ಸಿಂಗಪುರ: ಒಲಿಂಪಿಕ್ಸ್ನಲ್ಲಿ ಎರಡು ಪದಕಗಳನ್ನು ಗೆದ್ದಿರುವ ಪಿ.ವಿ.ಸಿಂಧು ಮತ್ತುಲಕ್ಷ್ಯ ಸೇನ್ ಅವರು ಗುರುವಾರ ವಿಭಿನ್ನ ರೀತಿಯಲ್ಲಿ ತಮ್ಮ ಪಂದ್ಯಗಳನ್ನು ಗೆದ್ದುಸಿಂಗಪುರ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ಫೈನಲ್ಗೆ ಲಗ್ಗೆಯಿಟ್ಟರು. ಆದರೆ ಅಂತಿಮ ಹಂತದಲ್ಲಿ ಸರಣಿ ತಪ್ಪುಗಳನ್ನು ಎಸಗಿದ ಎಚ್.ಎಸ್.ಪ್ರಣಯ್ ಹೊರಬಿದ್ದರು.

ಮಾಜಿ ವಿಶ್ವ ಚಾಂಪಿಯನ್ ಸಿಂಧು ಮಹಿಳಾ ಸಿಂಗಲ್ಸ್ ಎರಡನೇ ಸುತ್ತಿನ ಪಂದ್ಯದಲ್ಲಿ ಜಪಾನ್ನ ರಿಕೊ ಗುಂಜಿ ಅವರನ್ನು 21–9, 21–12 ರಿಂದ ಸದೆಬಡಿದರು. ಗೆಲ್ಲಲು ಅವರಿಗೆ ಕೇವಲ 37 ನಿಮಿಷ ಹಿಡಿಯಿತು.

ಆದರೆ ಸಿಂಧು ಅವರಿಗೆ ಎಂಟರ ಘಟ್ಟದಲ್ಲಿ ಪ್ರಬಲ ಎದುರಾಳಿ ಆನ್ ಸೆ ಯಂಗ್ ಸವಾಲು ಎದುರಾಗಿದೆ. ಒಲಿಂಪಿಕ್ ಚಾಂಪಿಯನ್ ಆಗಿರುವ ದಕ್ಷಿಣ ಕೊರಿಯಾದ ಆಟಗಾರ್ತಿ ವಿರುದ್ಧ ಎಂಟು ಮುಖಾಮುಖಿಗಳಲ್ಲಿ ಸಿಂಧು ಒಮ್ಮೆಯೂ ಜಯಗಳಿಸಿಲ್ಲ. ಈ ವರ್ಷದ ಚೀನಾ ಓಪನ್ನಲ್ಲಿ ಕೊನೆಯ ಬಾರಿ ಎದುರಾಗಿದ್ದರು.

ಒಟ್ಟು ₹9.62 ಕೋಟಿ ಬಹುಮಾನ ಮೊತ್ತದ ಈ ಟೂರ್ನಿಯ ಪುರುಷರ ಸಿಂಗಲ್ಸ್ ಪ್ರಿಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಲಕ್ಷ್ಯ ಸೇನ್ ಅವರಿಗೆ ಬೆವರುಹರಿಸುವ ಪ್ರಮೇಯ ಬರಲಿಲ್ಲ. ಅವರು 2–0 ಯಿಂದ ಮುಂದಿದ್ದಾಗ ಎರಡನೇ ಶ್ರೇಯಾಂಕದ ಎದುರಾಳಿ ಕುನ್ಲಾವುತ್ ವಿದಿತ್ಸರ್ನ್ (ಥಾಯ್ಲೆಂಡ್) ಅವರು ಬೆನ್ನುನೋವಿನಿಂದಾಗಿ ಪಂದ್ಯ ಬಿಟ್ಟುಕೊಟ್ಟರು. ಜಪಾನ್ನ ಕೋಕಿ ವತಾನಬೆ ಅವರು ಲಕ್ಷ್ಯ ಅವರ ಮುಂದಿನ ಎದುರಾಳಿ ಆಗಿದ್ದಾರೆ.

ನಾಲ್ಕನೇ ಶ್ರೇಯಾಂಕದ ಡಬಲ್ಸ್ ಜೋಡಿ ಸಾತ್ವಿಕ್ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ ಅವರು ಗೆಲುವಿಗೆ ಬೆವರು ಹರಿಸಬೇಕಾಯಿತು. ಭಾರತದ ಆಟಗಾರರು 21–15, 11–21, 21–18 ರಿಂದ ಚೀನಾ ತೈಪೆಯ ಲೀ ಝೆ ಹುಯಿ – ಯಾಂಗ್ ಪೊ–ಸುವಾನ್ ಜೋಡಿಯನ್ನು ಸರಿಯಾಗಿ ಒಂದು ಗಂಟೆಯ ಹೋರಾಟದಲ್ಲಿ ಸೋಲಿಸಿದರು.

ಏಷ್ಯನ್ ಗೇಮ್ಸ್ ಚಾಂಪಿಯನ್ನರಾದ ಸಾತ್ವಿಕ್–ಚಿರಾಗ್ ಜೋಡಿ ಮುಂದಿನ ಪಂದ್ಯದಲ್ಲಿ ಮಲೇಷ್ಯಾದ ಖಾಯ್ ಷಿಂಗ್ ಕಾಂಗ್– ಆರನ್ ತಾಯ್ ಜೋಡಿಯನ್ನು ಎದುರಿಸಲಿದೆ.

ಸಿಂಗಲ್ಸ್ನಲ್ಲಿ, 33 ವರ್ಷ ವಯಸ್ಸಿನ ಪ್ರಣಯ್ ಅವರು 18–21, 21–16, 15–21 ರಿಂದ ಸ್ಥಳೀಯ ಫೇವರಿಟ್ ಲೊಹ್ ಕೀನ್ ಯೇ ಅವರಿಗೆ ಮಣಿದರು. ಮೂರನೇ ಗೇಮ್ನಲ್ಲಿ 14–11 ರಲ್ಲಿ ಮಹತ್ವದ ಮುನ್ನಡೆ ಪಡೆದಿದ್ದ ಅವರು ನಂತರ ತಪ್ಪುಗಳನ್ನು ಎಸಗಿದರು. ವಿಶೇಷವಾಗಿ ನೆಟ್ ಬಳಿ ಧಾವಿಸಿದಾಗ ತಪ್ಪುಗಳು ಹೆಚ್ಚಾದವು. ಇದರಿಂದ ಲೋಹ್ ಅವರು ನಂತರದ 11 ಪಾಯಿಂಟ್ಗಳಲ್ಲಿ ಹತ್ತನ್ನು ಪಡೆದು ಜಯಶಾಲಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.