ಸಿಂಗಪುರ: ಭಾರತದ ಅನುಭವಿ ಆಟಗಾರ್ತಿ ಪಿ.ವಿ.ಸಿಂಧು ಅವರು ಸಿಂಗಪುರ ಓಪನ್ ಸೂಪರ್ 750 ಟೂರ್ನಿಯ ಮಹಿಳೆಯರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಮಂಗಳವಾರ ಐದನೇ ಶ್ರೇಯಾಂಕದ ಪುತ್ರಿ ಕುಸುಮ ವಾರ್ದನಿ ಅವರನ್ನು 21–17, 21–18 ರಿಂದ ಸೋಲಿಸಿದರು.

₹9.50 ಕೋಟಿ ಬಹುಮಾನ ಮೊತ್ತ ಹೊಂದಿರುವ ಈ ಟೂರ್ನಿಯಲ್ಲಿ ಸಿಂಧು ಅವರು ಎರಡನೇ ಸುತ್ತಿನಲ್ಲಿ ಜಪಾನ್ನ ರಿಕೊ ಗುಂಜಿ ಅವರನ್ನು ಎದುರಿಸಲಿದ್ದಾರೆ.

ವಿಶ್ವ ಕ್ರಮಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ–ಚಿರಾಗ್ ಶೆಟ್ಟಿ ಜೋಡಿ ಪುರುಷರ ಡಬಲ್ಸ್ನಲ್ಲಿ ಕ್ರಮಾಂಕಪಟ್ಟಿಯಲ್ಲಿ 25ನೇ ಸ್ಥಾನದಲ್ಲಿರುವ ಚೆನ್ ಝಿ ಯಿ– ಪ್ರೆಸ್ಲಿ ಸ್ಮಿತ್ ಜೋಡಿಯನ್ನು ಸೋಲಿಸಿ ಎರಡನೇ ಸುತ್ತಿಗೆ ಮುನ್ನಡೆಯಿತು.

ಆದರೆ ಆಯುಷ್ ಶೆಟ್ಟಿ ಮತ್ತು ಉನ್ನತಿ ಹೂಡ ಬೇಗನೇ ಹೊರಬಿದ್ದರು. ಆಯುಷ್ 21–11, 14–21, 12–21ರಲ್ಲಿ ವಿಶ್ವ ಚಾಂಪಿಯನ್ಷಿಪ್ ಕಂಚಿನ ಪದಕ ವಿಜೇತ ವಿಕ್ಟರ್ ಆಕ್ಸೆಲ್ಸನ್ ಅವರಿಗೆ ಮಣಿದರು.

ಮಹಿಳೆಯರ ಸಿಂಗಲ್ಸ್ನಲ್ಲಿ ಉನ್ನತಿ ಹೂಡಾ 14–21, 10–21 ರಲ್ಲಿ ಮಾಜಿ ವಿಶ್ವ ಜೂನಿಯರ್ ಚಾಂಪಿಯನ್ ಹಾಗೂ ಎಂಟನೇ ಶ್ರೇಯಾಂಕದ ಟೊಮೊಕಾ ಮಿಯಾಝಾಕಿ (ಜಪಾನ್) ಅವರಿಗೆ ಸೋತರು.

ಕವಿಪ್ರಿಯಾ ಸೆಲ್ವಂ– ಸಿಮ್ರಾನ್ ಸಿಂಘಿ ಜೋಡಿ ಮಹಿಳಾ ಡಬಲ್ಸ್ನಲ್ಲಿ 21–18, 13–21, 5–21 ರಲ್ಲಿ ಸ್ಪೇನ್ನ ಪೌಲಾ ಲೋಪೆಝ್– ಲೂಸಿಯಾ ರೋಡ್ರಿಗಸ್ ಜೋಡಿ ಎದುರು ಹಿಮ್ಮೆಟ್ಟಿತು. ಅಶ್ವಿನಿ ಭಟ್ ಕೆ– ಶಿಖಾ ಗೌತಮ್ ಜೋಡಿ 16–21, 11–21ರಲ್ಲಿ ಚೀನಾ ತೈಪೆಯ ಚಾಂಗ್ ಚಿಂಗ್ ಹುಯಿ– ಯಾಂಗ್ ಚಿಂಗ್ ತುನ್ ಎದುರು ಹಿಮ್ಮೆಟ್ಟಿತು.

ಪುರುಷರ ಡಬಲ್ಸ್ನಲ್ಲಿ ಏಳನೇ ಶ್ರೇಯಾಂಕದ ತಕುರೊ ಹೊಕಿ– ಯುಗೊ ಕೊಬಯಾಶಿ (ಜಪಾನ್) ಜೋಡಿ 21–15, 21–13 ರಿಂದ ಭಾರತದ ಹರಿಹರನ್ ಅಮ್ಸಕರುಣನ್– ಎಂ.ಆರ್.ಅರ್ಜುನ್ ಜೋಡಿಯನ್ನು ಮಣಿಸಿತು. ರೋಹನ್ ಕಪೂರ್ – ರುತ್ವಿಕಾ ಶಿವಾನಿ ಗದ್ದೆ ಜೋಡಿ ಮಿಶ್ರ ಡಬಲ್ಸ್ ಮೊದಲ ಸುತ್ತಿನಲ್ಲಿ 18–21, 20–22ರಲ್ಲಿ ಚೀನಾ ತೈಪೆಯ ಯಾಂಗ್ ಪೊ ಹಾನ್– ಹು ಲಿಂಗ್ ಫಾಂಗ್ ಅವರಿಗೆ ಮಣಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.