ಬೆಂಗಳೂರು: ವೃತ್ತಿಪರ ಮತ್ತು ಹವ್ಯಾಸಿ ಓಟಗಾರರ ಆಕರ್ಷಣೆಯ ಟಿಸಿಎಸ್ ವಿಶ್ವ ಟೆನ್ಕೆ ಓಟದ ಆತಿಥ್ಯಕ್ಕೆ ಸಿಲಿಕಾನ್ ಸಿಟಿ ಸಜ್ಜಾಗಿದೆ. ಭಾನುವಾರ ಸೂರ್ಯ ಉದಯಿಸುವ ಮುನ್ನವೇ ಉದ್ಯಾನ ನಗರಿಯ ಕಾಂಕ್ರೀಟ್ ರಸ್ತೆಯಲ್ಲಿ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಖ್ಯಾತನಾಮ ಅಥ್ಲೀಟ್ಗಳು ಮಿಂಚು ಹರಿಸಲಿದ್ದಾರೆ.

18ನೇ ಆವೃತ್ತಿಯ ಕೂಟದಲ್ಲಿ 36 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಕಬ್ಬನ್ ರಸ್ತೆಯಲ್ಲಿ ಮುಂಜಾನೆ 5.30ಕ್ಕೆ ಎಲೀಟ್ ಮಹಿಳೆಯರ 10 ಕಿ.ಮೀ ಓಟದೊಂದಿಗೆ ಸ್ಪರ್ಧೆಗಳಿಗೆ ಚಾಲನೆ ದೊರೆಯಲಿದೆ. ಈ ಕೂಟದ ಮೂಲಕ ಸಾಮಾಜಿಕ ಒಳಿತಿಗಾಗಿ ₹5 ಕೋಟಿ ದೇಣಿಗೆ ಸಂಗ್ರಹಿಸಲಾಗಿದೆ. ಒಟ್ಟು ಸುಮಾರು ₹ 2 ಕೋಟಿ ಬಹುಮಾನ ಮೊತ್ತ ಒಳಗೊಂಡಿದೆ.

ಪುರುಷರ ವಿಭಾಗದಲ್ಲಿ ಉಗಾಂಡದ ಹರ್ಬರ್ಟ್ ಕಿಬೆಟ್, ಬುರುಂಡಿಯ ರೋಡ್ರಿಗ್ ಕ್ವಿಝೆರಾ, ಸ್ಪೇನ್ನ ಕ್ಯಾಸ್ಟೆಲ್ಲನ್ ಮುಂತಾದ ಸ್ಟಾರ್ ಅಥ್ಲೀಟ್ಗಳು ಸ್ಪರ್ಧಾ ಕಣದಲ್ಲಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಹಾಲಿ ಚಾಂಪಿಯನ್, ಉಗಾಂಡಾದ ಸಾರಾ ಚೆಲಂಗತ್ ಪ್ರಶಸ್ತಿ ಉಳಿಸಿಕೊಳ್ಳುವ ಛಲದಲ್ಲಿದ್ದಾರೆ. ಅವರಿಗೆ ಸವಾಲೊಡ್ಡಲು ಕೆನ್ಯಾದ ಬ್ರೆಂಡಾ ಜೆಪ್ಚಿರ್ಚಿರ್ ತುದಿಗಾಲಿನಲ್ಲಿ ನಿಂತಿದ್ದಾರೆ.

ಭಾರತೀಯರ ಎಲೀಟ್ ಪುರುಷರ ವಿಭಾಗದಲ್ಲಿ ಹಾಲಿ ಚಾಂಪಿಯನ್ ಅಭಿಷೇಕ್ ಪಾಲ್, ಡಾ.ಕಾರ್ತಿಕ್ ಕರ್ಕೇರ, ಹರ್ಮನ್ಜ್ಯೋತ್ ಸಿಂಗ್ ರೇಸ್ನಲ್ಲಿದ್ದಾರೆ. ಕಳೆದ ಆವೃತ್ತಿಯಲ್ಲಿ ‘ಕೋರ್ಸ್ ದಾಖಲೆ’ಯೊಂದಿಗೆ ಅಭಿಷೇಕ್ (29ನಿ.12ಸೆ) ಗುರಿ ತಲುಪಿದ್ದರು. ಅವರನ್ನು ಉತ್ತಮ ಪಡಿಸಿಕೊಳ್ಳುವ ಜೊತೆಗೆ ಪ್ರಶಸ್ತಿ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. 2026ರ ದೆಹಲಿ ಮ್ಯಾರಥಾನ್, ಟಾಟಾ ಮುಂಬೈ ಮ್ಯಾರಥಾನ್ನ ಚಾಂಪಿಯನ್ ಡಾ.ಕಾರ್ತಿಕ್ ಇಲ್ಲಿ ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ. 2023ರ ರನ್ನರ್ ಅಪ್ ಹರ್ಮನ್ಜ್ಯೋತ್ ಅವರೂ ಚಿನ್ನದ ಮೇಲೆ ಕಣ್ಣಿಟ್ಟಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಸಂಜೀವನಿ ಜಾಧವ್ ಹ್ಯಾಟ್ರಿಕ್ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ.ಕಳೆದ ಎರಡು ಆವೃತ್ತಿಗಳಲ್ಲಿ ಚಿನ್ನ ಗೆದ್ದಿರುವ ಅವರು ಈ ಬಾರಿ ವೈಯಕ್ತಿಕ ಶ್ರೇಷ್ಠ ಸಮಯದಲ್ಲಿ ಗುರಿ ತಲುಪುವತ್ತ ಗಮನ ಹರಿಸಿದ್ದಾರೆ. ಅವರಿಗೆ ಉಜಾಲಾ, ಪೂಲನ್ ಪಾಲ್, ಕವಿತಾ ಯಾದವ್ ಪ್ರಮುಖ ಸವಾಲಾಗಿದ್ದಾರೆ.

ಓಟದ ದಿಕ್ಸೂಚಿ ಹೀಗಿದೆ: 10ಕೆ ಓಟವು ಕಬ್ಬನ್ ರಸ್ತೆಯಿಂದ ಆರಂಭವಾಗಿ, ಹಲಸೂರು ಕೆರೆಯನ್ನು ಸುತ್ತು ಹಾಕಿ, ಅಲ್ಲಿಂದ ಡಿಕೆನ್ಸನ್ ರಸ್ತೆ, ಕಾಮರಾಜ ರಸ್ತೆಯ ಮೂಲಕ ಸಾಗಿ ಪುನಃ ಕಬ್ಬನ್ ರಸ್ತೆಗೆ ಸೇರಲಿದೆ. ಅಲ್ಲಿಂದ ವಿಧಾನಸೌಧದ ಮುಂಭಾಗದಲ್ಲಿ ‘ಯು ಟರ್ನ್’ ಪಡೆದು, ಕ್ವೀನ್ಸ್ ರಸ್ತೆಯನ್ನು ಸುತ್ತುಹಾಕಿ ಮಾಣೆಕ್ಶಾ ಪರೇಡ್ ಮೈದಾನದ ಮುಂಭಾಗದಲ್ಲಿ ಸಂಪನ್ನಗೊಳ್ಳಲಿದೆ.

ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಸಂಸದರಾದ ಯದುವೀರ್
ಕೃಷ್ಣದತ್ತ ಚಾಮರಾಜ ಒಡೆಯರ್, ತೇಜಸ್ವಿ ಸೂರ್ಯ, ಬ್ರಿಗೇಡಿಯರ್ ರಂಜಿತ್ ಆಳ್ವ ಅವರೂ ಓಟಗಾರರಿಗೆ ಜೊತೆಯಾಗಲಿದ್ದಾರೆ.

ಗೆಹಲೋತ್ ಉದ್ಘಾಟನೆ: ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಕೂಟಕ್ಕೆ ಚಾಲನೆ ನೀಡಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಸಚಿವ ಜಿ. ಪರಮೇಶ್ವರ, ಕೂಟದ ರಾಯಭಾರಿ, ಎರಡು ಬಾರಿ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದಿರುವ ಹೈಜಂಪ್ ತಾರೆ ಬ್ಲಾಂಕಾ ವ್ಲಾಸಿಕ್, ಟಿಸಿಎಸ್ನ ಪ್ರಾದೇಶಿಕ ಮುಖ್ಯಸ್ಥ ಸುನಿಲ್ ದೇಶಪಾಂಡೆ ಓಟಗಾರರನ್ನು ಹುರಿದುಂಬಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.