23 ವರ್ಷ ವಯಸ್ಸಿನ ಸತೀಶ್ ಅವರಿಗೆ ಬುಧವಾರ 32ರ ಘಟ್ಟದ ಪಂದ್ಯದಲ್ಲಿ ವಿಶ್ವದ ಮೂರನೇ ಕ್ರಮಾಂಕದ ಡೆನ್ಮಾರ್ಕ್‌ನ ಆ್ಯಂಡರ್ಸ್ ಆಂಟೊನ್ಸೆನ್ ಮುಖಾಮುಖಿಯಾಗಿದ್ದರು. ಆದರೆ, ಪಂದ್ಯ ಆರಂಭಗೊಂಡ ಮೂರೇ ನಿಮಿಷದಲ್ಲಿ ಗಾಯದ ಕಾರಣಕ್ಕಾಗಿ ಆಂಟೊನ್ಸನ್ ಸ್ಪರ್ಧೆಯಿಂದ ಹಿಂದೆ ಸರಿದರು. ಈ ವೇಳೆ ಸತೀಶ್ 6–1 ಮುನ್ನಡೆಯಲ್ಲಿದ್ದರು.