ಬಾಸೆಲ್: ಭಾರತದ ಷಟ್ಲರ್ ತರುಣ್ ಮನ್ನೆಪಲ್ಲಿ ಅವರು ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಎದುರಾಳಿ ಜಪಾನ್ನ ಕೆಂಟಾ ನಿಶಿಮೊಟೊ ಗಾಯಾಳಾಗಿ ನಿವೃತ್ತಿಯಾದ ನಂತರ ಎರಡನೇ ಸುತ್ತು ತಲುಪಿದರು.

ವಿಶ್ವ ಕ್ರಮಾಂಕದಲ್ಲಿ 43ನೇ ಸ್ಥಾನದಲ್ಲಿರುವ ತರುಣ್ ಪುರುಷರ ಸಿಂಗಲ್ಸ್ ಆರಂಭಿಕ ಸುತ್ತಿನ ಪಂದ್ಯದಲ್ಲಿ ಜಪಾನ್ ಆಟಗಾರನ ವಿರುದ್ಧ 16-21, 21-16, 7-2ರಿಂದ ಮುನ್ನಡೆಯಲ್ಲಿದ್ದರು. ಈ ಸಂದರ್ಭದಲ್ಲಿ ಐದನೇ ಶ್ರೇಯಾಂಕದ ಕೆಂಟಾ ಭುಜನೋವಿನ ಕಾರಣಕ್ಕಾಗಿ ಸ್ಪರ್ಧೆಯಿಂದ ಹಿಂದೆ ಸರಿದರು.

ಕಳೆದ ವರ್ಷ ಮಕಾವು ಓಪನ್ನ ಸೆಮಿಫೈನಲ್ ತಲುಪಿದ್ದ 24 ವರ್ಷದ ತರುಣ್ ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ಮಲೇಷ್ಯಾದ ಜಸ್ಟಿನ್ ಹೋ ಅವರನ್ನು ಎದುರಿಸಲಿದ್ದಾರೆ.

ಬುಧವಾರ ತಡರಾತ್ರಿ ನಡೆದ ಪಂದ್ಯದ ಮೊದಲ ಗೇಮ್ನಲ್ಲಿ ತರುಣ್ ಹಿನ್ನಡೆ ಅನುಭವಿಸಿದ್ದರು. ಆದರೆ, ನಂತರದಲ್ಲಿ ಲಯ ಕಂಡುಕೊಂಡ ಅವರು ಗೇಮ್ ಸಮಬಲ ಸಾಧಿಸಿದರು. ನಿರ್ಣಾಯಕ ಗೇಮ್ನಲ್ಲಿ ಭಾರತದ ಆಟಗಾರ 5 ಅಂಕಗಳಿಂದ ಮುನ್ನಡೆಯಲ್ಲಿದ್ದಾಗ ಎದುರಾಳಿ ಆಟಗಾರ ನಿವೃತ್ತಿ ಪಡೆದರು.

ಭಾರತದ ಉದಯೋನ್ಮುಖ ಆಟಗಾರ ಮಾಳವಿಕಾ ಬನ್ಸೋಡ್ ಅವರು ಮಹಿಳಾ ಸಿಂಗಲ್ಸ್ನ ಮೊದಲ ಸುತ್ತಿನಲ್ಲಿ ಹೊರಬಿದ್ದರು. ಅವರು 11-21, 15-21 ಅಂತರದಿಂದ ವಿಶ್ವದ 4ನೇ ಕ್ರಮಾಂಕದ ಪೋರ್ನ್ಪವೀ ಚೊಚುವಾಂಗ್ (ಥಾಯ್ಲೆಂಡ್) ಅವರಿಗೆ ಸೋತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.