ಹಾರ್ಸೆನ್ಸ್, ಡೆನ್ಮಾರ್ಕ್ (ಪಿಟಿಐ): ಭಾರತ ಪುರುಷರ ತಂಡವು ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್ನಲ್ಲಿ 0–3 ಅಂತರದಿಂದ ಫ್ರಾನ್ಸ್ ತಂಡಕ್ಕೆ ಮಣಿಯಿತು. ಇದರೊಂದಿಗೆ ಪ್ರಶಸ್ತಿಯನ್ನು ಮರಳಿ ಪಡೆಯುವ ನಿರೀಕ್ಷೆಯಲ್ಲಿದ್ದ ಭಾರತದ ಷಟ್ಲರ್ಗಳಿಗೆ ನಿರಾಸೆಯಾಯಿತು.

2022ರಲ್ಲಿ ಮೊದಲ ಬಾರಿ ಚಾಂಪಿಯನ್ ಆಗಿದ್ದ ಭಾರತ ತಂಡವು 2024ರಲ್ಲಿ ಕ್ವಾರ್ಟರ್ ಫೈನಲ್ನಲ್ಲಿ ಚೀನಾ ತಂಡಕ್ಕೆ ಸೋತು ಹೊರಬಿದ್ದಿತ್ತು. ಈ ಬಾರಿ ಸೆಮಿಫೈನಲ್ ಪ್ರವೇಶಿಸುವ ಮೂಲಕ ಕನಿಷ್ಠ ಕಂಚಿನ ಪದಕ ಖಚಿತ ಪಡಿಸಿಕೊಂಡಿತ್ತು. 1952, 1955 ಮತ್ತು 1979ರ ಬಳಿಕ ಭಾರತಕ್ಕೆ ಲಭಿಸಿದ ನಾಲ್ಕನೇ ಕಂಚು ಇದಾಗಿದೆ.

ಫ್ರಾನ್ಸ್ ತಂಡವು ಈ ಗೆಲುವಿನೊಂದಿಗೆ ಫೈನಲ್ಗೆ ಲಗ್ಗೆಯಿಟ್ಟಿತು. ಡೆನ್ಮಾರ್ಕ್ (2016) ಬಳಿಕ ಪ್ರಶಸ್ತಿ ಸುತ್ತು ತಲುಪಿದ ಯುರೋಪಿನ ಎರಡನೇ ರಾಷ್ಟ್ರ ಎಂಬ ಹಿರಿಮೆಗೂ ಪಾತ್ರವಾಯಿತು. ಫೈನಲ್ನಲ್ಲಿ 14 ಬಾರಿಯ ಚಾಂಪಿಯನ್ ಚೀನಾ ತಂಡವನ್ನು ಎದುರಿಸಲಿದೆ.

ನಾಲ್ಕರ ಘಟ್ಟದ ಹಣಾಹಣಿಗೆ ಅನುಭವಿ ಲಕ್ಷ್ಯ ಸೇನ್ ಅನುಪಸ್ಥಿತಿ ಭಾರತಕ್ಕೆ ದುಬಾರಿಯಾಗಿ ಪರಿಣಮಿಸಿತು. ಮೂರು ಸಿಂಗಲ್ಸ್ ಪಂದ್ಯಗಳಲ್ಲಿ ಆಯುಷ್ ಶೆಟ್ಟಿ, ಕಿದಂಬಿ ಶ್ರೀಕಾಂತ್ ಮತ್ತು ಎಚ್.ಎಸ್. ಪ್ರಣಯ್ ಅವರಿಗೆ ಒಂದೇ ಒಂದು ಗೇಮ್ ಅನ್ನು ಗೆಲ್ಲಲು ಸಾಧ್ಯವಾಗಲಿಲ್ಲ.ಫ್ರಾನ್ಸ್ ಆಟಗಾರರು ಏಕಪಕ್ಷೀಯ ಗೆಲುವು ಸಾಧಿಸಿದರು.

ಮೊದಲ ಸಿಂಗಲ್ಸ್ನಲ್ಲಿ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ಬೆಳ್ಳಿ ವಿಜೇತ ಆಯುಷ್ 11-21, 9-21ರಿಂದ ವಿಶ್ವದ ನಾಲ್ಕನೇ ಕ್ರಮಾಂಕದ ಕ್ರಿಸ್ಟೊ ಪೊಪೊವ್ ಅವರಿಗೆ ಸೋತರು. ಕೇವಲ 39 ನಿಮಿಷದಲ್ಲಿ ಕ್ರಿಸ್ಟೊ ಅವರು ಜಯ ಸಾಧಿಸಿ, ಫ್ರಾನ್ಸ್ಗೆ ಆರಂಭಿಕ ಮುನ್ನಡೆ ಒದಗಿಸಿದರು. ಎರಡನೇ ಸಿಂಗಲ್ಸ್ನಲ್ಲಿ ಅನುಭವಿ ಶ್ರೀಕಾಂತ್ 16-21, 18-21ರಿಂದ ವಿಶ್ವ ಕ್ರಮಾಂಕದಲ್ಲಿ 10ನೇ ಸ್ಥಾನದಲ್ಲಿರುವ ಅಲೆಕ್ಸ್ ಲ್ಯಾನಿಯರ್ ಅವರಿಗೆ ಮಣಿದರು. ಮೂರನೇ ಸಿಂಗಲ್ಸ್ನಲ್ಲಿ ಪ್ರಣಯ್ 19–21, 16–21ರಿಂದ ತೋಮಾ ಜೂನಿಯರ್ ಪೊಪೊವ್ ಅವರಿಗೆ ಶರಣಾದರು. ಇದರೊಂದಿಗೆ ಫ್ರಾನ್ಸ್ 3–0 ಜಯ ಸಾಧಿಸಿತು. ಭಾರತ ತಂಡದ ಅಭಿಯಾನಕ್ಕೂ ತೆರೆಬಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-51-1223528662

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.