ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಮಹಿಳಾ ಚೆಸ್ ಟೂರ್ನಿ ಮೇ 18ರಿಂದ

Published 8 ಮೇ 2023, 19:45 IST
Last Updated 8 ಮೇ 2023, 19:45 IST
ಅಕ್ಷರ ಗಾತ್ರ

ಬೆಂಗಳೂರು: ರೇನ್‌ಬೊ ಕ್ಲಬ್‌ ಕಿಡ್ಜ್ ಲೈಬ್ರರಿ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಚೆಸ್‌ ಚಾಂಪಿಯನ್‌ಷಿಪ್‌ ಇದೇ ತಿಂಗಳ 18 ರಿಂದ 20ರವರೆಗೆ ವಿಜಯನಗರ ಆರ್‌ಪಿಸಿ ಲೇಔಟ್‌ನ ಹಂಪಿನಗರದ ನಗರ ಕೇಂದ್ರ ಗ್ರಂಥಾಲಯದಲ್ಲಿ (ಪಶ್ಚಿಮ ವಲಯ) ನಡೆಯಲಿದೆ.

ಟೂರ್ನಿಯು ₹40,000 ಬಹುಮಾನ ಹೊಂದಿದೆ. ಮೊದಲ ಮೂರು ಸ್ಥಾನ ಪಡೆದ ಆಟಗಾರ್ತಿಯರಿಗೆ ಟ್ರೋಫಿ ಮತ್ತು ನಗದು ಬಹುಮಾನ ನೀಡಲಾಗುವುದು. ಮೊದಲ ಎರಡು ಸ್ಥಾನ ಪಡೆದವರು ರಾಷ್ಟ್ರೀಯ ಮಹಿಳಾ ಚೆಸ್‌ ಚಾಂಪಿಯನ್‌ಷಿಪ್‌ಲ್ಲಿ ರಾಜ್ಯವನ್ನು ಪ್ರತಿನಿಧಿಸುವರು. ವಯೋವರ್ಗ (8, 10, 12 ಮತ್ತು 15 ವರ್ಷದೊಳಗಿನವರ) ವಿಭಾಗದಲ್ಲೂ ಟ್ರೋಫಿಗಳನ್ನು ನೀಡಲಾಗುವುದು. ನೋಂದಾಯಿಸಲು ಕೊನೆಯ ದಿನ ಮೇ 16. ವಿವರಗಳಿಗೆ 9449340975 ಅಥವಾ 9448292516 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT