ನವದೆಹಲಿ: ಭಾರತದ ಪುರುಷರ ಮತ್ತು ಮಹಿಳೆಯರ ತಂಡಗಳು ಏಪ್ರಿಲ್ 24ರಂದು ಡೆನ್ಮಾರ್ಕ್ ನಲ್ಲಿ ಆರಂಭವಾಗುವ ಥಾಮಸ್ ಮತ್ತು ಊಬರ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಇದೇ ಗುಂಪಿನಲ್ಲಿ ಹಾಲಿ ಚಾಂಪಿಯನ್ ಚೀನಾ ತಂಡ ಇದೆ.

ಬುಧವಾರ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ (ಬಿಡಬ್ಲ್ಯುಎಫ್) ಎರಡೂ ಟೂರ್ನಿಗಳ ಗುಂಪುಗಳನ್ನು ಪ್ರಕಟಿಸಿದೆ. ಥಾಮಸ್ ಮತ್ತು ಊಬರ್ ಕಪ್ ಎರಡರಲ್ಲಿಯೂ ಭಾರತ ಎ ಗುಂಪಿನಲ್ಲಿದ್ದು ಚೀನಾ ಪ್ರತಿಸ್ಪರ್ಧಿಯಾಗಿದೆ. ಡೆನ್ಮಾರ್ಕಿನ ಹಾರ್ಸೆನ್ಸ್ನಲ್ಲಿ ಏ 24ರಿಂದ ಮೇ 3ರವರೆಗೆ ಟೂರ್ನಿ ನಡೆಯಲಿದೆ.

2022ರ ಥಾಮಸ್ ಕಪ್ ಚಾಂಪಿಯನ್ ಭಾರತವು ಈ ಬಾರಿ ಕ್ವಾರ್ಟರ್ಫೈನಲ್ ಪ್ರವೇಶಿಸುವ ನೆಚ್ಚಿನ ತಂಡವಾಗಿದೆ. ಪ್ಯಾನ್ ಅಮೆರಿಕ ಚಾಂಪಿಯನ್ ಕೆನಡಾ ಮತ್ತು ಒಷಾನಿಯಾ ಚಾಂಪಿಯನ್ಸ್ ಆಸ್ಟ್ರೇಲಿಯಾ ತಂಡಗಳೂ ಇಲ್ಲಿ ಕಣಕ್ಕಿಳಿಯಲಿವೆ.

ಭಾರತ ಮಹಿಳೆಯರ ತಂಡವು ಯುರೋಪಿಯನ್ ತಂಡ, ರನ್ನರ್ಸ್ ಅಪ್ ಡೆನ್ಮಾರ್ಕ್ ಹಾಗೂ ಉಕ್ರೇನ್ ತಂಡಗಳನ್ನು ಎದುರಿಸಲಿದೆ. 16 ಬಾರಿಯ ಚೀನಾ ಪ್ರಮುಖ ಎದುರಾಳಿಯಾಗಿದೆ. ಭಾರತ ವನಿತೆಯರ ತಂಡವು 2014 ಹಾಗೂ 2016ರಲ್ಲಿ ಕಂಚು ಜಯಿಸಿತ್ತು. 2024ರ ಎಂಟರ ಘಟ್ಟದಲ್ಲಿ ಚೀನಾ ಎದುರು ಭಾರತ ಪುರುಷರ ತಂಡ ಸೋತಿತ್ತು. ಮಹಿಳೆಯರ ತಂಡವು ಕ್ವಾರ್ಟರ್ಫೈನಲ್ ನಲ್ಲಿ ಜಪಾನ್ ಎದುರು ಮಣಿದಿತ್ತು.

