ದಾವಣಗೆರೆ: ಲೀಗ್ ಹಂತದ ಮೂರು ಪಂದ್ಯಗಳಲ್ಲೂ ಗೆದ್ದು ಬೀಗಿದ ಆತಿಥೇಯ ದಾವಣಗೆರೆ ವಿಶ್ವವಿದ್ಯಾಲಯದ ಪುರುಷರ ತಂಡ ಇಲ್ಲಿ ನಡೆಯುತ್ತಿರುವ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯಗಳ ಕೊಕ್ಕೊ ಟೂರ್ನಿಯಲ್ಲಿ ಚಾಂಪಿಯನ್ ಆಯಿತು.

ವಿ.ವಿ. ಆವರಣದ ಅಂಕಣಗಳಲ್ಲಿ ಭಾನುವಾರ ದಾವಣಗೆರೆ ತಂಡದ ಆಟಗಾರರು ಮಿಂಚಿದರು. ಹಾಲಿ ಚಾಂಪಿಯನ್ ಮಂಗಳೂರು ವಿ.ವಿ (17–15), ಬೆಂಗಳೂರು ಉತ್ತರ ವಿ.ವಿ (10–8) ಹಾಗೂ ಕ್ಯಾಲಿಕಟ್ ವಿ.ವಿ (13–12) ತಂಡಗಳನ್ನು ಸೋಲಿಸಿ ಮೊದಲ ಬಾರಿಗೆ ಟ್ರೋಫಿ ಎತ್ತಿ ಹಿಡಿದರು. ಆತಿಥೇಯ ತಂಡದ ಟಿ.ಹುಲಗಪ್ಪ, ಶರತ್, ಆಕಾಶ್, ಆಸೀಫ್ ಹಾಗೂ ವೇಣುಗೋಪಾಲ್ ಅತ್ಯುತ್ತಮವಾಗಿ ಆಡಿದರು.

ಮಂಗಳೂರು ವಿ.ವಿ ವಿರುದ್ಧದ ನಿರ್ಣಾಯಕ ಪಂದ್ಯದ ಮೊದಲಾರ್ಧದಲ್ಲಿ ದಾವಣಗೆರೆ ತಂಡ 8–9ರಿಂದ ಹಿಂದಿತ್ತು. ಆದರೆ ದ್ವಿತೀಯಾರ್ಧದಲ್ಲಿ ಪುಟಿದೆದ್ದು ಗೆಲುವು ಒಲಿಸಿಕೊಂಡಿತು.

ಆಡಿದ ಮೂರರಲ್ಲಿ ಎರಡು ಪಂದ್ಯಗಳನ್ನು ಗೆದ್ದು ಒಟ್ಟು 6 ಪಾಯಿಂಟ್ಸ್ ಕಲೆಹಾಕಿದ ಮಂಗಳೂರು ವಿ.ವಿ ರನ್ನರ್ಸ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು. ಬೆಂಗಳೂರು ಉತ್ತರ ವಿ.ವಿ ಹಾಗೂ ಕ್ಯಾಲಿಕಟ್ ವಿ.ವಿ ತಂಡಗಳು ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನ ಪಡೆದವು.

ಮಂಗಳೂರು ತಂಡದ ಸಂಗೀತ್ ಗೌಡ ಅತ್ಯುತ್ತಮ ರಕ್ಷಣಾ ಆಟಗಾರ, ಬೆಂಗಳೂರು ಉತ್ತರ ತಂಡದ ಜಸ್ವಂತ್ ಉತ್ತಮ ‘ಅಟ್ಯಾಕರ್’, ದಾವಣಗೆರೆ ತಂಡದ ಟಿ.ಹುಲಗಪ್ಪ ಅತ್ಯುತ್ತಮ ಆಲ್ರೌಂಡರ್ ಹಾಗೂ ಕ್ಯಾಲಿಕಟ್ ತಂಡದ ಗೋಕುಲ್ ದಾಸ್ ಉದಯೋನ್ಮುಖ ಆಟಗಾರ ಪ್ರಶಸ್ತಿ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.