ರೋಟರ್ಡ್ಯಾಮ್ (ನೆದರ್ಲೆಂಡ್ಸ್) : ಸಾವನ್ ಬರ್ವಾಲ್ ಅವರು ಭಾನುವಾರ ರೋಟರ್ಡ್ಯಾಮ್ ನಲ್ಲಿ ನಡೆದ ಮ್ಯಾರಥಾನ್ ನಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದರು.

ಬರ್ವಾಲ್ ಅವರು 2 ಗಂಟೆ 11 ನಿಮಿಷ 58 ಸೆಕೆಂಡುಗಳಲ್ಲಿ ಗುರಿ ತಲುಪಿ ಎಲೀಟ್ ಮ್ಯಾರಥಾನ್ ಓಟದಲ್ಲಿ 20ನೇ ಸ್ಥಾನ ಪಡೆದರು. ಇದರೊಂದಿಗೆ 1978ರಿಂದ ಶಿವನಾಥ್ ಸಿಂಗ್ ಅವರ ಹೆಸರಿನಲ್ಲಿದ್ದ (2ಗಂಟೆ 12ನಿ 00) ರಾಷ್ಟ್ರೀಯ ದಾಖಲೆಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡರು.ಸ್ಪರ್ಧೆಯಲ್ಲಿದ್ದ ಮತ್ತೊಬ್ಬ ಭಾರತೀಯ ಗೋಪಿ ಥೋನಕಲ್ 42.195 ಕಿ.ಮೀ ದೂರವನ್ನು 2 ಗಂಟೆ 13 ನಿ. 16 ಸೆ.ಗಳಲ್ಲಿ ಕ್ರಮಿಸಿ 23ನೇ ಸ್ಥಾನ ಪಡೆದರು.

ಜನವರಿಯಲ್ಲಿ ಅಮೆರಿಕದಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಕ್ರಾಸ್ ಕಂಟ್ರಿ ಚಾಂಪಿಯನ್ಷಿಪ್ನಲ್ಲಿ ಭಾಗವಹಿಸಿದ ನಂತರ ಬರ್ವಾಲ್ ಅವರಿಗೆ ಇದು ಋತುವಿನ ಎರಡನೇ ಸ್ಪರ್ಧೆಯಾಗಿತ್ತು.

ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಜೋಗಿಂದರ್ ನಗರದ ಹಳ್ಳಿಯಿಂದ ಬಂದ 28 ವರ್ಷದ ಬರ್ವಾಲ್ ಅವರು ಹಲವು ವರ್ಷಗಳಿಂದ ಕಠಿಣ ತರಬೇತಿ ಪಡೆದಿದ್ದಾರೆ. ‘37 ಕಿ.ಮೀ. ದೂರದವರೆಗೂ ಮಧ್ಯಮ ನಿಧಾನಗತಿಯಲ್ಲಿ ಓಡುತ್ತಿದ್ದೆ. ಆದರೆ ಕೊನೆಯ ಹಾದಿ ಹೆಚ್ಚು ಸವಾಲಿನದ್ದಾಗಿತ್ತು.2 ಗಂಟೆ 10 ನಿಮಿಷಗಳಲ್ಲಿ ಗುರಿ ತಲುಪಲು ಮಾನಸಿಕ ಮತ್ತು ದೈಹಿಕವಾಗಿ ತಯಾರಿ ನಡೆಸಿದ್ದೆ. ಇಲ್ಲಿನ ವಾತಾವರಣ ರಾಷ್ಟ್ರೀಯ ದಾಖಲೆಯನ್ನು ಇನ್ನಷ್ಟು ಸುಧಾರಿಸುವ ಅವಕಾಶವನ್ನು ಕಸಿದುಕೊಂಡಿತು’ ಎಂದು ಬರ್ವಾಲ್ ಪ್ರತಿಕ್ರಿಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-51-226377993

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.