ಹಾರ್ಸೆನ್ಸ್, ಡೆನ್ಮಾರ್ಕ್ (ಪಿಟಿಐ): ಅಮೋಘ ಆಟವಾಡಿದ ಭಾರತದ ಮಹಿಳಾ ಶಟ್ಲರ್ಗಳು ಊಬರ್ ಕಪ್ ಬ್ಯಾಡ್ಮಿಂಟನ್ ಫೈನಲ್ಸ್ ಟೂರ್ನಿಯ ಎ ಗುಂಪಿನ ಪಂದ್ಯದಲ್ಲಿ ಶನಿವಾರ 4–1ರಿಂದ ಉಕ್ರೇನ್ ತಂಡವನ್ನು ಸೋಲಿಸಿತು. ಅದರೊಂದಿಗೆ ಕ್ವಾರ್ಟರ್ಫೈನಲ್ ಪ್ರವೇಶಿಸುವ ಅವಕಾಶವನ್ನು ಜೀವಂತವಾಗಿಟ್ಟುಕೊಂಡಿತು.

ಉದಯೋನ್ಮುಖ ಆಟಗಾರ್ತಿ ಉನ್ನತಿ ಹೂಡಾ ಅವರು ಸಿಂಗಲ್ಸ್ನ ಮೊದಲ ಪಂದ್ಯದಲ್ಲಿ 21–19, 22–20ರಿಂದ ಪೊಲಿನಾ ಬುಹ್ರೊವಾ ವಿರುದ್ಧ ಗೆದ್ದು 1–0 ಮುನ್ನಡೆ ಒದಗಿಸಿದರು. ಸಿಂಗಲ್ಸ್ನ ಎರಡನೇ ಪಂದ್ಯದಲ್ಲಿ ತನ್ವಿ ಶರ್ಮಾ21–12, 17–21, 21–10ರಿಂದ ಯೆವ್ಹೆನಿಯಾ ಕಾಂಟೆಮಿರ್ ಅವರನ್ನು ಮಣಿಸಿ, ಮುನ್ನಡೆಯನ್ನು 2–0ಗೆ ಹಿಗ್ಗಿಸಿದರು. ದೇವಿಕಾ ಸಿಹಾಗ್ ಅವರು ಸಿಂಗಲ್ಸ್ನ ಮೂರನೇ ಪಂದ್ಯದಲ್ಲಿ 23–21, 21–13ರಿಂದ ಮರಿಯಾ ಸ್ಟೊಲಿಯಾರೆಂಕೊ ವಿರುದ್ಧ ಜಯಿಸಿದರು.

ಆದರೆ, ಡಬಲ್ಸ್ನ ಮೊದಲ ಪಂದ್ಯದಲ್ಲಿ ಕವಿಪ್ರಿಯಾ ಸೆಲ್ವಂ– ಸಿಮ್ರನ್ ಸಿಂಘಿ ಜೋಡಿ 11–21, 17–21ರಿಂದ ಬುಹ್ರೊವಾ– ಕಾಂಟೆಮಿರ್ ವಿರುದ್ಧ ಪರಾಭವಗೊಂಡಿತು. ಡಬಲ್ಸ್ ಎರಡನೇ ಪಂದ್ಯದಲ್ಲಿ ಪಿ.ವಿ.ಸಿಂಧು ಅವರು ತನಿಷಾ ಕ್ರ್ಯಾಸ್ಟೊ ಜೊತೆಗೂಡಿ ಆಡಿದರು. ಈ ಜೋಡಿ 21–18, 21–15ರಿಂದ ನೇರ ಗೇಮ್ಗಳಲ್ಲಿ ಸೋಫಿಯಾ ಲವರೋವಾ– ಸ್ಟೊಲಿಯಾರೆಂಕೊ ಅವರನ್ನು ಸೋಲಿಸಿತು.

ಭಾರತ ಮೊದಲ ಪಂದ್ಯದಲ್ಲಿ 2–3ರಿಂದ ಡೆನ್ಮಾರ್ಕ್ ವಿರುದ್ಧ ಪರಾಭವಗೊಂಡಿತ್ತು. ಭಾರತವು ಸೋಮವಾರ ನಡೆಯಲಿರುವ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೀನಾ ತಂಡವನ್ನು ಎದುರಿಸಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-51-375978800

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.