ಬಾಸೆಲ್: ಭಾರತದ ತರುಣ್ ಮನ್ನೆಪಲ್ಲಿ ಅವರು ಸ್ವಿಸ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ಫೈನಲ್ನಲ್ಲಿ ಇಂಡೊನೇಷ್ಯಾದ ಅಂಥೋನಿ ಸಿನಿಸುಕಾ ಜಿಂಟಿಂಗ್ ಅವರಿಗೆ ತೀವ್ರ ಹೋರಾಟ ತೋರಿದ ನಂತರ ಸೋಲನುಭವಿಸಿದರು.

ಇದರೊಂದಿಗೆ 2.30 ಕೋಟಿ ಬಹುಮಾನ ಮೊತ್ತದ ಈ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿತು.

ಗಾಯಾಳಾಗಿ ಪುನರಾಗಮನ ಮಾಡಿರುವ ಸಿನಿಸುಕಾ ಜಿಂಟಿಂಗ್ 17 ತಿಂಗಳಲ್ಲಿ ಮೊದಲ ಬಾರಿ ಪ್ರಮುಖ ಟೂರ್ನಿಯೊಂದರ ಸೆಮಿಫೈನಲ್ ತಲುಪಿದರು. ಶುಕ್ರವಾರ ತಡರಾತ್ರಿ ಮುಕ್ತಾಯಗೊಂಡ ಈ ಪಂದ್ಯದಲ್ಲಿ ಅವರು 21–19, 19–21, 2–13 ರಿಂದ ಮನ್ನೆಪಲ್ಲಿ ಅವರನ್ನು ಸೋಲಿಸಿದರು. ತರುಣ್ ಅವರು ವಿಶ್ವ ಕ್ರಮಾಂಕದಲ್ಲಿ 43ನೇ ಸ್ಥಾನದಲ್ಲಿದ್ದಾರೆ.

2024ರಲ್ಲಿ ಹಾಂಗ್ಕಾಂಗ್ ಓಪನ್ನಲ್ಲಿ ಕೊನೆಯ ಬಾರಿ ಸೆಮಿಫೈನಲ್ ತಲುಪಿದ್ದ ಸಿನಿಸುಕಾ ಇಲ್ಲಿ ಅರ್ಹತಾ ಸುತ್ತಿನಲ್ಲಿ ಆಡಿ ಮುಖ್ಯ ಸುತ್ತಿಗೆ ಅರ್ಹತೆ ಪಡೆದಿದ್ದರು. 29 ವರ್ಷ ವಯಸ್ಸಿನ ಈ ಆಟಗಾರ ಸೆಮಿಫೈನಲ್ ಪಂದ್ಯದಲ್ಲಿ ಜಪಾನ್ನ ಯುಶಿ ತನಾಕ ಅವರನ್ನು ಎದುರಿಸಲಿದ್ದಾರೆ.

ಇಂಡೊನೇಷ್ಯಾದ ಯುವ ಆಟಗಾರ ಅಲ್ವಿ ಫರ್ಹಾನ್ ಅವರೂ ಸೆಮಿಫೈನಲ್ ತಲುಪಿದ್ದು, ಅಗ್ರ ಶ್ರೇಯಾಂಕದ ಲಿ ಶಿ ಫೆಂಗ್ (ಚೀನಾ) ಅವರನ್ನು ಎದುರಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.