ಬ್ಯಾಂಕಾಕ್ (ಪಿಟಿಐ): ಭಾರತದ ಅನುಭವಿ ಆಟಗಾರ ಲಕ್ಷ್ಯ ಸೇನ್ ಮತ್ತು ಅಗ್ರ ಆಟಗಾರ್ತಿ ಪಿ.ವಿ.ಸಿಂಧು ಅವರು ₹4.80 ಕೋಟಿ ಬಹುಮಾನ ಮೊತ್ತದ ಥಾಯ್ಲೆಂಡ್ ಓಪನ್ ಸೂಪರ್ 500 ಟೂರ್ನಿಯ ಸಿಂಗಲ್ಸ್ ಪಂದ್ಯಗಳಲ್ಲಿ ಎದುರಾಳಿಗಳ ವಿರುದ್ಧ ನೇರ ಗೇಮ್ಗಳ ಜಯಗಳಿಸಿ ಎಂಟರ ಘಟ್ಟ ತಲುಪಿದರು.

ಮಹಿಳೆಯರ ಸಿಂಗಲ್ಸ್ನಲ್ಲಿ ಶ್ರೇಯಾಂಕ ಪಡೆದಿರುವ ಸಿಂಧು 21–13, 21–15 ರಿಂದ ಡೆನ್ಮಾರ್ಕ್ನ ಅಮೇಲಿ ಶುಲ್ಝ್ ಅವರನ್ನು ಹಿಮ್ಮೆಟ್ಟಿ ಸಿದರು. ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಈ ಪಂದ್ಯ ಗೆಲ್ಲಲು ತೆಗೆದುಕೊಂಡಿದ್ದು 28 ನಿಮಿಷಳನ್ನಷ್ಟೇ.

ಸಿಂಧು ಅವರ ಮುಂದಿನ ಎದುರಾಳಿ ವಿಶ್ವ ಕ್ರಮಾಂಕದಲ್ಲಿ ಮೂರನೇ ಸ್ಥಾನದಲ್ಲಿರುವ ಅಕಾನೆ ಯಮಾಗುಚಿ. ಜಪಾನ್ನ ಆಟಗಾರ್ತಿ ಇಲ್ಲಿ ಶ್ರೇಯಾಂಕ ಪಡೆದಿದ್ದಾರೆ.

ಏಳನೇ ಶ್ರೇಯಾಂಕದ ಲಕ್ಷ್ಯ ಸೇನ್ ಎರಡನೇ ಸುತ್ತಿನಲ್ಲಿ 21–12, 21–13 ರಿಂದ ಚೀನಾದ ಝು ಷುವಾನ್ ಅವರನ್ನು ಸೋಲಿಸಿದರು.

ಸೇನ್ ಮುಂದಿನ ಸುತ್ತಿನಲ್ಲಿ ಎರಡನೇ ಶ್ರೇಯಾಂಕದ ಕುನ್ಲಾವುತ್ ವಿಟಿಡ್ಸರ್ನ್ ಅವರನ್ನು ಎದುರಿಸಲಿದ್ದಾರೆ. ಥಾಯ್ಲೆಂಡ್ನ ಆಟಗಾರ ಇನ್ನೊಂದು ಪಂದ್ಯದಲ್ಲಿ ಚೀನಾ ತೈಪೆಯ ಲೀ ಚಿಯಾ ಹಾವೊ ಅವರನ್ನು 21–11, 21–13 ರಿಂದ ಪರಾಭವಗೊಳಿಸಿದರು. ಆದರೆ ಅನುಭವಿ ಕಿದಂಬಿ ಶ್ರೀಕಾಂತ್ 16–21, 21–11, 18–21 ರಿಂದ ಚೀನಾ ತೈಪೆಯ ಸು ಲಿ ಯಾಂಗ್ ಅವರಿಗೆ ಮಣಿದರು.

ಸಾತ್ವಿಕ್–ಚಿರಾಗ್ ಮುನ್ನಡೆ: ಡಬಲ್ಸ್ ನಲ್ಲಿ ಅಗ್ರ ಶ್ರೇಯಾಂಕ ಪಡೆದಿರುವ ಭಾರತದ ಸಾತ್ವಿಕ್ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ ಜೋಡಿ ಸಹ ಎಂಟರ ಘಟ್ಟಕ್ಕೆ ಮುನ್ನಡೆಯಿತು. ಇವರಿಬ್ಬರು 21–12, 21–19 ರಿಂದ ಮಲೇಷ್ಯಾದ ಬ್ರಿಯಾನ್ ಜೆರೆಮಿ ಗೂಂಟಿಂಗ್– ಮುಹಮ್ಮದ್ ಹೈಕಲ್ ಅವರನ್ನು ಸೋಲಿಸಿತು.

ವಿಶ್ವ ಕ್ರಮಾಂಕದಲ್ಲಿ ನಾಲ್ಕನೇ ಸ್ಥಾನ ದಲ್ಲಿರುವ ಸಾತ್ವಿಕ್–ಚಿರಾಗ್ ಮುಂದಿನ ಸುತ್ತಿನಲ್ಲಿ ಆರನೇ ಶ್ರೇಯಾಂಕದ ತಕುಮಿ ನೊಮುರಾ– ಯುಯಿಚಿ ಶಿಮೋಗಮಿ (ಜಪಾನ್) ಜೋಡಿಯನ್ನು ಎದುರಿಸಲಿದ್ದಾರೆ.

ಮಹಿಳಾ ಸಿಂಗಲ್ಸ್ನಲ್ಲಿ ಯುವ ಆಟಗಾರ್ತಿ ದೇವಿಕಾ ಸಿಹಾಗ್ 21–23, 11–21 ರಲ್ಲಿ ಥಾಯ್ಲೆಂಡ್ನ ಪಿಟ್ಜಮೊನ್ ಒಪತ್ನಿಪುತ್ ಅವರನ್ನು ಮಣಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-51-1086030767

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.