ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ತಂಡಕ್ಕೆ ಆಯುಷ್‌, ಉನ್ನತಿ ಸಾರಥ್ಯ

ಸೆ.25ರಿಂದ ಬಿಡಬ್ಲ್ಯುಎಫ್ ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌
Published 7 ಆಗಸ್ಟ್ 2023, 17:40 IST
Last Updated 7 ಆಗಸ್ಟ್ 2023, 17:40 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಉದಯೋನ್ಮುಖ ಷಟ್ಲರ್‌ ಆಯುಷ್‌ ಶೆಟ್ಟಿ ಮತ್ತು ಉನ್ನತಿ ಹೂಡಾ ಅವರು ಅಮೆರಿಕದ ಸ್ಪೋಕಾನ್‌ನಲ್ಲಿ ಸೆ.25ರಿಂದ ನಡೆಯಲಿರುವ ಬಿಡಬ್ಲ್ಯುಎಫ್ ವಿಶ್ವ ಜೂನಿಯರ್ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ 16 ಸದಸ್ಯರ ತಂಡವನ್ನು ಮುನ್ನಡೆಸಲಿದ್ದಾರೆ.

ಜುಲೈ 26ರಿಂದ 29ರ ವರೆಗೆ ನವದೆಹಲಿಯಲ್ಲಿ ನಡೆದ ಟ್ರಯಲ್ಸ್‌ ನಂತರ ತಂಡವನ್ನು ಆಯ್ಕೆ ಮಾಡಲಾಗಿದೆ.

19 ವರ್ಷದೊಳಗಿನವರ ವಿಭಾಗದಲ್ಲಿ ಎರಡು ಬಾರಿಯ ಚಾಂಪಿಯನ್‌ ಆಯುಷ್‌ ಪುರುಷರ ತಂಡವನ್ನು ಮುನ್ನಡೆಸಲಿದ್ದಾರೆ. ಅವರೊಂದಿಗೆ ತುಷಾರ್ ಸುವೀರ್ ಮತ್ತು ಲೋಕೇಶ್ ರೆಡ್ಡಿ ಇರಲಿದ್ದಾರೆ.

2022ರ ಒಡಿಶಾ ಓಪನ್ ಚಾಂಪಿಯನ್ ಉನ್ನತಿ ಹೂಡಾ ಅವರು ತಾರಾ ಶಾ ಮತ್ತು ದೇವಿಕಾ ಸಿಹಾಗ್ ಅವರೊಂದಿಗೆ ಮಹಿಳೆಯರ ಸಿಂಗಲ್ಸ್ ವಿಭಾಗವನ್ನು ಮುನ್ನಡೆಸಲಿದ್ದಾರೆ.

ಭಾರತ ತಂಡ: ಆಯುಷ್‌ ಶೆಟ್ಟಿ, ತುಷಾರ್‌ ಸುವೀರ್‌, ಲೋಕೇಶ್‌ ರೆಡ್ಡಿ, ನಿಕೋಲಸ್ ನಾಥನ್ ರಾಜ್, ದಿವ್ಯಂ ಅರೋರಾ, ಮಯಾಂಕ್ ಅರೋರಾ, ಸಮರ್‌ವೀರ್‌, ಕೆ. ಸಾತ್ವಿಕ್ ರೆಡ್ಡಿ, ಉನ್ನತಿ ಹೂಡ, ತಾರಾ ಶಾ, ದೇವಿಕಾ ಸಿಹಾಗ್, ಶ್ರೀಯಾನ್ಶಿ ವಲಿಶೆಟ್ಟಿ, ರಾಧಿಕಾ ಶರ್ಮಾ, ತನ್ವಿ ಶರ್ಮಾ, ಕೆ. ವೆನ್ನಾಲ, ವೈಷ್ಣವಿ ಖಡ್ಕೇಕರ್.

ಉನ್ನತಿ ಹೂಡ– ಪಿಟಿಐ ಚಿತ್ರ
ಉನ್ನತಿ ಹೂಡ– ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT