ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಓಟದ ಸ್ಪರ್ಧೆ: ಬೆಳ್ಳಿ ಪದಕ ಗೆದ್ದ ಕರ್ನಾಟಕದ ಸ್ನೇಹಾ

Published 31 ಆಗಸ್ಟ್ 2024, 21:30 IST
Last Updated 31 ಆಗಸ್ಟ್ 2024, 21:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಎಸ್‌.ಎಸ್‌.ಸ್ನೇಹಾ ಅವರು ಮಹಿಳೆಯರ 100 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಅತ್ಯಲ್ಪ ಅಂತರದಲ್ಲಿ ಚಿನ್ನದ ಪದಕ ತಪ್ಪಿಸಿಕೊಂಡರು. ಫೋಟೊ ಫಿನಿಷ್‌ನಲ್ಲಿ ಬೆಳ್ಳಿ ಪದಕ ಪಡೆದರು. 

ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್‌ನಲ್ಲಿ ರಾಜಸ್ಥಾನದ ನಿತ್ಯಾ ಗಂಧೆ ಚಿನ್ನದ ಪದಕ ಜಯಿಸಿದರು. ಆದರೆ ನಿತ್ಯಾ ಅವರಿಗಿಂತ ಸ್ನೇಹಾ 0.0002 ಸೆಕೆಂಡು ತಡವಾಗಿ ಗುರಿ ತಲುಪಿದರು. 

ಮಹಿಳೆಯರ ಜಾವೆಲಿನ್ ಥ್ರೋನಲ್ಲಿ ಒಲಿಂಪಿಯನ್ ಅನುರಾಣಿ ಅವರು ಚಿನ್ನದ ಪದಕ ಜಯಿಸಿದರು. 

ಪುರುಷರ ವಿಭಾಗದಲ್ಲಿ ಒಡಿಶಾದ ಲಾಲುಪ್ರಸಾದ್ ಬೋಯಿ ಅವರು ವೇಗದ ರಾಜನಾಗಿ ಹೊರಹೊಮ್ಮಿದರು. 

ಫಲಿತಾಂಶಗಳು

ಪುರುಷರು: 100 ಮೀ ಓಟ: ಲಾಲುಪ್ರಸಾದ್ ಬೊಯಿ (ಒಡಿಶಾ; 10.46ಸೆಕೆಂಡು)–1, ಎಚ್‌. ಮಣಿಕಂಠ (ಎಸ್‌ಎಸ್‌ಸಿಬಿ; 10.48ಸೆ)–2, ಬಿ. ಶಿವಾ (ರಾಜಸ್ಥಾನ; 10.50ಸೆ)–3. 110 ಮೀ ಹರ್ಡಲ್ಸ್: ಆರ್. ಮಾನವ್ (ರಾಜಸ್ಥಾನ; 13.86ಸೆ)–1, ತೇಜಸ್ ಶಿರ್ಸೆ (ರಾಜಸ್ಥಾನ)–2, ರೋನಾಲ್ಡ್ (ಮಧ್ಯಪ್ರದೇಶ)–3.  400 ಮೀ: ತುಷಾರ್ ಮುನ್ನ (ದೆಹಲಿ; 45.97ಸೆ)–1, ಮೋಹಿತ್ ಕುಮಾರ್ (ಎಸ್‌ಎಸ್‌ಸಿಬಿ)–2, ವಿಕ್ರಾಂತ್ ಪಾಂಚಾಲ್ (ರಾಜಸ್ಥಾನ)–3. 1500 ಮೀ: ರಿತೇಶ್ ಒಹ್ರೆ (ರಾಜಸ್ಥಾನ; 3ನಿ,47.41ಸೆ)–1, ವಿಕಾಶ್ (ಹರಿಯಾಣ)–2, ರಾಹುಲ್ ಬಲೋದಾ (ಎಸ್‌ಎಸ್‌ಸಿಬಿ)–3. ಪೋಲ್‌ವಾಲ್ಟ್: ಎಂ. ಗೌತಮ್ (ತಮಿಳುನಾಡು; 5.05 ಮೀ) –1, ಅನ್ಷು ಪಟೇಲ್ (ಮಧ್ಯಪ್ರದೇಶ)–2, ಕುಲದೀಪ್ ಕುಮಾರ್ (ಉತ್ತರಪ್ರದೇಶ)–3. ಡಿಸ್ಕಸ್ ಥ್ರೋ: ಗಗನದೀಪ್ ಸಿಂಗ್ (ಎಸ್‌ಎಸ್‌ಸಿಬಿ; 55.71 ಮೀ)–1, ಪ್ರವೀಣಕುಮಾರ್ ನೆಹ್ರಾ (ರಾಜಸ್ಥಾನ)–2, ನಿರ್ಭಯ್ ಸಿಂಗ್ (ಹರಿಯಾಣ)–3. ಡೆಕಾಥ್ಲಾನ್: ಸ್ಟಾಲಿನ್ ಜೋಸ್ (ಎಸ್‌ಎಸ್‌ಸಿಬಿ; 3335 ಪಾಯಿಂಟ್ಸ್)–1, ಯಮನ್ ದೀಪ್ (ರಾಜಸ್ಥಾನ)–2, ಕುಶಾಲ್ ಮೋಹಿತೆ (ಮಹಾರಾಷ್ಟ್ರ)–3. 

ಮಹಿಳೆಯರು: 100 ಮೀ ಓಟ: ನಿತ್ಯಾ ಗಂಧೆ (ರಾಜಸ್ಥಾನ; 11.571ಸೆ)–1, ಎಸ್‌.ಎಸ್‌. ಸ್ನೇಹಾ (ಕರ್ನಾಟಕ; 11.573ಸೆ)–2, ಗಿರಿಧಾರಾಣಿ (ರಾಜಸ್ಥಾನ; 11.64ಸೆ)–3. 100 ಮೀ ಹರ್ಡಲ್ಸ್: ನಿತ್ಯಾ ರಾಮರಾಜ್ (ತಮಿಳುನಾಡು; 13.04ಸೆ)–1, ಪ್ರಗ್ಯಾನ್ ಪ್ರಶಾಂತ್ ಸಾಹು (ಒಡಿಶಾ)–2, ಕೆ. ನಂದಿನಿ (ತಮಿಳುನಾಡು)–3. 400 ಮೀ: ಐಶ್ವರ್ಯಾ ಮಿಶ್ರಾ (ಮಹಾರಾಷ್ಟರ; 53.77ಸೆ)–1, ದೇವಯಾನಿಬಾ ಝಾಲಾ (ಗುಜರಾತ್)–2, ಕುಂಜಾ ರಜಿತಾ (ಆಂಧ್ರಪ್ರದೇಶ)–3. ‌1500 ಮೀ: ಲಿಲಿ ದಾಸ್ (ರಾಜಸ್ಥಾನ; 4ನಿ,16.52ಸೆ)–1, ಕೆ.ಎಂ. ದೀಕ್ಷಾ (ಮಧ್ಯಪ್ರದೇಶ)–2, ಸುನಿತಾ (ರಾಜಸ್ಥಾನ)–3.  ಜಾವೆಲಿನ್ ಥ್ರೋ: ಅನು ರಾಣಿ (ರಾಜಸ್ಥಾನ; 58.97 ಮಿ)–1, ಜ್ಯೋತಿ (ಹರಿಯಾಣ)–2, ದೀಪಿಕಾ (ಹರಿಯಾಣ)–3. ಹೈಜಂಪ್: ರೇಖಾ (ರಾಜಸ್ಥಾನ; 1.82ಮೀ)–1, ಕೆ. ಗೋಪಿಕಾ (ತಮಿಳುನಾಡು)–2, ಮನ್ಷಿ (ಉತ್ತರಪ್ರದೇಶ)–3. ಶಾಟ್‌ಪಟ್: ಮನಪ್ರೀತ್ ಕೌರ್ (ರಾಜಸ್ಥಾನ; 16.42 ಮೀ)‍–1, ರೇಖಾ (ರಾಜಸ್ಥಾನ)–2, ಯೋಗಿತಾ (ರಾಜಸ್ಥಾನ)–3. 400 ಮೀ ಮಿಶ್ರ ರಿಲೆ: ಪಂಜಾಬ್ (3ನಿ,23.27ಸೆ)–1, ಕೇರಳ–2, ತಮಿಳುನಾಡು –3. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT