ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಷ್ಟ್ರೀಯ ಚೆಸ್ ಚಾಂಪಿಯನ್‌ಷಿಪ್‌: ಮುನ್ನಡೆ ಹಂಚಿಕೊಂಡ ಮೂವರು

Published 21 ಆಗಸ್ಟ್ 2024, 16:22 IST
Last Updated 21 ಆಗಸ್ಟ್ 2024, 16:22 IST
ಅಕ್ಷರ ಗಾತ್ರ

ಗುರುಗ್ರಾಮ: ಅಗ್ರ ಶ್ರೇಯಾಂಕದ ಸೂರ್ಯಶೇಖರ ಗಂಗೂಲಿ, ಒಂಬತ್ತನೇ ಶ್ರೇಯಾಂಕದ ಅರಣ್ಯಕ್ ಘೋಷ್ ಮತ್ತು 16ನೇ ಶ್ರೇಯಾಂಕದ ನೀಲಾಶ್ ಸಹ ಅವರು 61ನೇ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ ಐದನೇ ಸುತ್ತಿನ ನಂತರ ಸಂಭವನೀಯ ಐದು ಪಾಯಿಂಟ್‌ಗಳೊಂದಿಗೆ ಮುನ್ನಡೆ ಹಂಚಿಕೊಂಡಿದ್ದಾರೆ.

ಬುಧವಾರ ನಡೆದ ಪಂದ್ಯದಲ್ಲಿ ಪಿಎಸ್‌ಸಿಬಿಯ ಗಂಗೂಲಿ, ತಮ್ಮದೇ ತಂಡದ ದೀಪ್‌ಸೇನ್ ಗುಪ್ತಾ (4) ಅವರನ್ನು ಮೊದಲ ಬೋರ್ಡ್‌ನಲ್ಲಿ ಸೋಲಿಸಿದರು. ಮೂರನೇ ಬೋರ್ಡ್‌ನಲ್ಲಿ ರೈಲ್ವೇಸ್‌ನ ನೀಲಾಶ್ ಸಹ, ಮಹಾರಾಷ್ಟ್ರದ ಸಂಕಲ್ಪ್ ಗುಪ್ತಾ (4) ಅವರನ್ನು ಮಣಿಸಿದರು. ರೈಲ್ವೇಸ್‌ನ ಇನ್ನೊಬ್ಬ ಆಟಗಾರ ಅರಣ್ಯಕ್ ಘೋಷ್‌, ಪಿಎಸ್‌ಸಿಬಿ ತಂಡದ ಎಂ.ಆರ್‌.ವೆಂಕಟೇಶ್‌ (4) ಅವರನ್ನು ಪರಾಭವಗೊಳಿಸಿದರು.

ಎರಡನೇ ಬೋರ್ಡ್‌ನಲ್ಲಿ ರೈಲ್ವೇಸ್‌ನ ಸಯಾಂತನ್ ದಾಸ್ (4.5) ಮತ್ತು ಆಂಧ್ರ ಪ್ರದೇಶದ ಕಾರ್ತಿಕ್ ವೆಂಕಟರಾಮನ್ (4.5) ನಡುವಣ ಪಂದ್ಯ ‘ಡ್ರಾ’ ಆಯಿತು. ಗ್ರ್ಯಾಂಡ್‌ಮಾಸ್ಟರ್‌ ದೀಪ್ತಾಯನ್ ಘೋಷ್‌ (4.5) ಅವರು ತೆಲಂಗಾಣದ ಜಾಹಿದ್ ರೈಹಾನ್ (4) ಅವರನ್ನು ಸೋಲಿಸಿದರು.

ಕರ್ನಾಟಕದ ಐಎಂ ವಿಯಾನಿ ಡಿಕುನ್ಹಾ (4) ಮತ್ತು ರೈಲ್ವೇಸ್‌ನ ಜಿಎಂ ಎನ್‌.ಆರ್‌.ವಿಘ್ನೇಶ್‌ (4) ನಡುವಣ ಪಂದ್ಯ ಡ್ರಾ ಆಯಿತು. ಕರ್ನಾಟಕದ ಎ.ಬಾಲಕಿಶನ್ (4), ಹರಿಯಾಣದ ಪೃಥ್ವಿ ಶರ್ಮಾ ಅವರನ್ನು ಮಣಿಸಿದರು. ಜಿಎಂ ಎಂ.ಆರ್‌.ಲಲಿತ್‌ಬಾಬು (4), ಕರ್ನಾಟಕದ ಶಾನ್‌ ಡಿ.ಸಿಕ್ವೇರಾ (3) ಅವರಿಗೆ ಸೋಲುಣಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT