ಕೈರೊ (ಪಿಟಿಐ): ಭಾರತದ ಶಾಂಭವಿ ಕ್ಷೀರಸಾಗರ ಹಾಗೂ ದಿವ್ಯಾಂಶು ದೇವಾಂಗನ್ ಜೋಡಿಯು ಇಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ಜೂನಿಯರ್ ಶೂಟಿಂಗ್ ವಿಶ್ವಕಪ್ನ 10 ಮೀ. ಏರ್ ರೈಫಲ್ ಮಿಶ್ರ ತಂಡ ವಿಭಾಗದಲ್ಲಿ ವಿಶ್ವದಾಖಲೆಯೊಂದಿಗೆ ಸ್ವರ್ಣ ಜಯಿಸಿತು.

ಶುಕ್ರವಾರ ನಡೆದ ಫೈನಲ್ ಸುತ್ತಿನಲ್ಲಿ ಶಾಂಭವಿ– ದಿವ್ಯಾಂಶು ಅವರು 499.9 ಅಂಕ ಸಂಪಾದಿಸಿದರು. ಭಾರತದವರೇ ಆದ ಇಳವೆನಿಲ್ ವಾಳರಿವನ್– ದಿವ್ಯಾಂಶ್ ಸಿಂಗ್ ಪನ್ವರ್ ಜೋಡಿ 2018ರ ಆವೃತ್ತಿಯಲ್ಲಿ 498.6 ಅಂಕ ಗಳಿಸಿದ್ದರು. ಅದು ಈವೆರೆಗಿನ ವಿಶ್ವದಾಖಲೆಯಾಗಿತ್ತು.

ತೈವಾನ್ನ ಸೈ ಚೀಹ್–ಯಿಂಗ್ ಹಾಗೂ ಶೆನ್ ಯುವಾನ್ ಜೋಡಿ 498.3 ಅಂಕಗಳೊಂದಿಗೆ ಬೆಳ್ಳಿ ಪದಕ ತಮ್ಮ ದಾಗಿಸಿಕೊಂಡಿತು. ಫ್ರಾನ್ಸ್ನ ಟೀಫೆನ್ ಪೋಮ್ಸ್– ಗ್ಯಾಸ್ಪರ್ಡ್ ಲೆಸ್ಯೂರ್ ಜೋಡಿ (434.4 ಅಂಕ) ಕಂಚು ಜಯಿಸಿತು.

ಶಾಂಭವಿ– ದಿವ್ಯಾಂಶು ಅವರು ಕ್ವಾಲಿಫಿಕೇಶನ್ ಸುತ್ತಿನಲ್ಲಿಯೂ ಅಗ್ರಸ್ಥಾನ (632 ಅಂಕ) ಪಡೆದಿದ್ದರು.

ಭಾರತವು ನಾಲ್ಕು ಚಿನ್ನ ಸೇರಿ 12 ಪದಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-4-271100794

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.