ಹಾರ್ಸೆನ್ಸ್, ಡೆನ್ಮಾರ್ಕ್ (ಪಿಟಿಐ): ಅಮೋಘ ಪ್ರದರ್ಶನ ನೀಡಿದ ಭಾರತ ಪುರುಷರ ತಂಡವು ಸೋಮವಾರ ‘ಎ’ ಗುಂಪಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 5-0 ಅಂತರದಿಂದ ಸೋಲಿಸುವ ಮೂಲಕ ಥಾಮಸ್ ಕಪ್ ಫೈನಲ್ಸ್ನಲ್ಲಿ ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟಿತು.

ಗುಂಪಿನಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನ ಪಡೆದ ಭಾರತ ಮತ್ತು ಚೀನಾ ತಂಡಗಳು ಎಂಟರ ಘಟ್ಟಕ್ಕೆ ಅರ್ಹತೆ ಪಡೆದವು. 2022ರ ಚಾಂಪಿಯನ್ ಭಾರತ ತಂಡವು 4-1ರಿಂದ ಕೆನಡಾ ತಂಡವನ್ನು ಮಣಿಸಿ ಶುಭಾರಂಭ ಮಾಡಿತ್ತು.

ಚೀನಾ ತಂಡವು 5–0 ಅಂತರದಿಂದ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಅಭಿಯಾನ ಆರಂಭಿಸಿತ್ತು. ನಂತರ ಕೆನಡಾ ತಂಡವನ್ನು 4–1ರಿಂದ ಮಣಿಸಿದೆ. ಬುಧವಾರ ತಮ್ಮ ಕೊನೆಯ ಗುಂಪು ಪಂದ್ಯದಲ್ಲಿ ಭಾರತ ಮತ್ತು ಚೀನಾ ಮುಖಾಮುಖಿಯಾಗಲಿದ್ದು, ಗೆದ್ದ ತಂಡವು ಅಗ್ರಸ್ಥಾನಕ್ಕೇರಲಿದೆ.

ಭಾರತದ ಅಗ್ರ ಸಿಂಗಲ್ಸ್ ಆಟಗಾರ, ಒಲಿಂಪಿಯನ್ ಲಕ್ಷ್ಯ ಸೇನ್ 21-14, 21-16 ಅಂತರದಿಂದ ಎಫ್ರೈಮ್ ಸ್ಟೀಫನ್ ಸ್ಯಾಮ್ ಅವರನ್ನು ಸೋಲಿಸಿ ಭಾರತಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು.

ಈಚೆಗೆ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ಷಿಪ್ನಲ್ಲಿ ಬೆಳ್ಳಿ ಪದಕ ಗೆದ್ದ ಕನ್ನಡಿಗ ಆಯುಷ್ ಶೆಟ್ಟಿ 21-8, 21-6ರಿಂದ ಶ್ರೇ ಧಂಡ್ ವಿರುದ್ಧ ಸುಲಭ ಗೆಲುವು ಸಾಧಿಸಿ, ಭಾರತದ ಮುನ್ನಡೆಯನ್ನು ದ್ವಿಗುಣಗೊಳಿಸಿದರು.

ಏಷ್ಯನ್ ಗೇಮ್ಸ್ ಚಾಂಪಿಯನ್ ಡಬಲ್ಸ್ ಜೋಡಿ ಸಾತ್ವಿಕ್ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ 21-14, 21-16ರಿಂದ ರಿಜ್ಕಿ ಹಿದಾಯತ್ ಮತ್ತು ಜ್ಯಾಕ್ ಯು ಅವರನ್ನು ಹಿಮ್ಮೆಟ್ಟಿಸಿ, ಮುನ್ನಡೆಯನ್ನು ಮತ್ತಷ್ಟು (3–0) ವಿಸ್ತರಿಸಿದರು.

ಏಷ್ಯನ್ ಕ್ರೀಡಾಕೂಟದ ಕಂಚು ವಿಜೇತ ಎಚ್.ಎಸ್. ಪ್ರಣಯ್ 21-11, 21-17ರಿಂದ ರಿಷಿ ಹೋಂಡಾ ಭೂಪತಿ ವಿರುದ್ಧ ಗೆಲುವು ಸಾಧಿಸಿದರು. ಎರಡನೇ ಡಬಲ್ಸ್ ಪಂದ್ಯದಲ್ಲಿ ಹರಿಹರನ್ ಅಂಶಕರುಣನ್ ಮತ್ತು ಎಂ.ಆರ್.ಅರ್ಜುನ್ ಜೋಡಿಯು 21-12, 21-10ರಿಂದ ಆ್ಯಂಡಿಕಾ ರಾಮಡಿಯನ್ಸ್ಯಾ ಮತ್ತು ಎಫ್ರೈಮ್ ಸ್ಟೀಫನ್ ಸ್ಯಾಮ್ ಅವರನ್ನು ಸೋಲಿಸಿತು. ಇದರೊಂದಿಗೆ ಭಾರತ ಯಾವುದೇ ಪಂದ್ಯವನ್ನು ಕಳೆದುಕೊಳ್ಳದೆ ಕ್ಲೀನ್ಸ್ವೀಪ್ ಮಾಡಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-4-974390631

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.