ಸಿಂಗಪುರ: ಭಾರತದ ಸಾತ್ವಿಕ್ಸಾಯಿರಾಜ್ ರಣಕಿರೆಡ್ಡಿ – ಚಿರಾಗ್ ಶೆಟ್ಟಿ ಅವರು ಸಿಂಗಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಗುರುವಾರ ಎಂಟರ ಘಟ್ಟ ತಲುಪಿದರು. ಆದರೆ ಸಿಂಗಲ್ಸ್ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಪಿ.ವಿ.ಸಿಂಧು ಮತ್ತು ಎಚ್.ಎಸ್.ಪ್ರಣಯ್ ಅವರ ಸವಾಲು ಬೇಗ ಅಂತ್ಯಗೊಂಡಿತು.

ಸಾತ್ವಿಕ್– ಚಿರಾಗ್ ಜೋಡಿ ಹಿನ್ನಡೆಯಿಂದ ಚೇತರಿಸಿಕೊಂಡು, ಏಳನೇ ಶ್ರೇಯಾಂಕದ ಸಬರ್ ಕಾರ್ಯಮನ್ ಗುತಮ– ಮೊಹಮ್ಮದ್ ರೇಜಾ ಪೆಹ್ಲವಿ ಇಸ್ಫಹಾನಿ ಜೋಡಿಯನ್ನು (ಇಂಡೊನೇಷ್ಯಾ) 19–21, 21–16, 21–19 ರಿಂದ ಸೋಲಿಸಿತು. ಈ ತೀವ್ರ ಹೋರಾಟದ ಪಂದ್ಯ ಒಂದೂಕಾಲು ಗಂಟೆ ನಡೆಯಿತು.

ಭಾರತದ ಜೋಡಿ ಎಂಟರ ಘಟ್ಟದ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಗೋಹ್ ತ್ಸೆ ಫೀ– ನೂರ್ ಇಝ್ಝುದ್ದೀನ್ ಜೋಡಿಯನ್ನು (ಮಲೇಷ್ಯಾ) ಎದುರಿಸಲಿದೆ.

ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ವೇಳೆ ಚಿರಾಗ್ ಗಾಯಾಳಾದ ನಂತರ ಭಾರತದ ಜೋಡಿ ಇದೇ ಮೊದಲ ಬಾರಿಗೆ ಕಣಕ್ಕಿಳಿದಿದೆ.

ಸಿಂಧುಗೆ ಸೋಲು:

ಡಬಲ್ ಒಲಿಂಪಿಕ್ ಪದಕ ವಿಜೇತೆ ಸಿಂಧು, ತೀವ್ರ ಹೋರಾಟ ಕಂಡ ಮಹಿಳೆಯರ ಸಿಂಗಲ್ಸ್ ಎರಡನೇ ಸುತ್ತಿನ ಪಂದ್ಯದಲ್ಲಿ ಐದನೇ ಶ್ರೇಯಾಂಕದ ಚೆನ್ ಯೂಫಿ (ಚೀನಾ) ಅವರಿಗೆ 9–21, 21–18, 16–21 ರಲ್ಲಿ ಸೋತರು. ಪ್ರಸ್ತುತ ವಿಶ್ವ ರ್ಯಾಂಕಿಂಗ್ನಲ್ಲಿ 17ನೇ ಸ್ಥಾನಕ್ಕೆ ಕುಸಿದಿರುವ ಸಿಂಧು ಪಂದ್ಯದ ಕೆಲವು ಹಂತಗಳಲ್ಲಿ ಮಾತ್ರ ಉತ್ತಮ ಲಯ ಪ್ರದರ್ಶಿಸಿದರು. ಇದು ಚೆನ್ ವಿರುದ್ಧ 13 ಮುಖಾಮುಖಿಗಳಲ್ಲಿ ಸಿಂಧು ಅವರಿಗೆ ಏಳನೇ ಸೋಲು.

ಚೆಂಡನ್ನು ಚುರುಕಾಗಿ ಹಿಂತಿರುಗಿಸುವಲ್ಲಿ ಮತ್ತು ರ್ಯಾಲಿಗಳನ್ನು ನಿಯಂತ್ರಿಸುವಲ್ಲಿ ಭಾರತದ ಆಟಗಾರ್ತಿ ಎಡವಿದರು.

ಪುರುಷರ ಸಿಂಗಲ್ಸ್ನಲ್ಲೂ ಎಚ್.ಎಸ್.ಪ್ರಣಯ್ ನಿರಾಶೆಗೆ ಒಳಗಾದರು. ಅವರು ಪ್ರಿಕ್ವಾರ್ಟರ್ಫೈನಲ್ ಪಂದ್ಯದಲ್ಲಿ 16–21, 14–21 ರಲ್ಲಿ ಫ್ರಾನ್ಸ್ನ ಕ್ರಿಸ್ಟೊ ಪೊಪೋವ್ ಅವರಿಗೆ ಮಣಿಸಿದರು.

ಮಹಿಳಾ ಡಬಲ್ಸ್ನಲ್ಲಿ ಎಂಟನೇ ಶ್ರೇಯಾಂಕ ಪಡೆದಿದ್ದ ಟ್ರೀಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್ ಎರಡನೇ ಸುತ್ತಿನಲ್ಲಿ 8–21, 10–21ರಲ್ಲಿ ಚೀನಾದ ಜಿಯಾ ಯಿ ಫಾನ್– ಝಾಂಗ್ ಶೂ ಷಿಯಾನ್ ಜೋಡಿ ಎದುರು ಹಿಮ್ಮೆಟ್ಟಿದರು.

ಮಿಶ್ರ ಡಬಲ್ಸ್ನಲ್ಲಿ ರೋಹನ್ ಕಪೂರ್– ಋತ್ವಿಕಾ ಗದ್ದೆ ಜೋಡಿ 10–21, 16–21ರಲ್ಲಿ ಹಾಂಕ್ಕಾಂಗ್ನ ತಾಂಗ್ ಚುನ್ ಮಾನ್– ತ್ಸೆ ಯಿಂಗ್ಗ ಸುಯೆತ್ ಜೋಡಿಯೆದುರು ಸೋಲನುಭವಿಸಿದರು. ಪಂದ್ಯ 31 ನಿಮಿಷ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.