ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಷ್ಟ್ರೀಯ ಚೆಸ್‌: ಸೂರ್ಯಶೇಖರ ಗಂಗೂಲಿ ಮುನ್ನಡೆ ಅಬಾಧಿತ

Published : 24 ಆಗಸ್ಟ್ 2024, 17:10 IST
Last Updated : 24 ಆಗಸ್ಟ್ 2024, 17:10 IST
ಫಾಲೋ ಮಾಡಿ
Comments

ಗುರುಗ್ರಾಮ (ಹರಿಯಾಣ): ಅಗ್ರ ಶ್ರೇಯಾಂಕದ ಸೂರ್ಯಶೇಖರ ಗಂಗೂಲಿ ಅವರ ಸತತ ಗೆಲುವಿನ ಓಟಕ್ಕೆ ರೈಲ್ವೇಸ್‌ನ ದೀಪ್ತಾಯನ್ ಘೋಷ್‌ ‘ಡ್ರಾ’ ಮೂಲಕ ತಡೆಯೊಡ್ಡಿದರು. 61ನೇ ರಾಷ್ಟ್ರೀಯ ಚೆಸ್‌ ಚಾಂಪಿಯನ್‌ಷಿಪ್‌ನ ಎಂಟನೇ ಸುತ್ತಿನಲ್ಲಿ ಗಂಗೂಲಿ ಶನಿವಾರ ದೀಪ್ತಾಯನ್ ಜೊತೆ ಪಾಯಿಂಟ್‌ ಹಂಚಿಕೊಳ್ಳಬೇಕಾಯಿತು.

ಆರು ಬಾರಿಯ ಚಾಂಪಿಯನ್ ಆಗಿರುವ ಗಂಗೂಲಿ (ಪೆಟ್ರೋಲಿಯಂ ಕ್ರೀಡಾ ಪ್ರೋತ್ಸಾಹಕ ಮಂಡಳಿ) ಸತತವಾಗಿ ಏಳು ಪಂದ್ಯಗಳನ್ನು ಗೆದ್ದಿದ್ದರು. ಅವರು ಏಳೂವರೆ ಪಾಯಿಂಟ್‌ಗಳೊಡನೆ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ.

9 ಮಂದಿ ಆಟಗಾರರು ತಲಾ 6.5 ಪಾಯಿಂಟ್ಸ್‌ಗಳಡೊನೆ ಎರಡನೇ ಸ್ಥಾನದಲ್ಲಿದ್ದಾರೆ. ಹಾಲಿ ಚಾಂಪಿಯನ್‌ ಎಸ್‌.ಪಿ.ಸೇತುರಾಮನ್, ದೀಪ್ತಾಯನ ಘೋಷ್‌, ಕಾರ್ತಿಕ್ ವೆಂಕಟರಾಮ್‌, ಅರಣ್ಯಕ್ ಘೋಷ್‌, ಶ್ರೀರಾಮ್‌ ಝಾ, ಲಲಿತ್‌ಬಾಬು, ಅರ್ಜುನ್ ಆದಿರೆಡ್ಡಿ, ಅಜಯ್ ಕಾರ್ತಿಕೇಯನ್, ಹಿಮಲ್‌ ಗುಸೇನ್ ಎರಡನೇ ಸ್ಥಾನದಲ್ಲಿದ್ದಾರೆ. 19 ಆಟಗಾರರು ತಲಾ 6 ಅಂಕ ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT