 36 ನಿಮಿಷದಲ್ಲಿ ಪಂದ್ಯ ಗೆದ್ದು ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿದರು. 18ನೇ ಕ್ರಮಾಂಕದ ಅವರು ಫೈನಲ್ನಲ್ಲಿ ಚೀನಾದ ವು ಲುವೊ ಯು ಇನ್ ಅವರನ್ನು ಎದುರಿಸಲಿದ್ದಾರೆ.

ಅಗ್ರ ಶ್ರೇಯಾಂಕದ ಸೇನ್, ನಾಲ್ಕರ ಘಟ್ಟದ ಹಣಾಹಣಿಯಲ್ಲಿ 21-8, 21-14ರಿಂದ ಜಪಾನ್ನ ಶೋಗೊ ಒಗಾವಾ ಅವರನ್ನು ಮಣಿಸಿದರು. ಸೇನ್ ಫೈನಲ್ನಲ್ಲಿ ಸಿಂಗಪುರದ ಜಿಯಾ ಹೆಂಗ್ ಜೇಸನ್ ತೆಹ್ ಅವರ ಸವಾಲನ್ನು ಎದುರಿಸಲಿದ್ದಾರೆ. ಜಿಯಾ ಹೆಂಗ್ ಅವರು ಮತ್ತೊಂದು ಸೆಮಿಫೈನಲ್ನಲ್ಲಿ 13-21, 19-21ರಿಂದ ಎರಡನೇ ಶ್ರೇಯಾಂಕದ ಪ್ರಿಯಾಂಶು ರಾಜಾವತ್ ಅವರನ್ನು ಮಣಿಸಿದರು.

ಎರಡನೇ ಶ್ರೇಯಾಂಕದ ಟ್ರೀಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್ ಜೋಡಿ ಮಹಿಳೆಯರ ಡಬಲ್ಸ್ನಲ್ಲಿ ಪ್ರಶಸ್ತಿ ಸುತ್ತು ತಲುಪಿತು. ಸೆಮಿಫೈನಲ್ನಲ್ಲಿ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ಅವರು 18–21, 21, 18, 21–10ರಿಂದ ಬೆನ್ಯಾಪಾ ಐಮ್ಸಾರ್ಡ್ ಮತ್ತು ನುಂಟಕರ್ನ್ ಐಮ್ಸಾರ್ಡ್ ಜೋಡಿಯನ್ನು ಮಣಿಸಿದರು. ಆದರೆ, ಅಗ್ರ ಶ್ರೇಯಾಂಕದ ತನಿಶಾ ಕ್ರಾಸ್ಟೊ ಮತ್ತು ಕನ್ನಡತಿ ಅಶ್ವಿನಿ ಪೊನ್ನಪ್ಪ ನಿರಾಸೆ ಅನುಭವಿಸಿದರು. ಅವರು 21-15, 16-21, 13-21ರಿಂದ ಚೀನಾದ ಬಾವೊ ಲಿ ಜಿಂಗ್ ಮತ್ತು ಲಿ ಕಿಯಾನ್ ಜೋಡಿಗೆ ಶರಣಾದರು.

ಮಿಶ್ರ ಡಬಲ್ಸ್ ಸೆಮಿಫೈನಲ್ನಲ್ಲಿ ಭಾರತದ ತನಿಶಾ ಕ್ರಾಸ್ಟೊ ಮತ್ತು ಧ್ರುವ ಕಪಿಲಾ ಜೋಡಿ ನೇರ ಗೇಮ್ಗಳಿಂದ ಗೆದ್ದು ಫೈನಲ್ ಪ್ರವೇಶಿಸಿತು. ಐದನೇ ಶ್ರೇಯಾಂಕದ ಭಾರತದ ಜೋಡಿ 21-16, 21-15ರಿಂದ ಚೀನಾದ ಝಿ ಹಾಂಗ್ ಝೌ ಮತ್ತು ಜಿಯಾ ಯಿ ಯಾಂಗ್ ಅವರನ್ನು ಮಣಿಸಿತು.

ಭಾರತದ ಆಟಗಾರರ ವ್ಯವಹಾರವಾಗಿದ್ದ ಪುರುಷರ ಡಬಲ್ಸ್ನ ಸೆಮಿಫೈನಲ್ನಲ್ಲಿ ಪೃಥ್ವಿ ಕೃಷ್ಣಮೂರ್ತಿ ರಾಯ್ ಮತ್ತು ಸಾಯಿಪ್ರತೀಕ್ ಕೆ. ಜೋಡಿಯು ಫೈನಲ್ ಪ್ರವೇಶಿಸಿತು. ಆ ಜೋಡಿಯು 21-17, 17-21, 21-16ರಿಂದ ಇಶಾನ್ ಭಟ್ನಗರ್ ಮತ್ತು ಶಂಕರ್ ಪ್ರಸಾದ್ ಉದಯಕುಮಾರ್ ಅವರನ್ನು ಸೋಲಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.