ಚೀನಾ ಪುರುಷರ ತಂಡದಲ್ಲಿ ಶಿ ಯೂಕೀ (ವಿಶ್ವ ರ್ಯಾಂಕಿಂಗ್ 2), ಲೀ ಶಿ ಫೆಂಗ್ (ವಿಶ್ವ ರ್ಯಾಂಕಿಂಗ್ 7), ವೆಂಗ್ ಹಾಂಗ್ ಯಾಂಗ್ (ವಿಶ್ವ ರ್ಯಾಂಕಿಂಗ್ 17) ಮತ್ತು ಲೂ ಗುವಾಂಗ್ ಝೂ (ವಿಶ್ವ ರ್ಯಾಂಕಿಂಗ್ 18) ಕಣಕ್ಕಿಳಿಯಲಿದ್ದಾರೆ. ಈಚೆಗೆ ನಡೆದ ಆಲ್ ಇಂಗ್ಲೆಂಡ್ ಚಾಂಪಿ ಯನ್ಷಿಪ್ನಲ್ಲಿ ಭಾರತದ ಲಕ್ಷ್ಯ ಸೇನ್ ಅವರು ಯೂಕೀ ಹಾಗೂ ಫೆಂಗ್ ಅವರ ವಿರುದ್ಧ ಮಿಂಚಿದ್ದರು. ಅದೇ ಈಗ ಭಾರತ ತಂಡದಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ.

ಟೂರ್ನಿಯಲ್ಲಿ ಒಟ್ಟು 16 ತಂಡಗಳು ಸ್ಪರ್ಧಿಸಲಿವೆ. ನಾಲ್ಕು ಗುಂಪುಗಳಲ್ಲಿ ತಲಾ ನಾಲ್ಕು ತಂಡಗಳು ಇರಲಿವೆ. ರೌಂಡ್ ರಾಬಿನ್ ಲೀಗ್ ಮಾದರಿಯಲ್ಲಿ (3 ಸಿಂಗಲ್ಸ್ ಹಾಗೂ 2 ಡಬಲ್ಸ್) ಪಂದ್ಯಗಳು ನಡೆಯಲಿವೆ. ಪ್ರತಿ ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು
ಕ್ವಾರ್ಟರ್ಫೈನಲ್ ಪ್ರವೇಶಿಸಲಿವೆ.

ಥಾಮಸ್ ಕಪ್ ಗುಂಪುಗಳು:

ಎ ಗುಂಪು: ಚೀನಾ, ಭಾರತ, ಕೆನಡಾ, ಆಸ್ಟ್ರೇಲಿಯಾ

ಬಿ ಗುಂಪು: ಜಪಾನ್, ಮಲೇಷ್ಯಾ, ಇಂಗ್ಲೆಂಡ್, ಫಿನ್ಲೆಂಡ್

ಸಿ ಗುಂಪು: ತೈವಾನ್, ಡೆನ್ಮಾರ್ಕ್, ಕೊರಿಯಾ, ಸ್ವೀಡನ್

ಡಿ ಗುಂಪು: ಇಡೋನೆಷ್ಯಾ, ಫ್ರಾನ್ಸ್, ಥಾಯ್ಲೆಂಡ್, ಅಲ್ಜೀರಿಯಾ

ಊಬರ್ ಕಪ್ ಗುಂಪುಗಳು:

ಎ ಗುಂಪು: ಚೀನಾ, ಭಾರತ, ಡೆನ್ಮಾರ್ಕ್, ಉಕ್ರೇನ್

ಬಿ ಗುಂಪು: ಜಪಾನ್, ಮಲೇಷ್ಯಾ, ಟರ್ಕಿ, ದಕ್ಷಿಣ ಆಫ್ರಿಕಾ

ಸಿ ಗುಂಪು: ತೈವಾನ್, ಇಂಡೊನೇಷ್ಯಾ, ಕೆನಡಾ, ಆಸ್ಟ್ರೇಲಿಯಾ

ಡಿ ಗುಂಪು: ಕೊರಿಯಾ, ಥಾಯ್ಲೆಂಡ್, ಬಲ್ಗೇರಿಯಾ, ಸ್ಪೇನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.