ಬಾಸೆಲ್: ಅನುಭವಿ ಆಟಗಾರ್ತಿ ಪಿ.ವಿ.ಸಿಂಧು ಅವರು ಮಂಗಳವಾರ ಆರಂಭವಾಗಲಿರುವ ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಅವರ ಗೈರಿನಲ್ಲಿ ಎಚ್.ಎಸ್.ಪ್ರಣಯ್ ಹಾಗೂ ಕಿದಂಬಿ ಶ್ರೀಕಾಂತ್ ಅವರು ಭಾರತದ ಸವಾಲು ಮುನ್ನಡೆಸಲಿದ್ದಾರೆ.

ಸಿಂಧು ಅವರು ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾಗವಹಿಸಲು ಬರ್ಮಿಂಗ್ಹ್ಯಾಮ್ಗೆ ತೆರಳುವ ಮಾರ್ಗಮಧ್ಯೆ ದುಬೈನಲ್ಲಿ ಸಿಲುಕಿಕೊಂಡಿದ್ದರು. ವಾಯುಮಾರ್ಗ ನಿರ್ಬಂಧದಿಂದಾಗಿ ಇಂಗ್ಲೆಂಡ್ಗೆ ತೆರಳಲಾಗದೆ ಬೆಂಗಳೂರಿಗೆ ಮರಳಿದ್ದರು.

ದುಬೈ ವಿಮಾನ ನಿಲ್ದಾಣದಲ್ಲಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಹಾಗೂ ಅಲ್ಲಿ ಎದುರಾದ ಸಂಕಷ್ಟಗಳಿಂದಾಗಿ ಸಿಂಧು ಅವರು ಭೀತಿಗೊಳಗಾಗಿದ್ದಾರೆ. ಅದರಿಂದ ಹೊರಬರಲು ಸದ್ಯ ಯಾವುದೇ ಟೂರ್ನಿಗಳಲ್ಲಿ ಆಡದಿರಲು ನಿರ್ಧರಿಸಿದ್ದಾರೆ. ಅವರು ಏಪ್ರಿಲ್ನಲ್ಲಿ ನಡೆಯಲಿರುವ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ಷಿಪ್ಸ್ನಲ್ಲಿ ಕಣಕ್ಕಿಳಿಯಬಹುದು ಎನ್ನಲಾಗಿದೆ.

ಶ್ರೀಕಾಂತ್ ಅವರು ಹಾಂಗ್ಕಾಂಗ್ನ ಜೇಸನ್ ಗುನವನ್ ವಿರುದ್ಧ ಅಭಿಯಾನ ಆರಂಭಿಸಲಿದ್ದಾರೆ. ಪ್ರಣಯ್ ಅವರು ಮೊದಲ ಸುತ್ತಿನಲ್ಲಿ ಜಪಾನ್ನ ಕೋಕಿ ವತಾನಬೆ ಎದುರು ಕಣಕ್ಕಿಳಿಯಲಿದ್ದಾರೆ. ತರುಣ್ ಮನ್ನೆಪಲ್ಲಿ ಅವರು ಕೆಂಟಾ ನಿಷಿಮೊಟೊ (ಜಪಾನ್) ವಿರುದ್ಧ ಹಾಗೂ ಕನ್ನಡಿಗ ಆಯುಷ್ ಶೆಟ್ಟಿ ಅವರು ಕೆನಡಾದ ಬ್ರಯಾನ್ ಯಾಂಗ್ ವಿರುದ್ಧ ಸೆಣಸಲಿದ್ದಾರೆ.

ವಿಶ್ವದ ಮಾಜಿ ಅಗ್ರಮಾನ್ಯ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಅವರು ಲಯ ಕಂಡುಕೊಳ್ಳುವ ವಿಶ್ವಾಸದಲ್ಲಿದ್ದಾರೆ.

ಮಹಿಳೆಯರ ಸಿಂಗಲ್ಸ್ನಲ್ಲಿ ಉನ್ನತಿ ಹೂಡ ಅವರು ತೈವಾನ್ನ ಚಿಯು ಪಿನ್–ಚಿಯಾನ್ ವಿರುದ್ಧ ಹಾಗೂ ಮಾಳವಿಕಾ ಬನ್ಸೋಡ್ ಅವರು ಥಾಯ್ಲೆಂಡ್ನ ಪಾರ್ನಪವೀ ಚೊಚುವಾಂಗ್ ವಿರುದ್ಧ ಅಭಿಯಾನ ಆರಂಭಿಸಲಿದ್ದಾರೆ.

ಮಹಿಳೆಯರ ಡಬಲ್ಸ್ನಲ್ಲಿ ಟ್ರೀಸಾ ಜಾಲಿ ಹಾಗೂ ಗಾಯತ್ರಿ ಗೋಪಿಚಂದ್ ಹಾಗೂ ಮಿಶ್ರ ಡಬಲ್ಸ್ನಲ್ಲಿ ಧ್ರುವ್ ಕಪಿಲಾ ಹಾಗೂ ತನಿಷಾ ಕ್ರ್ಯಾಸ್ಟೊ ಅವರು ಅದೃಷ್ಟ ಪರೀಕ್ಷಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.