ನವದೆಹಲಿ: ಪ್ಯಾರಾಲಿಂಪಿಕ್ ಡಬಲ್ ಚಿನ್ನ ವಿಜೇತ ಜಾವೆಲಿನ್ ಥ್ರೋಪಟು ಸುಮಿತ್ ಆಂಟಿಲ್ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರ್ಯಾನ್ಪ್ರಿನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಟೋಕಿಯೊ ಮತ್ತು ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ ಸತತ ಎರಡು ಚಿನ್ನದ ಪದಕಗಳನ್ನು ಗೆದ್ದಿರುವ ಭಾರತದ ಸುಮಿತ್ ಅವರು ಗುರುವಾರ ನಡೆದ ಪುರುಷರ ಜಾವೆಲಿನ್ ಥ್ರೋ (ಎಫ್43/ಎಫ್44/ಎಫ್64) ಸ್ಪರ್ಧೆಯಲ್ಲಿ 69.25 ಮೀಟರ್ ಸಾಧನೆಯೊಂದಿಗೆ ಅಗ್ರಸ್ಥಾನಿಯಾದರು.

ಪುಷ್ಪೇಂದ್ರ ಸಿಂಗ್ ಅವರು ಈಟಿಯನ್ನು 56.91 ಮೀಟರ್ ದೂರ ಎಸೆಯುವ ಮೂಲಕ ಬೆಳ್ಳಿ ಪದಕ ಗೆದ್ದರೆ, ಪೂನಂ ರಾಮ್ (49.48 ಮೀ) ಕಂಚಿನ ಪದಕ ಗೆದ್ದರು.

‘ನಾನು ಇಲ್ಲಿ ಸುಮಾರು 67ರಿಂದ 68 ಮೀಟರ್ ದೂರ ಥ್ರೋ ನಿರೀಕ್ಷಿಸಿದ್ದೆ, ಆದರೆ, ಅದಕ್ಕಿಂತ ಉತ್ತಮವಾಗಿ ಬಂತು. ಹಾಗಾಗಿ ಸಂತೋಷವಾಗಿದೆ’ ಎಂದು ಹರಿಯಾಣದ ಸೋನಿಪತ್ನ 27 ವರ್ಷದ ಸುಮಿತ್ ಪ್ರತಿಕ್ರಿಯಿಸಿದರು.

‘ವರ್ಷದ ಕೊನೆಯಲ್ಲಿ ಜಪಾನ್ನಲ್ಲಿ ನಡೆಯಲಿರುವ ಏಷ್ಯನ್ ಪ್ಯಾರಾ ಕ್ರೀಡಾಕೂಟದತ್ತ ಹೆಚ್ಚಿನ ಗಮನಹರಿಸಿದ್ದು, 75 ಮೀಟರ್ ಗಡಿ ದಾಟುವ ಗುರಿ ಹೊಂದಿದ್ದೇನೆ’ ಎಂದು ಮೂರು ಬಾರಿಯ ವಿಶ್ವ ಚಾಂಪಿಯನ್ ಆಗಿರುವ ಅವರು ಹೇಳಿದರು.

ಪುರುಷರ 400 ಮೀಟರ್ ಟಿ13 ಸ್ಪರ್ಧೆಯಲ್ಲೂ ಭಾರತ ಪ್ರಾಬಲ್ಯ ಸಾಧಿಸಿತು. ಸುಬೋಧ್ ಭಟ್ 51.88 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರೆ, ಪ್ರಿಯಾಂಶು ಕೌಶಿಕ್ (53.19 ಸೆ) ಮತ್ತು ಅವನಿಲ್ ಕುಮಾರ್ (56.91 ಸೆ) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳಿಗೆ ಮುತ್ತಿಕ್ಕಿದರು.

ಪುರುಷರ 400 ಮೀಟರ್ ಟಿ53/ಟಿ54 ಸ್ಪರ್ಧೆಯ ವೀಲ್ಚೇರ್ ವಿಭಾಗದಲ್ಲೂ ಆತಿಥೇಯ ತಂಡವು ತನ್ನ ಪ್ರಾಬಲ್ಯ ಮುಂದುವರಿಸಿತು. ಮನೋಜ್ಕುಮಾರ್ ಸಬಪತಿ 54.33 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ಅನಿಲ್ ಕುಮಾರ್ (57.57 ಸೆ) ಮತ್ತು ಮಣಿಕಂಠನ್ ಜ್ಯೋತಿ (1 ನಿ.01.94ಸೆ) ಕ್ರಮವಾಗಿ ನಂತರದ ಸ್ಥಾನ ಪಡೆದರು.

ಪುರುಷರ ಲಾಂಗ್ ಜಂಪ್ ಟಿ42/ಟಿ63 ಸ್ಪರ್ಧೆಯಲ್ಲೂ ಭಾರತ ಮೂರೂ ಪದಕ ಗೆದ್ದುಕೊಂಡಿತು. ಶಾಲಿಯೇಶ್ ಕುಮಾರ್ 5.47 ಮೀಟರ್ ಜಿಗಿತದೊಂದಿಗೆ ಚಿನ್ನ ಗೆದ್ದರು. ಗೋವಿಂದಭಾಯ್ ಪಡಿಯಾರ್ (4.68 ಮೀ) ಬೆಳ್ಳಿ ಮತ್ತು ಸೋಲೈರಾಜ್ ಜಗನ್ನಾಥನ್ (3.23 ಮೀ) ಕಂಚಿನ ಪದಕ ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.