ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಚರಿ ವಿಶ್ವಕಪ್‌: ರಿಕರ್ವ್‌ ಸ್ಪರ್ಧಿಗಳಿಗೆ ನಿರಾಸೆ

Published 21 ಮೇ 2023, 16:22 IST
Last Updated 21 ಮೇ 2023, 16:22 IST
ಅಕ್ಷರ ಗಾತ್ರ

ಶಾಂಘೈ (ಪಿಟಿಐ): ಭಾರತದ ಸ್ಪರ್ಧಿಗಳು ವಿಶ್ವಕಪ್‌ ಸ್ಟೇಜ್‌ 2 ಆರ್ಚರಿಯ ರಿಕರ್ವ್‌ ವಿಭಾಗದಲ್ಲಿ ಪದಕ ಗೆಲ್ಲಲು ವಿಫಲರಾದರು.

ವೈಯಕ್ತಿಕ ವಿಭಾಗದಲ್ಲಿ ಕಣದಲ್ಲಿದ್ದ ತರುಣ್‌ದೀಪ್‌ ರಾಯ್, ಅತನು ದಾಸ್‌ ಮತ್ತು ನೀರಜ್‌ ಚೌಹಾಣ್‌ ಅವರು ಭಾನುವಾರ ಮೊದಲ ಸುತ್ತಿನಲ್ಲೇ ಸೋತರು. ಧೀರಜ್‌ ಬೊಮ್ಮದೇವರ ಅಲ್ಪ ನಿರೀಕ್ಷೆ ಮೂಡಿಸಿದರೂ, ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ 0–6 ರಲ್ಲಿ ಕೊರಿಯದ ಹೊ ಜಿನ್‌ ಹೊಕೆಯ್‌ ಎದುರು ಪರಾಭವಗೊಂಡರು.

ರಿಕರ್ವ್‌ ಮಿಕ್ಸೆಡ್‌ ತಂಡ ವಿಭಾಗದಲ್ಲಿ ಧೀರಜ್‌ ಮತ್ತು ಸಿಮ್ರನ್‌ಜೀತ್‌ ಕೌರ್‌ 2–6 ರಲ್ಲಿ ಇಂಡೊನೇಷ್ಯಾದ ಎದುರಾಳಿಗಳ ಎದುರು ಸೋತರು.

ಕಾಂಪೌಂಡ್‌ ವಿಭಾಗದಲ್ಲಿ ಗೆದ್ದ ಎರಡು ಚಿನ್ನ ಮತ್ತು ಒಂದು ಬೆಳ್ಳಿಯ ನೆರವಿನಿಂದ ಭಾರತ ತಂಡ, ಎರಡನೇ ಸ್ಥಾನ ಗಳಿಸಿತು.

ರಿಕರ್ವ್‌ ವಿಭಾಗದಲ್ಲಿ ನಾಲ್ಕು ಚಿನ್ನ, ಎರಡು ಬೆಳ್ಳಿ ಮತ್ತು ಒಂದು ಕಂಚು ಸೇರಿದಂತೆ ಒಟ್ಟು 11 ಪದಕ ಜಯಿಸಿದ ಕೊರಿಯಾ, ಅಗ್ರಸ್ಥಾನ ತನ್ನದಾಗಿಸಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT