ಬೆಂಗಳೂರು: ಕರ್ನಾಟಕದ ಉದಯೋನ್ಮುಖ ಬಾಕ್ಸರ್ ಸಂಭ್ರಮಾ ಅವರು ಗುವಾಹಟಿಯಲ್ಲಿ ಭಾನುವಾರ ಮುಕ್ತಾಯಗೊಂಡ 8ನೇ ಯುವ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಗೆದ್ದರು.

19 ವರ್ಷದೊಳಗಿನ (45– 48 ಕೆಜಿ) ವಿಭಾಗದ ಬಾಲಕಿಯರ ಸ್ಪರ್ಧೆಯಲ್ಲಿ ಸಂಭ್ರಮಾ ಚಿನ್ನ ಜಯಿಸಿದರು. ಕೂಟದಲ್ಲಿ ಕರ್ನಾಟಕಕ್ಕೆ ದೊರೆತ ಏಕೈಕ ಪದಕ ಇದಾಗಿದೆ. ಈ ಗೆಲುವಿನೊಂದಿಗೆ ಸಂಭ್ರಮಾ ಬಾಲಿಯಲ್ಲಿ ನಡೆಯಲಿರುವ ಯೂತ್ ಏಷ್ಯನ್ ಗೇಮ್ಸ್ಗೆ ಅರ್ಹತೆ ಪಡೆದಿದ್ದಾರೆ.

ಬೆಂಗಳೂರಿನ ಸಂಭ್ರಮಾ ಫೈನಲ್ನಲ್ಲಿ 5–0 ಅಂತರದಿಂದ ಹರಿಯಾಣದ ಗುಂಜಾನ್ ಅವರನ್ನು ಸುಲಭವಾಗಿ ಮಣಿಸಿದರು. ಗುಂಜಾನ್, ವಿಶ್ವ ಯೂತ್ ಬೆಳ್ಳಿ ಪದಕ ವಿಜೇತೆಯಾಗಿದ್ದಾರೆ. ಸೆಮಿಫೈನಲ್ನಲ್ಲಿ ಅವರು 5–0ಯಿಂದ ಮಣಿಪುರದ ಲಂಚಲು ಗ್ಯಾಂಗ್ಮೇಯಿ ಅವರನ್ನು ಮಣಿಸಿದ್ದರು. ಸಂಭ್ರಮ ಅವರು ಬಳ್ಳಾರಿಯ ಇನ್ಸ್ಪೈರ್ ಇನ್ಸ್ಟಿಟ್ಯೂಟ್ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಇಬ್ಬರು ಬಾಲಕರು ಸೇರಿದಂತೆ ಕರ್ನಾಟಕದ ಐವರು ವಿವಿಧ ಕೆಜಿ ವಿಭಾಗಗಳ ಸ್ಪರ್ಧೆಗಳಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದರು. ಆದರೆ, ಸಂಭ್ರಮಾ ಮಾತ್ರ ಈ ಹಂತ ದಾಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.