ಅಲ್ಮಾಟಿ (ಕಜಾಕಸ್ತಾನ), (ಎಎಫ್ಪಿ): ಭಾರತದ ಶೂಟರ್ಗಳು ಇಲ್ಲಿ ಸೋಮವಾರ ಆರಂಭಗೊಂಡ ಐಎಸ್ಎಸ್ಎಫ್ ಶಾಟ್ಗನ್ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ದಿನ ನೀರಸ ಪ್ರದರ್ಶನ ನೀಡಿದರು.

ಚಂಡೀಗಢದ ಗನೀಮತ್ ಸೆಖೋನ್ ಮಹಿಳೆಯರ ಸ್ಕೀಟ್ ಅರ್ಹತಾ ಸುತ್ತಿನಲ್ಲಿ 75ರಲ್ಲಿ 70 ಅಂಕ ಗಳಿಸಿದ್ದಾರೆ. ಅಗ್ರ ಎಂಟರಲ್ಲಿ ಸ್ಥಾನ ಪಡೆಯಲು ಅವರಿಗೆ ಒಂದು ಅಂಕ ಕೊರತೆಯಾಯಿತು. ಆದರೆ, ಎರಡನೇ ಹಂತದ ಸ್ಪರ್ಧೆಯಲ್ಲಿರುವ ಅವರು ಫೈನಲ್ ಪ್ರವೇಶದ ಹಾದಿಯನ್ನು ಜೀವಂತವಾಗಿ ಉಳಿಸಿಕೊಂಡಿದ್ದಾರೆ.

ಸೆಖೋನ್ ಅವರು 2021ರಲ್ಲಿ ನವದೆಹಲಿಯಲ್ಲಿ ನಡೆದ ವಿಶ್ವಕಪ್ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಸ್ಕೀಟ್ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಪುರುಷರ ವಿಭಾಗದಲ್ಲಿ ಅನುಭವಿ ಮೈರಾಜ್ ಅಹ್ಮದ್ ಖಾನ್ ಒಟ್ಟು 71 ಅಂಕಗಳೊಂದಿಗೆ 27ನೇ ಸ್ಥಾನ ಗಳಿಸಿದರು. 25 ಅಂಕಗಳೊಂದಿಗೆ ಉತ್ತಮ ಆರಂಭ ಮಾಡಿದ ಅವರು ನಂತರ 23 ಮತ್ತು 23 ಅಂಕ ಗಳಿಸಿದರು.

ಒಲಿಂಪಿಯನ್ ಅನಂತ್ಜೀತ್ ಸಿಂಗ್ ಅವರೂ 25 ಅಂಕಗಳೊಂದಿಗೆ ಅಭಿಯಾನ ಆರಂಭಿಸಿ ನಂತರ ಕ್ರಮವಾಗಿ 23, 21 ಅಂಕ ಗಳಿಸಿದರು. ಗುರ್ಜೋತ್ ಸಿಂಗ್ ಒಟ್ಟು 70 ಅಂಕಗಳೊಂದಿಗೆ 33ನೇ ಸ್ಥಾನ ಪಡೆದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-51-1952578926

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.