ಮ್ಯೂನಿಕ್: ಭಾರತದ ಶೂಟರ್ ಐಶ್ವರಿ ಪ್ರತಾಪ್ ಸಿಂಗ್ ತೋಮಾರ್ ಅವರನ್ನು ಐಎಸ್ಎಸ್ಎಫ್ ವಿಶ್ವ ಕಪ್ನ ಪುರುಷರ 50 ಮೀ. ರೈಫಲ್ 3 ಪೊಸಿಷನ್ಸ್ ಸ್ಪರ್ಧೆಯ ಫೈನಲ್ನಿಂದ ಶುಕ್ರವಾರ ಅನರ್ಹಗೊಳಿಸಲಾಯಿತು. ಪರಿಕರ ಸಂಬಂಧಿ ತಾಂತ್ರಿಕ ಕಾರಣಗಳಿಂದ ಅವರನ್ನು ಪದಕ ಸುತ್ತಿಗೆ ಮೊದಲೇ ಹೊರಬಿದ್ದಿದ್ದಾರೆ.

ಫೈನಲ್ಗೆ ಮೊದಲು, ಅರ್ಹತಾ ಸುತ್ತಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಐಶ್ವರಿ ಪ್ರಸಾದ್ 592 ಸ್ಕೋರ್ನಡೊನೆ ಐದನೇ ಸ್ಥಾನ ಗಳಿಸಿ ಅರ್ಹತೆ ಪಡೆದಿದ್ದರು. ಆದರೆ ಪದಕ ಸುತ್ತಿಗೆ ಮೊದಲು ಪರಿಕರ ಪರಿಶೀಲನೆ ವೇಳೆ ಅವರು ಬಳಸುತ್ತಿದ್ದ ಆಯುಧದ ಅಳತೆಯಲ್ಲಿ ತಾಂತ್ರಿಕ ಲೋಪ ಪತ್ತೆ ಮಾಡಿದ್ದಾರೆ.

‘ಐಶ್ವರಿ ಪ್ರಸಾದ್ ಅವರು ಒಂದು ವರ್ಷದಿಂದ ಇದೇ ರೈಫಲ್ ಬಳಸುತ್ತಿದ್ದರು. ಟೂರ್ನಿಯ ಮೊದಲಿನ ತಪಾಸಣೆ ವೇಳೆ ಇದಕ್ಕೆ ಸಮ್ಮತಿ ದೊರೆತಿತ್ತು. ಆದರೆ ಪದಕ ಸುತ್ತಿಗೆ ಮೊದಲು ಅಗ್ರ 10 ಶೂಟರ್ಗಳ ಬಂದೂಕು ಪರಿಶೀಲಿಸಿದಾಗ ಅವರು ಬಳಸುತ್ತಿದ್ದ ರೈಫಲ್ನಲ್ಲಿ ಐಎಸ್ಎಸ್ಎಫ್ ತಂತ್ರಜ್ಞರಿಗೆ ದೋಷ ಕಂಡಿದೆ ಎಂದು ಭಾರತ ರಾಷ್ಟ್ರೀಯ ರೈಫಲ್ ಸಂಸ್ಥೆಯ ಮೂಲವೊಂದು ಪಿಟಿಐಗೆ ತಿಳಿಸಿದೆ.

ಇದು 25 ವರ್ಷ ವಯಸ್ಸಿನ ತೋಮಾರ್ ಅವರ ಏಷ್ಯನ್ ಗೇಮ್ಸ್ ಅವಕಾಶದ ಮೇಲೆಯೂ ಪರಿಣಾಮ ಬೀರಬಹುದಾಗಿದೆ. ಏಷ್ಯನ್ ಗೇಮ್ಸ್ಗೆ ಭಾರತ ತಂಡದ ಆಯ್ಕೆಗೆ ಈ ವಿಶ್ವಕಪ್ ಟ್ರಯಲ್ಸ್ಗಳಲ್ಲಿ ಒಂದಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.