ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಈಜು: ದರ್ಶನ್ ಕೂಟ ದಾಖಲೆ

Published : 7 ಆಗಸ್ಟ್ 2024, 22:51 IST
Last Updated : 7 ಆಗಸ್ಟ್ 2024, 22:51 IST
ಫಾಲೋ ಮಾಡಿ
Comments

ಬೆಂಗಳೂರು: ಕರ್ನಾಟಕದ ದರ್ಶನ್ ಎಸ್. ಒಡಿಶಾದ ಭುವನೇಶ್ವರದಲ್ಲಿ ನಡೆಯುತ್ತಿರುವ 40ನೇ ಸಬ್ ಜೂನಿಯರ್ ಮತ್ತು 50ನೇ ಜೂನಿಯರ್ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಕೂಟ ದಾಖಲೆ ನಿರ್ಮಿಸಿದರು.

ಬಾಲಕರ ಗುಂಪು–1ರ 1500 ಮೀ. ಫ್ರೀಸ್ಟೈಲ್ ವಿಭಾಗದಲ್ಲಿ 16ನಿ. 01.09 ಸೆಕೆಂಡುಗಳಲ್ಲಿ ಗುರಿ ತಲುಪಿದರು. 2022ರಲ್ಲಿ ಮಹಾರಾಷ್ಟ್ರದ ವೇದಾಂತ ಮಾಧವನ್ ನಿರ್ಮಿಸಿದ್ದ (16ನಿ 01.73 ಸೆ) ದಾಖಲೆಯನ್ನು ದರ್ಶನ್ ಮುರಿದರು.

ಕರ್ನಾಟಕದ ಈಜುಪಟುಗಳು ಬುಧವಾರ ಅಂತ್ಯಕ್ಕೆ ನಾಲ್ಕು ಚಿನ್ನ ಗೆದ್ದರು.

ರಾಜ್ಯದ ಸ್ಪರ್ಧಿಗಳ ಫಲಿತಾಂಶ: ಬಾಲಕರ ಗುಂಪು–1: 1500 ಮೀ. ಫ್ರೀಸ್ಟೈಲ್‌: ದರ್ಶನ್‌ ಎಸ್‌. (16ನಿ 01.09ಸೆ)–1. 50 ಮೀ.ಬಟರ್‌ಫ್ಲೈ: ಚಿಂತನ್‌ ಎಸ್‌.ಶೆಟ್ಟಿ (25.42 ಸೆ)–2, ಆರ್ಯನ್‌ ಕೈಲಾಸ್‌ ಭಟ್‌ಭಟ್‌ (25.75ಸೆ). ಗುಂಪು–2: 100 ಮೀ ಬ್ಯಾಕ್‌ಸ್ಟ್ರೋಕ್‌: ಸಮರ್ಥ್‌ ಗೌಡ ಬಿ.ಎಸ್‌.(1.ನಿ 1.06ಸೆ)–1. ಗುಂಪು–3: 200 ಮೀ.ಮೆಡ್ಲೆ: ಲೋಹಿತಾಶ್ವ ನಾಗೇಶ್‌ ಶಶಿಕುಮಾರ್‌ (2ನಿ 41.96ಸೆ)–1.  ಬಾಲಕಿಯರ ಗುಂಪು–3: 100 ಮೀ 100 ಫ್ರೀಸ್ಟೈಲ್‌: ಶ್ವಿತಿ ಸುವರ್ಣ (1ನಿ 7.92ಸೆ)–3. 200 ಮೀ. ಮೆಡ್ಲೆ: ಶ್ರೇಯಾ ಸುರೇಶ್‌ ಪೂಜಾರ್‌ (2ನಿ 50.09 ಸೆ)–3  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT