ಬೆಂಗಳೂರು: ಕರ್ನಾಟಕದ ಕರ್ಣ ಕಡೂರು ಹಾಗೂ ತಮಿಳುನಾಡಿನ ಕುಮಾರ್ ರಾಮಸ್ವಾಮಿ ಜೋಡಿಯು ಚೆನ್ನೈನಲ್ಲಿ ನಡೆದ 49ನೇ ದಕ್ಷಿಣ ಭಾರತ ರ್ಯಾಲಿಯ ಮೊದಲ ಲೆಗ್ ಅಂತ್ಯಕ್ಕೆ ಮೊದಲ ಸ್ಥಾನ ಪಡೆದಿದೆ. ದಿಗ್ಗಜ ಗೌರವ್ ಗಿಲ್– ಶ್ರೀಕಾಂತ್ ಗೌಡ ಜೋಡಿ 22 ಸೆಕೆಂಡುಗಳ ಹಿನ್ನಡೆಯಿಂದ ಎರಡನೇ ಸ್ಥಾನಕ್ಕೆ ಪಡೆಯಿತು.

ಕರ್ಣ ಜೋಡಿ ಏಷ್ಯಾ ಪೆಸಿಫಿಕ್ ರ್ಯಾಲಿ ಚಾಂಪಿಯನ್ಷಿಪ್ನಲ್ಲಿ (1 ಗಂಟೆ 01 ನಿಮಿಷ 09.9 ಸೆಕೆಂಡು) ಮೊದಲನೆಯವರಾಗಿ ಗುರಿ ಮುಟ್ಟಿದರು. ಗೌರವ್ ಗಿಲ್ ಜೋಡಿ (1 ಗಂಟೆ 01 ನಿಮಿಷ 32.3 ಸೆಕೆಂಡು) ಎರಡನೆಯವರಾಗಿ ಸ್ಪರ್ಧೆ ಮುಗಿಸಿದರು.

ಭಾನುವಾರ ನಾಲ್ಕು ಸುತ್ತಿನ ರೇಸ್ಗಳು ನಡೆಯಲಿದ್ದು, ಕರ್ಣ ಜೋಡಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ.

37 ವರ್ಷ ವಯಸ್ಸಿನ ಕರ್ಣ ಅವರು ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್ಷಿಪ್ ಸ್ಪರ್ಧೆಯಲ್ಲಿಯೂ ಮುನ್ನಡೆಯಲ್ಲಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-4-1481926040

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.