ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌ ಕೋಟಾ ಗಿಟ್ಟಿಸಿದ ಸರಬ್ಜೋತ್

ಏಷ್ಯನ್ ಶೂಟಿಂಗ್‌: 10 ಮೀ. ಏರ್‌ಪಿಸ್ತೂಲ್‌ ಸ್ಪರ್ಧೆಯಲ್ಲಿ ಕಂಚು
Published 24 ಅಕ್ಟೋಬರ್ 2023, 10:39 IST
Last Updated 24 ಅಕ್ಟೋಬರ್ 2023, 10:39 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತದ ಸರಬ್ಜೋತ್‌ ಸಿಂಗ್‌ ಅವರು ದಕ್ಷಿಣ ಕೊರಿಯಾದ ಚಾಂಗ್ವಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮಂಗಳವಾರ ಪುರುಷರ 10 ಮೀ. ಏರ್‌ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದುಕೊಂಡರು. ಜೊತೆಗೇ ಮುಂದಿನ ವರ್ಷದ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಕೋಟಾ ಗಿಟ್ಟಿಸಿದರು.

ಸರಬ್ಜೋತ್ 221.1 ಪಾಯಿಂಟ್ಸ್‌ ಕಲೆಹಾಕಿದರು. ಚೀನಾದ ಝಾಂಗ್‌ ಯಿಫಾನ್ (243.7 ಪಾಯಿಂಟ್ಸ್‌) ಚಿನ್ನ ಗೆದ್ದರೆ ಅದೇ ದೇಶದ ಲಿಯು  ಜಿನ್ಯಾವೊ (242.1) ಬೆಳ್ಳಿ ಪದಕ ಪಡೆದರು. ಶೂಟಿಂಗ್‌ನಲ್ಲಿ ಕೋಟಾ ಸ್ಥಾನ ಕಾದಿರಿಸಿದರ ಅವರು ಭಾರತದ ಎಂಟನೇ ಸ್ಪರ್ಧಿ. ಪಿಸ್ತೂಲ್ ವಿಭಾಗದಲ್ಲಿ ಮೊದಲನೆಯುವರು.

ಚೀನಾ ಎರಡು ಸ್ಥಾನ ಪಡೆದ ಕಾರಣ ಇನ್ನೊಂದು ಸ್ಥಾನಕ್ಕೆ ಸರಬ್ಜೋತ್ ಜೊತೆ ಕೊರಿಯಾ ಸ್ಪರ್ಧಿ ನಡುವೆ ಪೈಪೋಟಿ ಏರ್ಪಟಿತು. ಮೊದಲ ಐದು ಪ್ರಯತ್ನಗಳ ನಂತರ ಅವರು ಮೊದಲ ಸ್ಥಾನದಲ್ಲಿದ್ದರು. ಆದರೆ ಚೀನಾ ಸ್ಪರ್ಧಿಗಳು ಮುನ್ನಡೆ ಸಾಧಿಸಿದ ನಂತರ ಅವರಿಗೆ ಪೈಪೋಟಿ ಎದುರಾಗಲಿಲ್ಲ.

ಮಹಿಳೆಯರ ವಿಭಾಗದ ಪಿಸ್ತೂಲ್‌ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಐವರು ಕಣದಲ್ಲಿದ್ದರೂ, ಯಾರೂ ಮೊದಲ ಎಂಟರಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿ ಆಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT