ಕೋಪೆನ್ಹೇಗನ್: ಎರಡು ಬಾರಿಯ ಒಲಿಂಪಿಕ್ ಸ್ವರ್ಣ ವಿಜೇತ, ಡೆನ್ಮಾರ್ಕ್ನ ಬ್ಯಾಡ್ಮಿಂಟನ್ ದಿಗ್ಗಜ ವಿಕ್ಟರ್ ಆಕ್ಸೆಲ್ಸನ್ ಅವರು ಕ್ರೀಡಾಬದುಕಿಗೆ ನಿವೃತ್ತಿ ಪ್ರಕಟಿಸಿದ್ದಾರೆ. ಬೆನ್ನು ನೋವಿನಿಂದಾಗಿ ಇನ್ನು ಮುಂದೆ ಉನ್ನತ ಮಟ್ಟದ ಸ್ಪರ್ಧೆಯಲ್ಲಿ ತೊಡಗಿಕೊಳ್ಳಲು ತಮ್ಮಿಂದ ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

ಆಕ್ಸೆಲ್ಸನ್ ಅವರು 2021ರ ಟೋಕಿಯೊ ಮತ್ತು 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಸಿಂಗಲ್ಸ್ ಚಾಂಪಿಯನ್ ಆಗಿದ್ದರು. 2016ರ ರಿಯೊ ಒಲಿಂಪಿಕ್ಸ್ನಲ್ಲಿ ಅವರು ಕಂಚಿನ ಪದಕ ಗೆದ್ದಿದ್ದರು. ವರ್ಷದ ಹಿಂದೆ ಅವರು ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ದೈಹಿಕ ಸಮಸ್ಯೆಗಳಿಂದ ಹೊರಬರಲು ಆಗಿರಲಿಲ್ಲ.

‘ಈ ಸ್ಥಿತಿಯನ್ನು ಒಪ್ಪಿಕೊಳ್ಳುವುದು ಕಡುಕಷ್ಟ. ಆದರೆ ಆಟದಲ್ಲಿ ಇನ್ನು ಮುಂದುವರಿಯಲು ನನ್ನ ದೇಹ ಅವಕಾಶ ಕೊಡುತ್ತಿಲ್ಲ’ ಎಂದು 32 ವರ್ಷ ವಯಸ್ಸಿನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಒಲಿಂಪಿಕ್ ಪದಕಗಳ ಜೊತೆಗೆ ಅವರು ಎರಡು ಬಾರಿ (2017, 2022) ವಿಶ್ವ ಚಾಂಪಿಯನ್ ಆಗಿದ್ದಾರೆ. ಅವರು ಸತತ 100 ವಾರ ವಿಶ್ವದ ಅಗ್ರಮಾನ್ಯ ಸಿಂಗಲ್ಸ್ ಆಟಗಾರನಾಗಿದ್ದರು. ಮಲೇಷ್ಯಾದ ಮಹಾನ್ ಆಟಗಾರ ಲೀ ಚೊಂಗ್–ವೀ ಮಾತ್ರ ಅವರಿಗಿಂತ ಹೆಚ್ಚು ಸಮಯ ಅಗ್ರ ಪಟ್ಟದಲ್ಲಿದ್ದರು.

ಆರು ಅಡಿ ನಾಲ್ಕು ಇಂಚು ಎತ್ತರದ ಆ್ಯಕ್ಸೆಲ್ಸನ್, ನೀಳಕಾಯದ ಲಾಭಪಡೆದು ದೀರ್ಘ ‘ರೀಚ್’ ಹೊಂದಿದ್ದರು.

‘ನಾನೇನು ಕನಸು ಕಂಡಿದ್ದೆನೊ, ಅದಕ್ಕಿಂತ ಹೆಚ್ಚಿನದನ್ನು ಸಾಧಿಸಿದ ತೃಪ್ತಿಯಿದೆ’ ಎಂದು ಹಿಂದೊಮ್ಮೆ ಅವರು ಹೇಳಿದ್ದರು.

