ಬೆಂಗಳೂರು: ಎಂಟನೇ ಆವೃತ್ತಿಯ ರಾಷ್ಟ್ರೀಯ ಓಪನ್ ಪ್ಯಾರಾ ಅಥ್ಲೆಟಿಕ್ಸ್ ಅಂತರರಾಷ್ಟ್ರೀಯ ಚಾಂಪಿಯನ್ಷಿಪ್ ಬೆಂಗಳೂರಿನಲ್ಲಿ ಮಂಗಳವಾರ ಆರಂಭವಾಗಲಿದೆ.

ನಗರದ ಕಂಠೀರವ ಕ್ರೀಡಾಂಗಣ ದಲ್ಲಿ 3 ದಿನ ನಡೆಯಲಿರುವ ಈ ಚಾಂಪಿಯನ್ಷಿಪ್ನಲ್ಲಿ ಭಾರತ ಸೇರಿ ಒಟ್ಟು 5 ರಾಷ್ಟ್ರಗಳ ಪ್ಯಾರಾ ಅಥ್ಲೀಟ್ಗಳು ಪಾಲ್ಗೊಳ್ಳಲಿದ್ದಾರೆ.

ಪ್ಯಾರಾಲಿಂಪಿಕ್ಸ್ನಲ್ಲಿ ಎರಡು ಬಾರಿ ಸ್ವರ್ಣ ಜಯಿಸಿರುವ ಜಾವೆಲಿನ್ ಪಟು ಸುಮಿತ್ ಅಂಟಿಲ್ ಅವರು ಕೂಟದ ಪ್ರಮುಖ ಆಕರ್ಷಣೆಯಾಗಿದ್ದಾರೆ.

ಈ ಕೂಟವು ಜಪಾನ್ನಲ್ಲಿ ಅಕ್ಟೋಬರ್ 18ರಿಂದ 24ರ ವರೆಗೆ ನಡೆಯಲಿರುವ 5ನೇ ಆವೃತ್ತಿಯ ಏಷ್ಯನ್ ಪ್ಯಾರಾ ಗೇಮ್ಸ್ಗೆ ಆಯ್ಕೆ ಟ್ರಯಲ್ಸ್ ಆಗಿರಲಿದೆ ಎಂದು ಭಾರತ ಪ್ಯಾರಾಲಿಂಪಿಕ್ಸ್ ಸಮಿತಿ ಅಧ್ಯಕ್ಷ ದೇವೇಂದ್ರ ಝಝಾರಿಯಾ ಭಾನುವಾರ ತಿಳಿಸಿದರು.

ಭಾರತದ 341 ಪ್ಯಾರಾ ಅಥ್ಲೀಟ್ಗಳು ಹಾಗೂ ಕಿರ್ಗಿಸ್ತಾನ, ಫಿಲಿಪ್ಪೀನ್ಸ್, ಶ್ರೀಲಂಕಾ ಹಾಗೂ ಥಾಯ್ಲೆಂಡ್ನ ಸ್ಪರ್ಧಿಗಳು ಕೂಟದಲ್ಲಿ ಭಾಗವಹಿಸಲಿದ್ದಾರೆ. ಅಫ್ಗಾನಿಸ್ತಾನದಕೆಲ ಸ್ಪರ್ಧಿಗಳೂ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಝಝಾರಿಯಾ ಹೇಳಿದರು.

ಕೂಟದಲ್ಲಿ 100 ಮೀ., 200 ಮೀ., 400 ಮೀ., 800 ಮೀ., 1,500 ಮೀ. ಓಟ, ಹೈಜಂಪ್, ಲಾಂಗ್ ಜಂಪ್, ಶಾಟ್ಪಟ್, ಜಾವೆಲಿನ್ ಥ್ರೋ ಸೇರಿದಂತೆ ಪುರುಷ ಹಾಗೂ ಮಹಿಳೆಯರ ಒಟ್ಟು 155 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

ರಾಜ್ಯದ 15 ಪ್ಯಾರಾ ಅಥ್ಲೀಟ್ಗಳು ಭಾಗಿ: ಕೂಟದಲ್ಲಿ ಕರ್ನಾಟಕದ 15 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಮಂಜುಳಾ, ಭಾರತಿ ಭಾರತೇಶ್, ಗಂಗವ್ವ ನೀಲಪ್ಪ, ಹರ್ಷಿತಾ, ಶೈಲಾ ಶಿಲ್ಪಾ, ಮೇಧಾ ಜಯಂತ್, ರಾಧಾ ವೆಂಕಟೇಶ್, ರಕ್ಷಿತಾ ರಾಜು, ಸೌಮ್ಯ, ಬಸವರಾಜ ಕುರುಬ, ಸಚ್ಚಿದಾನಂದ ದೇವಾಡಿಗ, ಗುರುರಾಜು, ಶಂಕರಪ್ಪ ಶರತ್, ರಕ್ಷಿತ್ ಹೊಸನಗರ ಸೋಮಶೇಖರ, ಸಿದ್ದಾರ್ಥ್ ಮಂಜುನಾಥ್ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-51-2113749760

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.