ಬೆಂಗಳೂರು: ಚಿಕ್ಕಮಗಳೂರಿನ ಸ್ನೇಹಾ ಎಸ್.ಎಸ್ ಅವರು ಕರ್ನಾಟಕ ರಾಜ್ಯ ಅಥ್ಲೆಟಿಕ್ ಕೂಟದ ಮಹಿಳೆಯರ 100 ಮೀ ಓಟದ ಸ್ಪರ್ಧೆಯಲ್ಲಿ ಕೂಟ ದಾಖಲೆ ನಿರ್ಮಿಸಿದರು.
ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ಆರಂಭವಾದ ಎರಡು ದಿನಗಳ ಕೂಟದಲ್ಲಿ ಅವರು ಈ ಸ್ಪರ್ಧೆಯನ್ನು 11.30 ಸೆಕೆಂಡುಗಳಲ್ಲಿ ಕ್ರಮಿಸಿ ದಾಖಲೆ ನಿರ್ಮಿಸಿದರು. ಈ ಹಿಂದಿನ ದಾಖಲೆ ಸ್ನೇಹಾ.ಪಿ.ಜೆ (2018ರಲ್ಲಿ 11.32 ಸೆ.) ಅವರ ಹೆಸರಿನಲ್ಲಿತ್ತು.
ಫಲಿತಾಂಶಗಳು:
ಪುರುಷರು: 200 ಮೀ.ಓಟ: ಪ್ರಸನ್ನಕುಮಾರ್ (ಬೆಂಗಳೂರು ನಗರ)–1, ಗುರುಪ್ರಸಾದ್ ಡಿ.ಸಿ. (ಮೈಸೂರು)–2, ವಿನಾಯಕ (ಬೆಂಗಳೂರು ನಗರ)–3, ಕಾಲ: 21ಸೆ. 800 ಮೀ.ಓಟ: ತುಷಾರ್ (ಬೆಂಗಳೂರು ನಗರ)–1, ಲೋಕೇಶ್ ಕೆ.(ಬೆಂಗಳೂರು ನಗರ)–2, ಬೋಪಣ್ಣ ಟಿ.ಕೆ.(ಮೈಸೂರು)–3, ಕಾಲ: 1ನಿ.49.1ಸೆ; 1500 ಮೀ ಓಟ: ಸುದೀಪ್ ಇ. (ರಾಮನಗರ) 1, ಭೀಮಾಶಂಕರ್ (ಬೆಂಗಳೂರು ನಗರ) 2, ವೈಭವ್ ಪಾಟೀಲ್ (ಬೆಳಗಾವಿ) 3, ಕಾಲ: 4ನಿ.1.50ಸೆ.;
ಮಹಿಳೆಯರು: 100 ಮೀ.ಓಟ: ಸ್ನೇಹಾ ಎಚ್.ಎಸ್ (ಆದಾಯ ತೆರಿಗೆ ಇಲಾಖೆ)–1, ದಾನೇಶ್ವರಿ (ಬೆಳಗಾವಿ)–2, ಕಾವೇರಿ ಎಲ್.ಪಾಟೀಲ–3, ದಾಖಲೆ: 11.30ಸೆ. ಹಳೆದು: 11.32 ಸೆ.;
200 ಮೀ.ಓಟ: ಬಿ.ಉನ್ನತಿ ಅಯ್ಯಪ್ಪ (ಬೆಂಗಳೂರು ನಗರ)–1, ಜ್ಯೋತಿಕಾ (ಬೆಂಗಳೂರು ನಗರ)–2, ಕಾವೇರಿ ಎಲ್.ಪಾಟೀಲ್ (ಬೆಳಗಾವಿ)–3, ಕಾಲ: 23.50ಸೆ.; 400 ಮೀ.ಓಟ: ಪ್ರಜ್ಞಾ ಕೆ.(ಉಡುಪಿ)–1, ಜ್ಯೋತಿಕಾ (ಬೆಂಗಳೂರು ನಗರ)–2, ದಿಶಾ ಅಳಿಗ (ಚಿಕ್ಕಮಗಳೂರು)–3, 800 ಮೀ.ಓಟ: ಅರ್ಪಿತಾ ಇ.ಬಿ.(ಶಿವಮೊಗ್ಗ)–1, ಅರ್ಪಿತಾ ಎಂ.ಎನ್.(ಬೆಂಗಳೂರು ನಗರ)–2, ಠಾಕೂರ್ ಸ್ಪೂರ್ತಿ ಸಿಂಗ್ (ಬೆಂಗಳೂರು ನಗರ)–3, ಕಾಲ: 2ನಿ 9.00ಸೆ.; ಕಾಲ: 54.96ಸೆ.;1500 ಮೀ.ಓಟ: ರಾಶಿ (ಬೆಂಗಳೂರು ನಗರ)–1, ಪ್ರಿಯಾಂಕಾ ಸಿ.(ಬೆಂಗಳೂರು ನಗರ)–2, ಠಾಕೂರ್ ಸ್ಫೂರ್ತಿ ಸಿಂಗ್ (ಬೆಂಗಳೂರು ನಗರ)–3, ಕಾಲ: 4ನಿ 45.06ಸೆ,; 5000 ಮೀ.ಓಟ: ನೀತು ಕುಮಾರಿ (ಬೆಂಗಳೂರು ನಗರ)–1, ಮರಿಯಾ ಲವಿನಾ (ದಕ್ಷಿಣ ಕನ್ನಡ)–2, ಕಾಲ: 18 ನಿ.16.4ಸೆ.; 100 ಮೀ. ಹರ್ಡಲ್ಸ್: ಬಿ.ಉನ್ನತಿ ಅಯ್ಯಪ್ಪ (ಬೆಂಗಳೂರು ನಗರ)–1, ಕಾಲ: 14.10 ಸೆ.; 400 ಮೀ.ಹರ್ಡಲ್ಸ್: ಪ್ರಜ್ಞಾ ಕೆ.(ಉಡುಪಿ)–1, ಶ್ರೇಯಾ ಪಾಟೀಲ್ (ಬೆಂಗಳೂರು ನಗರ)–2, ದೀಕ್ಷಿತಾ ಆರ್.ಜಿ.(ದಕ್ಷಿಣ ಕನ್ನಡ)–3, ಕಾಲ: 59.34 ಸೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.