ಬಾಸೆಲ್: ಆಯುಷ್ ಶೆಟ್ಟಿ ಮತ್ತು ತನ್ವಿ ಶರ್ಮಾ ಅವರನ್ನು ಒಳಗೊಂಡಂತೆ ಭಾರತದ ಹೆಚ್ಚಿನ ಷಟ್ಲರ್ಗಳು ಬುಧವಾರ ಸ್ವಿಸ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದರು. ಆದರೆ ಶ್ರೇಯಾಂಕರಹಿತ ಆಟಗಾರ ಕಿರಣ್ ಜಾರ್ಜ್ ನೇರ ಆಟಗಳಿಂದ ಮೂರನೇ ಶ್ರೇಯಾಂಕದ ಲೋಹ್ ಕೀನ್ ಯಿವ್ ಅವರಿಗೆ ಆಘಾತ ನೀಡಿದರು.

41 ನಿಮಿಷ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಕಿರಣ್ 23–21, 21–19 ರಿಂದ ಸಿಂಗಪುರದ ಆಟಗಾರನನ್ನು ಸೋಲಿಸಿದರು. ಲೋಹ್ ಅವರು ವಿಶ್ವಕ್ರಮಾಂಕದಲ್ಲಿ 11ನೇ ಸ್ಥಾನದಲ್ಲಿದ್ದಾರೆ.

ಅಮೆರಿಕ ಓಪನ್ ಮಾಜಿ ಚಾಂಪಿಯನ್ ಆಯುಷ್ ಶೆಟ್ಟಿ ಅವರು ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ 18–21, 19–21 ರಲ್ಲಿ ಕೆನಡಾದ ಬ್ರಯಾನ್ ಯಾಂಗ್ ಅವರಿಗೆ ಮಣಿದರು. ಯಾಂಗ್ ಈ ಗೆಲುವಿನೊಡನೆ ಪ್ರಿಕ್ವಾರ್ಟರ್ಫೈನಲ್ ತಲುಪಿದರು.

ಮಹಿಳೆಯರ ಸಿಂಗಲ್ಸ್ನಲ್ಲಿ ತೈವಾನ್ನ ಚಿಯು ಪಿನ್–ಚಿಯಾನ್ 21–14, 21–14 ರಿಂದ ಉನ್ನತಿ ಹೂಡಾ ಅವರನ್ನು ನೇರ ಆಟಗಳಲ್ಲಿ ಮಣಿಸಿ 16ರ ಸುತ್ತಿಗೆ ಮುನ್ನಡೆದರು.

ಅಗ್ರ ಶ್ರೇಯಾಂಕದ ಪುತ್ರಿ ಕುಸುಮ ವಾರ್ದನಿ ಅವರು 21–11, 21–10 ರಿಂದ ಭಾರತದ ತನ್ವಿ ಶರ್ಮಾ ಅವರನ್ನು ಸುಲಭವಾಗಿ ಸೋಲಿಸಿದರು. ಇಂಡೊನೇಷ್ಯಾ ಆಟಗಾರ್ತಿ ಕೇವಲ ಅರ್ಧ ಗಂಟೆಯಲ್ಲಿ ಪಂದ್ಯ ಗೆದ್ದರು.

ಈ ಹಿನ್ನಡೆಗಳ ಮಧ್ಯೆಯೇ 2023ರ ವಿಶ್ವ ಚಾಂಪಿಯನ್ಷಿಪ್ ಕಂಚಿನ ಪದಕ ವಿಜೇತ ಎಚ್.ಎಸ್.ಪ್ರಣಯ್, ಜಪಾನ್ನ ಕೋಕಿ ವತಾನಬೆ ಅವರಿಗೆ ವಾಕ್ ಓವರ್ ನೀಡಿದರು.

ಮಿಶ್ರ ಡಬಲ್ಸ್ನಲ್ಲಿ ರೋಹನ್ ಕಪೂರ್– ರುತ್ವಿಕಾ ಶಿವಾನಿ ಜೋಡಿ, ಐದನೇ ಶ್ರೇಯಾಂಕದ ರುತ್ತನಪಕ್ ಔಪ್ತಾಂಗ್– ಜೆನಿಚಾ ಸುದ್ಜೈಪ್ರಪಾರತ್ (ಥಾಯ್ಲೆಂಡ್) ಅವರಿಗೆ 19–21, 14–21 ರಲ್ಲಿ ಮಣಿಯಿತು.

ಮಂಗಳವಾರ ರಾತ್ರಿ ನಡೆದ ಪುರುಷರ ಡಬಲ್ಸ್ ಮೊದಲ ಸುತ್ತಿನಲ್ಲಿ, ವಿಶ್ವದ ನಾಲ್ಕನೇ ಕ್ರಮಾಂಕದ ಜೋಡಿಯಾದ ಸಾತ್ವಿಕ್ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ ಜೋಡಿ 21–19, 21–19 ರಿಂದ ಸಿಂಗಪುರದ ಇಂಗ್ ಕೀಟ್ ವೆಸ್ಲಿ ಕೊ– ಜುನ್ಸುಕೆ ಕುಬೊ ಜೋಡಿಯನ್ನು ಸೋಲಿಸಿ ಅಂತಿಮ 16ರ ಸುತ್ತು ತಲುಪಿತ್ತು.

ಎಚ್.ಅಮ್ಸಕರುಣ್– ಎಂ.ಆರ್.ಅರ್ಜುನ್ ಜೋಡಿ ಮೊದಲ ಸುತ್ತಿನಲ್ಲಿ 21–16, 24–22 ರಲ್ಲಿ ತೈವಾನ್ನ ಚೆನ್ ಝಿ ರೇ–ಲಿನ್ ಯು ಚಿಯಾ ಅವರನ್ನು ಸೋಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.