ಹಾರ್ಸೆನ್ಸ್, ಡೆನ್ಮಾರ್ಕ್ (ಪಿಟಿಐ): ಸಿಂಗಲ್ಸ್ನಲ್ಲಿ ಆಯುಷ್ ಶೆಟ್ಟಿ ಮತ್ತು ಡಬಲ್ಸ್ನಲ್ಲಿ ಸಾತ್ವಿಕ್ ಸಾಯಿರಾಜ್ ರಣಕಿ ರೆಡ್ಡಿ–ಚಿರಾಗ್ ಶೆಟ್ಟಿ ಜೋಡಿಯ ಅಮೋಘ ಆಟದ ಬಲದಿಂದ ಭಾರತ ತಂಡವು ಥಾಮಸ್ ಕಪ್ ಬ್ಯಾಡ್ಮಿಂಟನ್ ಫೈನಲ್ಸ್ನಲ್ಲಿ ಶುಭಾರಂಭ ಮಾಡಿತು.

ಶುಕ್ರವಾರ ಆರಂಭವಾದ ಎ ಗುಂಪಿನ ಹಣಾಹಣಿಯಲ್ಲಿ ಭಾರತವು 4–1ರಿಂದ ಕೆನಡಾ ವಿರುದ್ಧ ಜಯಿಸಿತು.

ಈ ಸುತ್ತಿನ ಸಿಂಗಲ್ಸ್ನಲ್ಲಿ ವಿಶ್ವ ರ್ಯಾಂಕ್ನಲ್ಲಿ 13ನೇ ಸ್ಥಾನದಲ್ಲಿರುವ ವಿಕ್ಟರ್ ಲೈ ಅವರು 18-21, 21-19, 21-10 ರಿಂದ ಲಕ್ಷ್ಯ ಸೇನ್ ಅವರನ್ನು ಮಣಿಸಿದರು.

ಡಬಲ್ಸ್ನಲ್ಲಿ ಭಾರತದ ಸಾತ್ವಿಕ್ ಮತ್ತು ಚಿರಾಗ್ ಜೊಟಿಯು 21–10, 21–11 ರಿಂದ ಜೊನಾಥನ್ ಬಿಂಗ್ ಟಿಸಾನ್ ಮತ್ತು ಕೆವಿನ್ ಲೀ ವಿರುದ್ಧ ಗೆದ್ದರು. 20 ವರ್ಷದ ಆಯುಷ್ 21–13, 21–17 ನೇರ ಗೇಮ್ಗಳಲ್ಲಿ ಬ್ರಯನ್ ಯಾಂಗ್ ವಿರುದ್ಧ ಮೇಲುಗೈ ಸಾಧಿಸಿದರು. 39 ನಿಮಿಷಗಳ ಹೋರಾಟದಲ್ಲಿ 20 ವರ್ಷದ ಆಯುಷ್ ಪಾರಮ್ಯ ಮೆರೆದರು. ಕರ್ನಾಟಕದ ಆಯುಷ್ ಅವರು ಈಚೆಗೆ ಏಷ್ಯಾ ಬ್ಯಾಡ್ಮಿಂಟನ್ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಇದರಿಂದಾಗಿ ಭಾರತವು 2–1ರ ಮುನ್ನಡೆ ಸಾಧಿಸಿತು.

ಡಬಲ್ಸ್ನಲ್ಲಿ ಭಾರತದ ಇನ್ನೊಂದು ಜೋಡಿ ಎಂ.ಆರ್. ಅರ್ಜುನ್ ಮತ್ತು ಹರಿಹರನ್ ಅಮಸ್ಕರುಣನ್ 21–7, 21–15 ರಿಂದ ಟೈ ಅಲೆಕ್ಸಾಂಡರ್ ಲಿಂಡೆಮನ್ ಮತ್ತು ನೈಲ್ ಯಕುರಾ ವಿರುದ್ಧ ಜಯಿಸಿದರು.

ನಂತರದ ಸಿಂಗಲ್ಸ್ನಲ್ಲಿ ಕೆ. ಶ್ರೀಕಾಂತ್ 21–17, 21–12ರಿಂದ ಜೋಶುವಾ ಎನ್ಗಿಯಾನ್ ವಿರುದ್ಧ ಜಯಸಾಧಿಸಿದರು. ಇದರೊಂದಿಗೆ 4–1ರ ಜಯ ಭಾರತಕ್ಕೆ ಒಲಿಯಿತು. ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ.

ಹಾಲಿ ಚಾಂಪಿಯನ್ ಚೀನಾ ತಂಡವು 5–0ಯಿಂದ ಆಸ್ಟ್ರೇಲಿಯಾ ವಿರುದ್ಧ ಜಯಗಳಿಸಿ ಮೊದಲ ಸ್ಥಾನದಲ್ಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-51-1254042418

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.