ಪಾಫೋಸ್ (ಸೈಪ್ರಸ್): ಗ್ರ್ಯಾಂಡ್ಮಾಸ್ಟರ್ ಆರ್. ವೈಶಾಲಿ ಅವರು ರಷ್ಯಾದ ಕ್ಯಾತರಿನಾ ಲಾಗ್ನೊ ಅವರನ್ನು ಬುಧವಾರ ಅಂತಿಮ ಸುತ್ತಿನಲ್ಲಿ ಸೋಲಿಸಿ ಕ್ಯಾಂಡಿಡೇಟ್ಸ್ ಟೂರ್ನಿಯ ಮಹಿಳಾ ವಿಭಾಗದ ಚಾಂಪಿಯನ್ ಆದರು. ಅವರು ಈ ಸಾಧನೆಗೆ ಪಾತ್ರರಾದ ಭಾರತದ ಮೊದಲ ಆಟಗಾರ್ತಿ.

ಟೂರ್ನಿ ಗೆಲ್ಲುವ ಮೂಲಕ ಚೆನ್ನೈನ 24 ವರ್ಷ ವಯಸ್ಸಿನ ಆಟಗಾರ್ತಿ, ವಿಶ್ವ ಚಾಂಪಿಯನ್ ಜು ವೆನ್ಜುನ್ (ಚೀನಾ) ಅವರಿಗೆ ‘ಚಾಲೆಂಜರ್’ ಆಗುವ ಅರ್ಹತೆ ಪಡೆದರು. ಈ ವರ್ಷದ ಕೊನೆಗೆ ನಡೆಯಲಿರುವ ವಿಶ್ವ ಚಾಂಪಿಯನ್ಷಿಪ್ ಹಣಾಹಣಿಗೆ ತಾಣ ಮತ್ತು ದಿನಾಂಕ ಇನ್ನಷ್ಟೇ ನಿಗದಿ ಆಗಬೇಕಾಗಿದೆ.

ಈ ಟೂರ್ನಿಯ ಓಪನ್ ವಿಭಾಗದಲ್ಲಿ ಪ್ರಶಸ್ತಿಗೆ ನೆಚ್ಚಿನ ಆಟಗಾರರಲ್ಲಿ ಒಬ್ಬರಾಗಿದ್ದ ಆರ್.ಪ್ರಜ್ಞಾನಂದ ನಿರಾಸೆ ಮೂಡಿಸಿದ್ದರು. ಆದರೆ ಅಕ್ಕ ವೈಶಾಲಿ ಆ ನಿರಾಸೆ ಮರೆಸುವಂತೆ ಆಡಿ ಮಿಂಚಿದರು. ಕೊನೆಯ ಸುತ್ತಿನಲ್ಲಿ ಲಾಗ್ನೊ (6.5) ಅವರನ್ನು 48 ನಡೆಗಳಲ್ಲಿ ಅಧಿಕಾರಯುತವಾಗಿ ಮಣಿಸಿದರು. ಆಗ ಅವರ ಬಳಿ ‘ಕ್ವೀನ್’ ಜೊತೆ ಎರಡು ‘ರೂಕ್’ಗಳು ಉಳಿದಿದರೆ, ಲಾಗ್ನೊ ಬಳಿ ‘ಕ್ವೀನ್’ ಮತ್ತು ‘ಬಿಷಪ್’ ಉಳಿದಿದ್ದವು.

ಅಂತಿಮ ಸುತ್ತಿನ ಗೆಲುವಿನ ನಂತರ 8.5 ಅಂಕ ಗಳಿಸಿದ ವೈಶಾಲಿ ಅರ್ಧ ಪಾಯಿಂಟ್ ಅಂತರದಿಂದ ಒಂಟಿಯಾಗಿ ಅಗ್ರಸ್ಥಾನ ಪಡೆದರು. ಕಜಾಕಸ್ತಾನದ ಬಿಬಿಸಾರ ಅಸೌಬಯೇವಾ (8) ಎರಡನೇ ಸ್ಥಾನ ಪಡೆದರು. ಅವರು ಅಂತಿಮ ಸುತ್ತಿನಲ್ಲಿ ಭಾರತದ ದಿವ್ಯಾ ದೇಶಮುಖ್ (5.5) ವಿರುದ್ಧ ಗೆಲುವಿಗೆ ಯತ್ನಿಸಿ ವಿಫಲರಾದರು. ಪಂದ್ಯ ಬಹುತೇಕ ಸಮಬಲದಲ್ಲಿಯೇ ಸಾಗಿತ್ತು.

ರಷ್ಯಾದ ಅಲೆಕ್ಸಾಂಡ್ರಾ ಗೊರ್ಯಾಚ್ಕಿನಾ ಮತ್ತು ಚೀನಾದಝು ಜಿನೆರ್ (ತಲಾ 7.5) ಅವರು ಮೂರನೇ ಸ್ಥಾನ ಹಂಚಿಕೊಂಡರು.ವೈಶಾಲಿ ಸಾಧನೆಯಿಂದ ವಿಶ್ವ ಚೆಸ್ನಲ್ಲಿ ಭಾರತದ ವರ್ಚಸ್ಸು ಇನ್ನಷ್ಟು ಹೆಚ್ಚಿದೆ.

ಓಪನ್ ವಿಭಾಗದಲ್ಲಿ ಉಜ್ಬೇಕಿಸ್ತಾನದ ಜಾವೊಖಿರ್ ಸಿಂದರೋವ್ (10 ಪಾಯಿಂಟ್ಸ್) ಒಂದು ಸುತ್ತು ಮೊದಲೇ ಚಾಂಪಿಯನ್ ಆಗಿದ್ದು, ಅವರು ಕೊನೆಯ ಸುತ್ತಿನಲ್ಲಿ ಚೀನಾದ ವೀ ಯಿ (7) ಜೊತೆ ಡ್ರಾ ಮಾಡಿಕೊಂಡರು.

ಪ್ರಜ್ಞಾನಂದ (6) ಕೊನೆಯ ಸುತ್ತಿನಲ್ಲಿ ಅಮೆರಿಕದ ಹಿಕಾರು ನಕಾಮುರ (6.5) ಜೊತೆ ಡ್ರಾ ಮಾಡಿಕೊಂಡರು. ಜರ್ಮನಿಯ ಮಥಾಯಸ್ ಬ್ಲೂಬಾಮ್ (7) ಅವರನ್ನು ಸೋಲಿಸಿದ ನೆದರ್ಲೆಂಡ್ಸ್ನ ಅನಿಶ್ ಗಿರಿ (8.5) ಎರಡನೇ ಸ್ಥಾನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.