ಜೂನಿಯರ್ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ರೇಸಿಸ್ ಮೈಕೆಲ್ (ಪೋಲೆಂಡ್), ಭಾರತ ಅಶ್ವಿನ್ ರಾಜೇಶ್ ಅವರನ್ನು ಮಣಿಸಿದರು. ಎರಡನೇ ಬೋರ್ಡ್‌ನಲ್ಲಿ ಸಾಲೊಮನ್ ಜೂಲಿಯಾ (ಪೋಲೆಂಡ್), ಭಾರತದ ಸ್ಯಾಮ್ ಪೆನಿಯಲ್ ಮೇಲೆ ಜಯಗಳಿಸಿದರು. ಈ ವಿಭಾಗದಲ್ಲಿ ಕಣದಲ್ಲಿರುವ ಏಕೈಕ ಮಹಿಳಾ ಸ್ಪರ್ಧಿಯಾಗಿರುವ ಜೂಲಿಯಾ ಆರಂಭದ ಹಂತದಲ್ಲೇ ಮೇಲುಗೈ ಸಾಧಿಸಿ 17ನೇ ನಡೆಯಲ್ಲಿ ಗೆಲುವು ಖಚಿತಪಡಿಸಿಕೊಂಡರು.