ಜಕಾರ್ತ: ಸಿಂಗಪುರ ಓಪನ್ ಟೂರ್ನಿಯ ಕಿರೀಟ ಗೆದ್ದ ಉತ್ಸಾಹದಲ್ಲಿರುವ ಭಾರತದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ ಅವರು ಮಂಗಳವಾರ ಇಲ್ಲಿ ಆರಂಭವಾಗುವ ಇಂಡೊನೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿಯೂ ಲಯ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ.

ವಿಶ್ವದ ಮಾಜಿ ಅಗ್ರಮಾನ್ಯ ಜೋಡಿಯು ಅಂದಾಜು ₹13.82 ಕೋಟಿ ಬಹುಮಾನ ಮೊತ್ತದ ಈ ಟೂರ್ನಿಯಲ್ಲಿ ಮಲೇಷ್ಯಾದ ಕಾಂಗ್ ಖೈ ಷಿಂಗ್ ಹಾಗೂ ಆ್ಯರನ್ ತೈ ವಿರುದ್ಧ ಅಭಿಯಾನ ಆರಂಭಿಸಲಿದೆ.

ಭಾರತದ ಇನ್ನೊಂದು ಜೋಡಿ ಎಂ.ಆರ್.ಅರ್ಜುನ್ ಹಾಗೂ ಹರಿಹರನ್ ಅಮ್ಸಕರುಣನ್ ಅವರು ಮೊದಲ ಸುತ್ತಿನಲ್ಲಿ ಮಲೇಷ್ಯಾದ ಮತ್ತೊಂದು ಜೋಡಿ ನೂರ್ ಮೊಹಮ್ಮದ್ ಅಝರಿನ್ ಆಯೂಬ್ ಮತ್ತು ತಾನ್ ವೀ ಕಿಯೊಂಗ್ ಅವರನ್ನು ಎದುರಿಸಲಿದ್ದಾರೆ. ಭಾರತದ ಎರಡೂ ಜೋಡಿಗಳು ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿದರೆ, ಎರಡನೇ ಸುತ್ತಿನಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ.

ಲಯ ಕಂಡುಕೊಳ್ಳಲು ಪರದಾಡುತ್ತಿರುವ ಅನುಭವಿ ಆಟಗಾರ್ತಿ ಪಿ.ವಿ.ಸಿಂಧು ಅವರು ಥಾಯ್ಲೆಂಡ್ನ ಬುಸಾನನ್ ಒಂಗ್ ಬಮ್ರುಂಗ್ಫನ್ ವಿರುದ್ಧ ಅಭಿಯಾನ ಆರಂಭಿಸಲಿದ್ದಾರೆ.ಭರವಸೆಯ ಆಟಗಾರ್ತಿಯರಾದ ಮಾಳವಿಕಾ ಬನ್ಸೋಡ್ ಹಾಗೂ ಉನ್ನತಿ ಹೂಡ ಅವರು ಕ್ರಮವಾಗಿ ಪೊರ್ನಪವೀ ಶೊಶುವಾಂಗ್ (ಥಾಯ್ಲೆಂಡ್) ಮತ್ತು ನೊಜೊಮಿ ಒಕುಹಾರಾ (ಜಪಾನ್) ಅವರನ್ನು ಎದುರಿಸಲಿದ್ದಾರೆ.

ಅನುಭವಿ ಆಟಗಾರರಾದ ಲಕ್ಷ್ಯ ಸೇನ್ ಹಾಗೂ ಕಿದಂಬಿ ಶ್ರೀಕಾಂತ್ ಅವರು ಕ್ರಮವಾಗಿ ಆತಿಥೇಯ ರಾಷ್ಟ್ರದ ಅಲ್ವಿ ಫರ್ಹಾನ್ ಮತ್ತು ಯೂಶಿ ತನಾಕ (ಜಪಾನ್) ವಿರುದ್ಧ ಅಭಿಯಾನ ಆರಂಭಿಸಲಿದ್ದಾರೆ. ಕನ್ನಡಿಗ ಆಯುಷ್ ಶೆಟ್ಟಿ ಅವರು ಚೀನಾದ ವೆಂಗ್ ಹಾಂಗ್ ಯಾಂಗ್ ಎದುರು ಸೆಣಸಲಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-43-476316490

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.