ಯೊಕೊಹಾಮ (ಜಪಾನ್): ಭಾರತದ ಸತೀಶ್ ಕುಮಾರ್ ಕರುಣಾಕರನ್ ಗುರುವಾರ ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್‌ನ ಎರಡನೇ ಸುತ್ತಿನಲ್ಲಿ ಮೂರು ಗೇಮ್‌ಗಳ ಹೋರಾಟದ ನಂತರ ಹೊರಬಿದ್ದರು.
23 ವರ್ಷ ವಯಸ್ಸಿನ ಸತೀಶ್ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ 21-18, 18-21, 8-21ರಿಂದ ವಿಶ್ವದ 40ನೇ ಕ್ರಮಾಂಕದ ಥಾಯ್ಲೆಂಡ್‌ನ ಕಾಂತಾಫೋನ್ ವಾಂಗ್‌ಚರೋನ್ ಅವರಿಗೆ ಮಣಿದರು. ಈ ಮೂಲಕ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.
70 ನಿಮಿಷ ನಡೆದ ಹೋರಾಟದ ಮೊದಲ ಗೇಮ್‌ನಲ್ಲಿ ಸತೀಶ್ ಮೇಲುಗೈ ಸಾಧಿಸಿದ್ದರು. ಆದರೆ, ಎರಡನೇ ಗೇಮ್‌ನಲ್ಲಿ ಥಾಯ್ಲೆಂಡ್ ಆಟಗಾರ ಪುಟಿದ್ದೆದ್ದು, ಸ್ಕೋರ್ ಸಮಬಲ ಸಾಧಿಸಿದರು. ನಿರ್ಣಾಯಕ ಗೇಮ್‌ನಲ್ಲೂ ವಾಂಗ್‌ಚರೋನ್ ಗೆಲುವಿನೊಂದಿಗೆ ಕ್ವಾರ್ಟರ್ ಫೈನಲ್‌ಗೆ ಮುನ್ನಡೆದರು.