ಪಾಫೋಸ್ : ಆರ್.ಪ್ರಜ್ಞಾನಂದ ಅವರಿಗೆ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯ ಓಪನ್ ವಿಭಾಗದಲ್ಲಿ ಪ್ರಶಸ್ತಿಯ ಅವಕಾಶ ಕಮರಿಹೋಗಿದೆ. ಆದರೆ ಅವರ ಅಕ್ಕ ಆರ್. ವೈಶಾಲಿ ಅವರು ಮಹಿಳೆಯರ ವಿಭಾಗದಲ್ಲಿ ಹತ್ತು ಸುತ್ತುಗಳ ಬಳಿಕ ಏಕಾಂಗಿಯಾಗಿ ಅಗ್ರಸ್ಥಾನದಲ್ಲಿದ್ದಾರೆ.

ಶುಕ್ರವಾರ ಟೂರ್ನಿಗೆ ವಿಶ್ರಾಂತಿ ದಿನವಾಗಿದ್ದು, ಶನಿವಾರ 11ನೇ ಸುತ್ತಿನ ಪಂದ್ಯಗಳು ನಡೆಯಲಿವೆ. ಆರು ಅಂಕ ಗಳಿಸಿರುವ ವೈಶಾಲಿ ಮುಂದಿನ ಸುತ್ತಿನಲ್ಲಿ ರಷ್ಯಾದ ಅಲೆಕ್ಸಾಂಡ್ರಾ ಗೊರ್ಯಾಚ್ಕಿನಾ ಅವರನ್ನು ಎದುರಿಸಲಿದ್ದು ಪ್ರಶಸ್ತಿ ಅವಕಾಶ ಬಲಪಡಿಸಿಕೊಳ್ಳುವ ಅವಕಾಶ ಹೊಂದಿದ್ದಾರೆ.

ಇನ್ನು ನಾಲ್ಕು ಸುತ್ತುಗಳಷ್ಟೇ ಉಳಿದಿವೆ. ಈ ಟೂರ್ನಿ ಗೆದ್ದವರು ವರ್ಷದ ಕೊನೆಯಲ್ಲಿ, ವಿಶ್ವ ಚಾಂಪಿಯನ್ ಪಟ್ಟಕ್ಕೆ ಚಾಲೆಂಜರ್ ಆಗುವ ಅವಕಾಶ ಪಡೆಯುತ್ತಾರೆ. ಓಪನ್ ವಿಭಾಗದಲ್ಲಿ ಗೆದ್ದವರು ಭಾರತದ ಗುಕೇಶ್ ಅವರಿಗೆ, ಮಹಿಳೆಯರ ವಿಭಾಗದಲ್ಲಿ ಗೆದ್ದವರು ಚೀನಾದ ಜು ವೆನ್ಜುನ್ ಅವರಿಗೆ ಸವಾಲು ಹಾಕಲಿದ್ದಾರೆ.

ವೈಶಾಲಿ ಅವರಿಗಿಂತ ಅರ್ಧ ಅಂಕ ಹಿಂದಿರುವ ಉಕ್ರೇನ್ನ ಅನ್ನಾ ಮುಝಿಚುಕ್ (5.5) ಎರಡನೇ ಸ್ಥಾನದಲ್ಲಿದ್ದಾರೆ. ರಷ್ಯಾದ ಕ್ಯಾತರಿನಾ ಲಾಗ್ನೊ, ಅಲೆಕ್ಸಾಂಡ್ರಾ ಗೊರ್ಯಾಚ್ಕಿನಾ ಮತ್ತು ಕಜಾಕಸ್ತಾನದ ಬಿಬಿಸಾರಾ ಅಸುನ್ಬಯೇವಾ ಅವರು ತಲಾ ಐದು ಪಾಯಿಂಟ್ಸ್ ಕಲೆಹಾಕಿದ್ದಾರೆ.

ಸಿಂದರೋವ್ ಪ್ರಾಬಲ್ಯ: ‘ಓಪನ್’ ವಿಭಾಗದಲ್ಲಿ ಉಜ್ಬೇಕಿಸ್ತಾನದ ಯುವತಾರೆ ಜಾವೊಖಿರ್ ಸಿಂದರೋವ್ ಅವರು 10 ಸುತ್ತುಗಳಿಂದ ಎಂಟು ಅಂಕ ಗಳಿಸಿ ಪ್ರಾಬಲ್ಯ ಮೆರೆದಿದ್ದಾರೆ. ಆರು ಗೆದ್ದು, ನಾಲ್ಕು ಡ್ರಾ ಮಾಡಿಕೊಂಡಿದ್ದಾರೆ. ಕೊನೆಯ ನಾಲ್ಕು ಸುತ್ತುಗಳಲ್ಲಿ ಆಟದ ಮಟ್ಟದಲ್ಲಿ ಕುಸಿತ ಕಾಣದಿದ್ದರೆ ವಿಶ್ವಕಪ್ ವಿಜೇತ ಆಟಗಾರ ಇಲ್ಲೂ ಚಾಂಪಿಯನ್ ಆಗುವುದು ಖಚಿತ.

ಅವರಿಗೆ ಇಲ್ಲಿ ಸಮೀಪದ ಸ್ಪರ್ಧಿಯೆಂದರೆ ಡಚ್ ಗ್ರ್ಯಾಂಡ್ಮಾಸ್ಟರ್ ಅನಿಶ್ ಗಿರಿ. ಅವರು 6 ಅಂಕ ಗಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-51-216162652

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.