ಮಂದಾರಿನ್ ಭಾಷೆಯನ್ನು ಸರಾಗವಾಗಿ ಮಾತನಾಡುತ್ತಿದ್ದ ಅವರು ಚೀನಾದಲ್ಲೂ ಜನಪ್ರಿಯ. ಮಂದಾರಿನ್ ಚೀನಾದ ಪ್ರಮುಖ ಭಾಷೆಯಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಅವರ ಬಗ್ಗೆ ಮೆಚ್ಚುಗೆಯ ಮಹಾಪೂರ ಹರಿದುಬಂದಿದೆ. ‘ನೈಜ ದಂತಕತೆ ಬ್ಯಾಡ್ಮಿಂಟನ್ಗೆ ವಿದಾಯ ಹೇಳಿದ್ದಾರೆ’ ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ.

‘ಅವರು ಅಂಕಣದಲ್ಲಷ್ಟೇ ರಾಜನಾಗಿ ಮೆರೆಯಲಿಲ್ಲ. ಅವರು ತಮ್ಮ ವಿನೀತ ಮತ್ತು ಸ್ನೇಹದ ಮನೋಭಾವದಿಂದ ಅಸಂಖ್ಯಾತ ಹೃದಯಗಳನ್ನು ಗೆದ್ದಿದ್ದಾರೆ’ ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಒಂದೂ ಗೇಮ್ ಬಿಟ್ಟುಕೊಡದೇ ಅವರು ಟೋಕಿಯೊದಲ್ಲಿ (2021) ಚಿನ್ನ ಗೆದ್ದಿದ್ದರು. ಚೀನಾದ ಚೆನ್ ಲಾಂಗ್ ಅವರನ್ನು ಫೈನಲ್ನಲ್ಲಿ ಸೋಲಿಸಿ 1996ರ ನಂತರ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಚಿನ್ನ ಗೆದ್ದ ಏಷ್ಯಾ ಖಂಡದ ಹೊರಗಿನ ಮೊದಲ ಆಟಗಾರ ಎನಿಸಿದ್ದರು.

ಚೆನ್ ವಿರುದ್ಧ ಗೆಲುವಿನ ಪಾಯಿಂಟ್ ಬಂದಾಗ ಅವರು ಭಾವೊದ್ವೇಗಕ್ಕೆ ಒಳಗಾಗಿದ್ದರು. ನಂತರ ಸುಧಾರಿಸಿಕೊಂಡು ಡೆನ್ಮಾರ್ಕ್ನ ರಾಜಕುಮಾರ ಫ್ರೆಡ್ರಿಕ್ ಅವರ ಕರೆ ಸ್ವೀಕರಿಸಿದ್ದರು.

ನಾಲ್ಕು ವರ್ಷಗಳ ನಂತರ ಪ್ಯಾರಿಸ್ನಲ್ಲಿ ಅವರು ತಮ್ಮ ಹೀರೊ ಲಿನ್ ಡಾನ್ ಅವರನ್ನು ಸೋಲಿಸಿ ಸತತ ಒಲಿಂಪಿಕ್ಸ್ಗಳಲ್ಲಿ ಚಿನ್ನ ಜಯಿಸಿದ್ದರು. ಆದರೆ ನಂತರ ಅವರಿಗೆ ಗಾಯದ ಸಮಸ್ಯೆಗಳು ಕಾಡತೊಡಗಿದವು.

ವರ್ಷಾಂತ್ಯದ ಬಿಡಬ್ಲ್ಯುಎಫ್ ವಿಶ್ವ ಟೂರ್ ಫೈನಲ್ಸ್ನಲ್ಲಿ ಸತತ ಮೂರು ಬಾರಿ (2021 ರಿಂದ 2023) ಚಾಂಪಿಯನ್ ಆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.